Advertisement
ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಮೀಸಗಾನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ವೀಕ್ಷಣೆ ಹಾಗೂ ಗ್ರಾಪಂ ಶೇ. 25ರ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಫ್ಯಾನ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮೀಸಗಾನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯದ ಬಗ್ಗೆ ಮನವಿ ಮಾಡಿದ್ದು, ಈಗಾಗಲೇ ಬಿಎಂಟಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.
ನೆಲಮಂಗಲದಲ್ಲಿ ಮೇ 13ರಲ್ಲಿ ಜನತಾ ಜಲಧಾರೆ ಸಮಾರೋಪ ಸಮಾರಂಭವಿದ್ದು, ಹಳ್ಳಿಗಳಿಗೆ ಬಸ್ ಕಳುಹಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಬೇಕು. 2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
Related Articles
Advertisement
ಹೆಚ್ಚಿನ ಅನುದಾನ: ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ ಮಾತನಾಡಿ, ಮೀಸಗಾನಹಳ್ಳಿ ಗ್ರಾಮಕ್ಕೆ 55 ಲಕ್ಷ ರೂ.ಗಳನ್ನು ಒಂದೇ ಗ್ರಾಮಕ್ಕೆ ನೀಡಿದ್ದಾರೆ. ಈ ಹಿಂದೆ ಈ ಗ್ರಾಮಗಳಿಗೆ 10 ಲಕ್ಷ ರೂ. ಬಂದರೆ ಹೆಚ್ಚು ಆಗುತ್ತಿತ್ತು. ನಾರಾಯಣಸ್ವಾಮಿ ಶಾಸಕರಾದ ಮೇಲೆ ಹೆಚ್ಚಿನ ಅನುದಾನ ತರುತ್ತಿದ್ದಾರೆ. 400 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ತಾಲೂಕಿಗೆ ತಂದು ಅಭಿವೃದ್ಧಿಪಡಿಸಿದ್ದಾರೆ. ಪ್ರತಿ ಗ್ರಾಮದಲ್ಲೂ ಶಾಸಕರು ಕಾಂಕ್ರೀಟ್ ರಸ್ತೆ ಹಾಕಿಸಿದ್ದಾರೆ ಎಂದರು.
ಕಾಂಕ್ರೀಟ್ ರಸ್ತೆ ನಿರ್ಮಾಣ: ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಚಂದ್ರಿಕಾ ಮಾತನಾಡಿ, ಕಾರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ಶಾಸಕರು ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೂ 50 ಲಕ್ಷ ರೂ.ವರೆಗೆ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ.
ಗ್ರಾಪಂ ಶೇ.25ರ ಅನುದಾನದಲ್ಲಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಫ್ಯಾನ್ ನೀಡಲಾಗುತ್ತದೆ ಎಂದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಗ್ರಾಪಂ ಸದಸ್ಯ ಚಂದ್ರಶೇಖರ್, ತಾಲೂಕು ಸೊಸೈಟಿ ನಿರ್ದೇಶಕ ಯಂಬ್ರಹಳ್ಳಿ ರವಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ, ಗ್ರಾಪಂ ಸದಸ್ಯೆ ಮಮತಾ, ಕೇಶವಮೂರ್ತಿ, ಪಿಡಿಒ ಕವಿತಾ, ಗ್ರಾಪಂ ಮಾಜಿ ಸದಸ್ಯ ಶಂಕರ್, ವಿಎಸ್‌ಎಸ್‌ಎನ್ ಅಧ್ಯಕ್ಷ ಮಂಜುನಾಥ್, ಮುಖಂಡ ರಬ್ಬನಹಳ್ಳಿ ಪ್ರಭಾಕರ್, ಬೈರೇಗೌಡ, ಟಿ.ಆಂಜಿನಪ್ಪ, ರಾಜಣ್ಣ, ನಾರಾಯಣಸ್ವಾಮಿ, ತಿಮ್ಮಯ್ಯ, ಮಾರೇಗೌಡ, ಮುನಿಕೆಂಪಣ್ಣ ಹಾಗೂ ಮತ್ತಿತರರು ಇದ್ದರು.
ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ಗ್ರಾಮಗಳು ಸರ್ವತೋಮುಖ ಅಭಿವೃದ್ಧಿ ಹೊಂದಬೇಕು. ಪ್ರತಿ ಗ್ರಾಮಕ್ಕೂ 50 ಲಕ್ಷದಿಂದ ಕೋಟಿ ರೂ. ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಂದ ವಿಶೇಷ ಅನುದಾನವನ್ನು ತಾಲೂಕಿಗೆ ತಂದು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಯಿತು. ರಾಜಕೀಯದಲ್ಲಿ ಕೆಲವು ವ್ಯತ್ಯಾಸ ಗಳಿಂದ ಸರ್ಕಾರ ಪತನವಾಯಿತು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು.