Advertisement

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

12:07 PM Oct 30, 2020 | keerthan |

ಕುಕ್ಕೆ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಹೊಸದಾಗಿ ಅಭಿವೃದ್ದಿ ಸಮಿತಿಯನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

ಕುಕ್ಕೆ ದೇವಸ್ಥಾನದಲ್ಲಿ ಈ ಹಿಂದೆ ಒಂಬತ್ತು ಮಂದಿ ಸದಸ್ಯರ ವ್ಯವಸ್ಥಾಪನಾ ಸಮಿತಿ ಇದ್ದು, ಅದರ ಕಾರ್ಯಾವಧಿ ಪೂರ್ಣಗೊಂಡು ಒಂದು ವರ್ಷದ ನಂತರ ಇದೀಗ ಹೊಸದಾಗಿ ಅಭಿವೃದ್ದಿ ಸಮಿತಿಯನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಐದು ಮಂದಿ ಸದಸ್ಯರು ಒಳಗೊಂಡಿದ್ದಾರೆ.

ಪಿ.ಜಿ.ಎಸ್. ಪ್ರಸಾದ್, ಕೃಷ್ಣ ಶೆಟ್ಟಿ, ಪ್ರಸನ್ನ ಮತ್ತು ಎಸ್. ಮೋಹನ್ ರಾಮ ಮತ್ತು ವನಜಾ ಭಟ್ ಅವರು ಸದಸ್ಯರಾಗಿದ್ದು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಮಿತಿಯ ಕಾರ್ಯದರ್ಶಿಯಾಗಿರಲಿದ್ದಾರೆ.

ಕ್ಷೇತ್ರದಲ್ಲಿ ಈ ಹಿಂದೆ ಒಂಬತ್ತು ಮಂದಿ ಸದ್ಯರ ವ್ಯವಸ್ಥಾಪನಾ ಸಮಿತಿ ಕಾರ್ಯ ನಿರ್ವಹಿಸುತ್ತಿತ್ತು. ಅದರ ಕಾರ್ಯಾವಧಿ ವರ್ಷಗಳ ಹಿಂದೆಯೇ ಅಂತ್ಯವಾಗಿತ್ತು. ಆದರೆ ನಂತರ ವ್ಯವಸ್ಥಾಪನಾ ಸಮಿತಿಯನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ವ್ಯವಸ್ಥಾಪನಾ ಸಮಿತಿಯ ಬದಲಿಗೆ ಅಭಿವೃದ್ದಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

ಅಭಿವೃದ್ದಿ ಸಮಿತಿಯ ಅಧ್ಯಕ್ಷತೆಯನ್ನು ಸ್ಥಳಿಯ ಶಾಸಕರಿಗೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಆದೇಶದಲ್ಲಿ ಶಾಸಕರ ಹೆಸರಿಲ್ಲದ ಕಾರಣ ಸಮಿತಿಯಲ್ಲಿರುವ ಎಸ್. ಮೋಹನ್ ರಾಮ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next