Advertisement

ಅಭಿವೃದ್ದಿ ಮಾಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಲಕ್ಷ್ಮಣ

03:46 PM Dec 22, 2021 | Team Udayavani |

ಬೀದರ: ಹೈ-ಕ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಅಭಿವೃದ್ಧಿ ವಿಷಯದಲ್ಲಿ ನಿರಂತರ ಮಲತಾಯಿ ಧೋರಣೆ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಕ.ಕ ಅಭಿವೃದ್ಧಿ ಮಾಡಲು ಆಗದಿದ್ದರೆ, ನಮಗೆ ಪ್ರತ್ಯೇಕ ರಾಜ್ಯ ಕೊಡಲಿ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

Advertisement

ನಗರದ ಎಂ.ಎಸ್‌. ಪಾಟೀಲ್‌ ಕಲ್ಯಾಣ ಮಂಟಪದಲ್ಲಿ ನಡೆದ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸದಸ್ಯರು, ಚಿಂತಕರ ಸಭೆಯಲ್ಲಿ ಮಾತನಾಡಿದ ಅವರು, ಕ.ಕ ಪ್ರದೇಶದ ರಚನಾತ್ಮಕ ಪ್ರಗತಿಗೆ ವಿಶೇಷ ಆದ್ಯತೆ ನೀಡುವ ಬಗ್ಗೆ ನಿರಂತರ ಭರವಸೆಗಳು ಮಾತ್ರ ನೀಡುತ್ತಿವೆ. ಆದರೆ, ಅನುಷ್ಠಾನ ಆಗುತ್ತಿಲ್ಲ. 371 (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ, ಕ.ಕ ಜಿಲ್ಲೆಗಳಲ್ಲಿ ಉದ್ದಿಮೆಗಳ ಸ್ಥಾಪನೆ ಘೋಷಣೆಯಾಗಿಯೇ ಉಳಿದಿವೆ ಎಂದು ಕಿಡಿಕಾರಿದರು.

ಒಂದು ಕಡೆ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಮತ್ತೂಂದೆಡೆ ಕೇಂದ್ರ ಸರ್ಕಾರ ಸಹ ನಮಗೆ ಮಂಜೂರಾದ ಹೆದ್ದಾರಿ ರಸ್ತೆಗಳು, ಕಲಬುರಗಿ ವಿಭಾಗೀಯ ರೈಲ್ವೆ ಕಚೇರಿ ಅಸ್ತಿತ್ವದ ಬಗ್ಗೆ ಘೋಷಣೆಯಾಗಿಯೇ ಉಳಿದು, ನಿರ್ಲಕ್ಷ ಧೋರಣೆ ತೋರಿದೆ. ಇಂತಹ ಸಂದರ್ಭದಲ್ಲಿ ನಮ್ಮ ಅಭಿವೃದ್ಧಿಗೆ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ಬೇಡಿಕೆ ಅನಿವಾರ್ಯವಾಗಿದೆ ಎಂದರು.

ಸಮಿತಿ ಜಿಲ್ಲಾ ಅಧ್ಯಕ್ಷ ಅನಂತರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಪ್ರಗತಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ ಎಂಬ ಬೇಡಿಕೆಯೊಂದಿಗೆ ಬೀದರನಲ್ಲಿ ಜನೆವರಿ ಎರಡನೇ ವಾರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಪ್ರಮುಖರಾದ ಡಾ| ಆನಂದರಾವ, ವೀರಭದ್ರಪ್ಪ ಉಪ್ಪಿನ್‌, ಸಂತೋಷ ಶೆಟ್ಟಿ, ಶಿವಕುಮಾರ ಬೆಲ್ದಾಳ, ಚಂದ್ರಶೇಖರ ಪಾಟೀಲ, ಮಹಮ್ಮದ ಅಸಿಫೋದ್ದೀನ್‌, ಮಹಮ್ಮದ ನಿಜಾಮೊದ್ದೀನ್‌, ಉದಯಕುಮಾರ ಅಷ್ಟೊರೆ, ಧನರಾಜ ರೆಡ್ಡಿ, ವಿಜಯಕುಮಾರ, ಕೃಷ್ಣಾರೆಡ್ಡಿ, ಬಕ್ಕಪ್ಪ, ಅನಿಲ ಹಮೀಲಪುರಕರ, ರಘುನಾಥರಾವ್‌, ರೋಹನಕುಮಾರ, ಘಾಳೆಪ್ಪ ಚಾಮಾ, ಸುಧಾಕರರಾವ ಪಾಟೀಲ್‌ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next