Advertisement

ದತ್ತು ಶಾಲೆಗೆ ಬೇಕಿದೆ ಕಾಯಕಲ್ಪ

05:45 PM Dec 25, 2020 | Suhan S |

ದಾವಣಗೆರೆ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಚನ್ನಗಿರಿ ವಿಧಾನಸಭೆ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ದತ್ತು ಪಡೆದಿದ್ದಾರೆ. ಚನ್ನೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎ.ಕೆ. ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಹಾಗೂ ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಅನ್ನುಶಾಸಕರು ದತ್ತು ಪಡೆದುಕೊಂಡಿದ್ದಾರೆ. ದತ್ತು ಪಡೆದ ಈಮೂರು ಶಾಲೆಗಳ ಅಭಿವೃದ್ಧಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಳಸಿಕೊಳ್ಳಲಾಗುತ್ತಿದೆ.

Advertisement

ಈ ಶಾಲೆಗಳಲ್ಲಿ ಕೈಗೊಳ್ಳಬಹುದಾದ ಅಗತ್ಯ ಸೌಲಭ್ಯಗಳಿಗೆ ಬೇಕಾಗಬಹುದಾದ ಅಂದಾಜುಪಟ್ಟಿ ತಯಾರಿಸಲಾಗಿದೆ. ಚನ್ನೇಶಪುರ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಗೆ 27 ಲಕ್ಷ ರೂ., ಎ.ಕೆ.ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ11 ಲಕ್ಷ ರೂ., ಸಂತೇಬೆನ್ನೂರಿನ ಕರ್ನಾಟಕಪಬ್ಲಿಕ್‌ ಸ್ಕೂಲ್‌ಗೆ 50 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.ಒಟ್ಟು 88 ಲಕ್ಷ ರೂ.ಗಳ ವೆಚ್ಚದಲ್ಲಿ ಶಾಸಕರು ದತ್ತುಪಡೆದ ಮೂರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದಾರೆ.

ಎ.ಕೆ. ಕಾಲೋನಿ ಸ.ಕಿ. ಪ್ರಾ ಶಾಲೆ: 11ಲಕ್ಷ ರೂ. :  ತಾಲೂಕಿನ ಎ.ಕೆ. ಕಾಲೋನಿ ಸ.ಕಿ.ಪ್ರಾ ಶಾಲೆಯಲ್ಲಿ 1-5ನೇ ತರಗತಿ ನಡೆಯುತ್ತಿದ್ದು, 80ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಪ್ರಸ್ತುತ ಇಲ್ಲಿ ಒಂದೇ ಕೊಠಡಿಇದ್ದು ಮಕ್ಕಳಿಗೆ ಹತ್ತಿರದ ದೇವಸ್ಥಾನ, ಕಲ್ಯಾಣ ಮಂಟಪದಲ್ಲಿ ಪಾಠಮಾಡಲಾಗುತ್ತಿದೆ. ಈ ಮೊದಲು ಶಾಲೆಗೆ ನಾಲ್ಕು ಕೊಠಡಿಗಳು ಇದ್ದವು.ಇದರಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮೂರು ಕೊಠಡಿಗಳನ್ನು ನೆಲಸಮಮಾಡಲಾಗಿದೆ. ಎರಡು ಕೊಠಡಿಗಳು ನಿರ್ಮಾಣ ಹಂತದಲ್ಲಿವೆ. ಪ್ರಸ್ತುತಶಾಸಕರ 11ಲಕ್ಷ ರೂ.ಗಳ ಅನುದಾನದಲ್ಲಿ ಕೊಠಡಿ ಮರು ನಿರ್ಮಾಣ ಮಾಡಲು ಅಂದಾಜು ಪಟ್ಟಿ ತಯಾರಿಸಲಾಗಿದೆ.

ಶಾಲೆಗೆ ಕೊಠಡಿ ಸಮಸ್ಯೆ ಕಾಡುತ್ತಿದೆ. ಪ್ರಸ್ತುತ ಪಾಠ ಮಾಡಲು ಒಂದೇ ಕೊಠಡಿ ಇದೆ. ಈಗ ನಿರ್ಮಾಣವಾಗುತ್ತಿರುವಕೊಠಡಿಗಳ ಜತೆಗೆ ಇನ್ನೂಎರಡು ಕೊಠಡಿಗಳ ಅವಶ್ಯಕತೆ ಇದೆ. ಅಡುಗೆ ಕೋಣೆಯೂ ಶಿಥಿಲಾವಸ್ಥೆಯಲ್ಲಿದ್ದು ಮರು ನಿರ್ಮಾಣವಾಗಬೇಕಿದೆ. 25-30 ಡೆಸ್ಕ್ ಸಹ ಬೇಕಾಗಿವೆ. -ಚಂದ್ರಪ್ಪ ಎಂ., ಮುಖ್ಯ ಶಿಕ್ಷಕರು

ಸಂತೆಬೆನ್ನೂರು ಪಬ್ಲಿಕ್‌ ಸ್ಕೂಲ್‌: 50ಲಕ್ಷ ರೂ. :  ಸಂತೆಬೆನ್ನೂರು ಸರ್ಕಾರಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ 1200 ಮಕ್ಕಳಿದ್ದು, ಕೊಠಡಿ ಸಮಸ್ಯೆ ಕಾಡುತ್ತಿದೆ. ಇಲ್ಲಿ ಪ್ರಸ್ತುತ 13 ಕೊಠಡಿಗಳಿದ್ದು ಇವುಗಳಲ್ಲಿನಾಲ್ಕು ಶಿಥಿಲವಾಗಿವೆ. ಶಾಲೆಗೆಪ್ರಯೋಗಾಲಯ, ಗ್ರಂಥಾಲಯ,ಶಿಕ್ಷಕರ ಕೊಠಡಿ, ಪ್ರಾಚಾರ್ಯ ಹಾಗೂಉಪಪ್ರಾಚಾರ್ಯರ ಕೊಠಡಿಗಳನಿರ್ಮಾಣ ಆಗಬೇಕಾಗಿದೆ. ಪ್ರಸ್ತುತಶಾಸಕರು 50 ಲಕ್ಷ ರೂ.ಗಳ ಅನುದಾನ ನಿಗದಿಪಡಿಸಿದ್ದು ಇದರಲ್ಲಿ ಸಭಾಭವನ,ಶಾಲಾ ಕೊಠಡಿ ನಿರ್ಮಾಣಕ್ಕೆಕ್ರಿಯಾಯೋಜನೆ ತಯಾರಿಸಲಾಗಿದೆ.

Advertisement

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೊಠಡಿಗಳ ಸಮಸ್ಯೆ ಹೆಚ್ಚಾಗಿದೆ. ಉಳಿದಂತೆ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯಗಳ ನಿರ್ಮಾಣವೂ ಆಗಬೇಕಿದೆ. – ಜಯಣ್ಣ ಎಂ.ಎನ್‌., ಉಪ ಪ್ರಾಚಾರ್ಯರು

ಚನ್ನೇಶಪುರ ಸ.ಹಿ.ಪ್ರಾ. ಶಾಲೆ: 27ಲಕ್ಷ ರೂ. : ಚನ್ನೇಶಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1-7ನೇತರಗತಿಯವರೆಗೆ 84ಕ್ಕಿಂತ ಹೆಚ್ಚುವಿದ್ಯಾರ್ಥಿಗಳಿದ್ದು, ಶೌಚಾಲಯ ಸಮಸ್ಯೆ ಇದೆ. ಶಾಲೆಯಲ್ಲಿ ಈಗಿರುಶೌಚಾಲಯಗಳು ಹಾಳಾಗಿದ್ದು ಮರು  ನಿರ್ಮಾಣದ ಅಗತ್ಯವಿದೆ. ಬಾಲಕರಿಗೆಹಾಗೂ ಬಾಲಕಿಯರಿಗೆ ಪ್ರತ್ಯೇಕತಲಾ ಎರಡೆರಡು ಶೌಚಾಲಯಕಟ್ಟಡದ ಅಗತ್ಯತೆ ಇದೆ. ಶಾಸಕರುನಿಗದಿಪಡಿಸಿದ 27 ಲಕ್ಷ ರೂ.ಗಳ ಅನುದಾನದಲ್ಲಿ ಎರಡು ಹೆಚ್ಚುವರಿಕೊಠಡಿ ಹಾಗೂ ಸುಣ್ಣ ಬಣ್ಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ.

ಶಾಲೆಯಲ್ಲಿ ಮುಖ್ಯವಾಗಿ ಶೌಚಾಲಯ ನಿರ್ಮಾಣ ಆಗಬೇಕಾಗಿದ್ದು, ಒಟ್ಟುನಾಲ್ಕು ಶೌಚಾಲಯ ಆಗಬೇಕಾಗಿದೆ. ಇನ್ನುಳಿದಂತೆ ಹೆಚ್ಚುವರಿ ಕೊಠಡಿ ಸೇರಿದಂತೆ ಇನ್ನಿತರ ಸೌಲಭ್ಯಕ್ಕಾಗಿ ಕ್ರಿಯಾಯೋಜನೆ ತಯಾರಿಸಿ ಕಳುಹಿಸಲಾಗಿದೆ. -ನಾಗರಾಜ ಕೆ.ಸಿ., ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

ನನ್ನ ಕ್ಷೇತ್ರದಲ್ಲಿ ಮೂರು ಸರ್ಕಾರಿ ಶಾಲೆಗಳನ್ನುಅಭಿವೃದ್ಧಿಪಡಿಸಲು ದತ್ತುಪಡೆದಿದ್ದೇನೆ. ಪ್ರಸ್ತುತ ದತ್ತುಶಾಲೆಗಳ ಅಭಿವೃದ್ಧಿಗೆ 88 ಲಕ್ಷ ರೂ.ಗಳ ಅನುದಾನನಿಗದಿಪಡಿಸಿದ್ದು ಬೇರೆ ಯೋಜನೆಗಳ ಅಡಿಯೂಅನುದಾನ ಒದಗಿಸಿಕೊಟ್ಟು ಇನ್ನಷ್ಟು ಸೌಲಭ್ಯ ಕಲ್ಪಿಸಿ ದತ್ತು ಶಾಲೆಗಳನ್ನು ಮಾದರಿಯನ್ನಾಗಿಸುವ ಗುರಿ ಇದೆ. -ಮಾಡಾಳ್‌ ವಿರೂಪಾಕ್ಷಪ್ಪ, ಶಾಸಕರು, ಚನ್ನಗಿರಿ ಕ್ಷೇತ್ರ

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next