Advertisement
ಚಿಮ್ಮಡ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಲಿಂಗೈಕ್ಯ ಶ್ರೀ ಪರಯ್ಯ ತೆಳಗಿನಮನಿ ಹಾಗೂ ಶ್ರೀಮತಿ ಭಾಗೀರಥಿ ತೆಳಗಿನಮನಿ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ, ಪ್ರತಿ ತಿಂಗಳ ಪುಸ್ತಕಾವಲೋಕನದಲ್ಲಿ ನಮ್ಮ ಭಾಗದ ಸಾಹಿತ್ಯಕ್ಕೂ ಆದ್ಯತೆ ಇರಲಿ ಎಂದರು.
Related Articles
Advertisement
ಮಹಾಲಿಂಗಪುರ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಇಲಾಹಿ ಜಮಖಂಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಚಿಮ್ಮಡ ಗ್ರಾಮದ ಗಣ್ಯರಾದ ಎಸ್ .ಎ. ಪಾಟೀಲ, ಮಹಾಲಿಂಗಪುರ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ವೇದಿಕೆಯಲ್ಲಿದ್ದರು.
ರಬಕವಿ-ಬನಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ಕಾರ್ಯಗಳ ಯಶಸ್ವಿಗೆ ಪೂಜ್ಯರ, ಹಿರಿಯ ಸಾಹಿತಿಗಳ, ಮಾರ್ಗದರ್ಶನ ಪಡೆಯಲಾಗುತ್ತಿದೆ ಎಂದರು.
ದತ್ತಿನಿಧಿ, ಸಾಹಿತ್ಯ ಸಮ್ಮೇಳನ, ಪುಸ್ತಕ ಅವಲೋಕನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗ್ರಾಮೀಣ ಭಾಗದಲ್ಲಿಯೂ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾಡಪ್ಪ ಬೀಳಗಿ ಪ್ರಾರ್ಥಿಸಿದರು. ತೇರದಾಳ ವಲಯ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ ಸ್ವಾಗತಿಸಿದರು. ಕೆ.ಎಸ್. ರಂಗಸ್ವಾಮಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಮಹೇಶ ಮನ್ನಯ್ಯನವರ ಮಠ ವಂದಿಸಿದರು.
ಚಿಮ್ಮಡ ಗ್ರಾಮದ ಗಣ್ಯರಾದ ಪಿ.ಆರ್. ಪಾಲಭಾವಿ, ಹಿರಿಯ ಸಾಹಿತಿಗಳಾದ ಜಿ.ಎಸ್. ವಡಗಾವಿ, ಎಸ್. ಆರ್ ರಾವಳ, ಸದಾಶಿವ ದೊಡ್ಡಪ್ಪಗೋಳ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ದಾಕ್ಷಯಣಿ ಮಂಡಿ, ಎಸ್.ಎಂ. ಅಣ್ಣಿಗೇರಿ, ಶಂಕರ ಶಿರೋಳ, ಶ್ರೀಕಾಂತ ಚಿಂಚಖಂಡಿ, ಹನಿಫ್ ಚಿಕ್ಕೋಡಿ, ಬಸವಪ್ರಭು ತೆಳಗಿನಮನಿ ಇನ್ನಿತರರು ಪಾಲ್ಗೊಂಡಿದ್ದರು.