Advertisement
ಸಮೀಪದ ಸವದತ್ತಿ ತಾಲೂಕು ಆಚಮಟ್ಟಿ ಗ್ರಾಮದಲ್ಲಿ 11.15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು, ನಂತರ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
Related Articles
Advertisement
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ಮಾತನಾಡಿ, ಸವದತ್ತಿ ಮಹಾನಗರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ 100 ಕೋಟಿ ರೂ. ವೆಚ್ಚದ ಬೃಹತ್ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಪ್ರಧಾನಮಂತ್ರಿಗಳ ಸಾಕಷ್ಟು ಯೋಜನೆಗಳನ್ನು ನಮ್ಮ ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಜಮಖಂಡಿ, ಉಪಾಧ್ಯಕ್ಷ ಮಹಾಂತೇಶ ರಾಯನಗೌಡ್ರ, ಅಣ್ಣಪ್ಪಗೌಡ ಪಾಟೀಲ, ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಸೊಬರದ ವೇದಿಕೆಯಲ್ಲಿದ್ದರು. ಗುತ್ತಿಗೆದಾರ ಬಿ.ಎಂ.ಪಾಟೀಲ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ನರಗುಂದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಉಮೇಶಗೌಡ ಸಿ. ಪಾಟೀಲ ಅವರನ್ನು ಸಚಿವರ ಹುಟ್ಟೂರಾದ ಆಚಮಟ್ಟಿ ಗ್ರಾಮಸ್ಥರು ಸತ್ಕರಿಸಿದರು. ವಿವಿಧ ಕಾಮಗಾರಿಗೆ ಭೂಮಿಪೂಜೆ ಸವದತ್ತಿ ರಾಜ್ಯ ಹೆದ್ದಾರಿಯ ಅಚಮಟ್ಟಿ ಕ್ರಾಸ್ ನಿಂದ ಚುಳಕಿ ಗ್ರಾಮದವರೆಗೆ 9.90 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ, 1 ಕೋಟಿ ರೂ. ವೆಚ್ಚದಲ್ಲಿ ಉಡಚಮ್ಮ ದೇವಸ್ಥಾನ ಜೀರ್ಣೋದ್ಧಾರ, 25 ಲಕ್ಷ ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಸಚಿವ ಸಿ.ಸಿ.ಪಾಟೀಲ ಭೂಮಿಪೂಜೆ ನೆರವೇರಿಸಿದರು.