ಕಲಬುರಗಿ: ಮನುಷ್ಯ ಸಂಸಾರದ ಜಂಜಾಟ ಹಾಗೂ ಬದುಕಿನ ಸಂಕೀರ್ಣತೆಯಿಂದ ಹೊರಬರಲು ಸಾಹಿತ್ಯದ ಪ್ರಕಾರಗಳಾದ ಕಥೆ, ಕವನ, ಕಾವ್ಯದ ಅಭಿರುಚಿ ಮೈಗೂಡಿಸಿಕೊಂಡಾಗ ಬದುಕಿಗೊಂದು ಅರ್ಥ ಬರುತ್ತದೆ ಎಂದು ಚಿತ್ರನಟ, ಲೇಖಕ ಸಂಗಮೇಶ ಉಪಾಸೆ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ “ಸಂಕ್ರಾಂತಿ ಸಮ್ಮಿಲನ’ ವಿಶೇಷ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತಿಗಳ ಸಾಹಿತ್ಯ ರಚನೆಯಿಂದಾಗಿ ಭೌತಿಕ ಅಭಿವೃದ್ಧಿ ಆಗದಿದ್ದರೂ ಆಳುವ ವರ್ಗಕ್ಕೆ ಆತ್ಮಸ್ಥೈರ್ಯ ಹಾಗೂ ಪ್ರಜ್ಞಾವಂತಿಕೆ ಮೂಡಿಸುತ್ತದೆ. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಕಳಶಪ್ರಾಯದಂತಿದ್ದು, ವಚನ ಸಾಹಿತ್ಯದಲ್ಲೂ ಬದುಕಿನ ಆಳ ಮತ್ತು ಹೊರ ನೋಟದ ಬಗ್ಗೆ ವಿಶ್ಲೇಷಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ದೇವೇಗೌಡ ತೆಲ್ಲೂರ, ಅನುಭಾವದಿಂದ ಹೊರಡುವ ಸಾಹಿತ್ಯ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಡಾ| ಶರಣರಾಜ ಛಪ್ಪರಬಂದಿ ವೇದಿಕೆ ಮೇಲಿದ್ದರು. ಕವಿಗಳಾದ ಶಕುಂತಲಾ ಪಾಟೀಲ ಜಾವಳಿ, ಡಾ| ಕೆ. ಗಿರಿಮಲ್ಲ, ಪರಮೇಶ್ವರ ಶಟಕಾರ, ಎಂ.ಬಿ. ನಿಂಗಪ್ಪ, ಆರ್.ಎಚ್. ಪಾಟೀಲ, ರೇಣುಕಾ ಡಾಂಗೆ, ರೇಣುಕಾ ಎನ್., ಹಣಮಂತರಾವ್ ಘಂಟೇಕರ್, ಸಂತೋಷ ಕುಂಬಾರ, ಪ್ರತಿಭಾ ಮರಗೋಳ, ಕವಿತಾ ಕಾವಳೆ, ಶಿವಾನಂದ ದೊಡ್ಮನಿ, ನಾಗಣ್ಣ ವಿಶ್ವಕರ್ಮ ಕುರಿಕೋಟಾ, ಜಯಶ್ರೀ ಜಮಾದಾರ, ಮಾಲಾ ಕಣ್ಣಿ, ಶ್ರೀಕಾಂತ ಬಿರಾದಾರ, ಗುಂಡಣ್ಣ ಡಿಗ್ಗಿ, ಸಂಗಮೇಶ ಡೊಂಗರಗಾಂವ ಕವಿತೆ ವಾಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ಅಧ್ಯಕ್ಷ ಸುರೇಶ ದೇಶಪಾಂಡೆ, ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ, ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮೂಲಗೆ, ಪ್ರಮುಖರಾದ ಸೋಮಶೇಖರ ಮಠ, ಸೋಮಶೇಖರ ನಂದಿಧ್ವಜ, ಶಿವಶರಣ ಕುಸನೂರ, ರಾಜೇಂದ್ರ ತೆಗನೂರ, ಶಿವಲೀಲಾ ತೆಗನೂರ, ವಿಶ್ವನಾಥ ತೊಟ್ನಳ್ಳಿ, ವಿನೋದ ಜೇನವೇರಿ, ವಿಜಯಲಕ್ಷ್ಮೀ ಹಿರೇಮಠ, ಶಿವಕುಮಾರ ಸಿ.ಎಚ್., ಶಿವಾನಂದ ಮಠಪತಿ ಮತ್ತಿತರರು ಆಗಮಿಸಿದ್ದರು.