ನವದೆಹಲಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಭಾನುವಾರ ರಾಹುಲ್ ಗಾಂಧಿ ವಿರುದ್ಧ ಮುಸುಕಿನ ಗುದ್ದಾಟಕಿಳಿದಿದ್ದು,ಅಮೇಥಿ ಲೋಕಸಭಾ ಕ್ಷೇತ್ರದೊಂದಿಗೆ ಕೌಟುಂಬಿಕ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿಕೊಂಡವರು ಸಂಸತ್ತಿನಲ್ಲಿ ಅದರ ಅಭಿವೃದ್ಧಿಯ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ ಎಂದು ಪರೋಕ್ಷ ಟಾಂಗ್ ನೀಡಿದ್ದಾರೆ.
ರಾಹುಲ್ ಗಾಂಧಿಯ ಹೆಸರು ಉಲ್ಲೇಖಿಸದೆ, ಅಮೇಠಿ ಹಲವಾರು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಆದರೆ ಕ್ಷೇತ್ರದಿಂದ ಆಯ್ಕೆಯಾದ ವ್ಯಕ್ತಿ ಅವುಗಳ ಬಗ್ಗೆ ಮೌನವಾಗಿದ್ದರು ಎಂದಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರದ ಜನರು ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತರಾಗಿದ್ದರು. ಅಮೇಥಿಯು ಹಲವು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸಿತು, ಆದರೆ ಅಮೇಥಿ ಜನರು ಯಾರನ್ನು ಚುನಾಯಿಸಿ ಸದನಕ್ಕೆ ಕಳುಹಿಸಿದ್ದಾರೋ ಅವರು ಮೌನವಾಗಿ ಕುಳಿತುಕೊಂಡಿದ್ದರು ಎಂದು ತಿಲೊಯಿ ಯಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಕೆಲಸ ಮಾಡುವ ವಿಧಾನದಿಂದಾಗಿ ತಿಲೋಯ್‌ನಲ್ಲಿ ಬಸ್ ನಿಲ್ದಾಣವು ಒಂಬತ್ತು ತಿಂಗಳ ಅವಧಿಯಲ್ಲಿ ಸಿದ್ಧವಾಗಿದೆ. ತಿಲೋಯ್‌ನಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ, ಆಮ್ಲಜನಕ ಘಟಕವನ್ನು ಸಹ ಸ್ಥಾಪಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು.
ಸಚಿವೆ ಸ್ಮೃತಿ ಅವರು ತಿಲೋಯಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮೇಳವನ್ನು ಉದ್ಘಾಟಿಸಿದರು. ರೋಗಿಗಳನ್ನು ಭೇಟಿ ಮಾಡಿ ಅಲ್ಲಿನ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು
ಅಮೇಥಿಯಲ್ಲಿ ಸ್ಮೃತಿ ಇರಾನಿ 2019 ರ ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಆಗಿನ ಸಂಸದ ಗಾಂಧಿಯನ್ನು ಸೋಲಿಸಿದ್ದರು.