Advertisement

ಕನ್ನಡ ಭಾಷಾ ತಂತ್ರಾಂಶ ಅಭಿವೃದ್ಧಿಪಡಿಸಿ: ಮೇಟಿಮಠ

04:36 PM Dec 23, 2019 | Suhan S |

ಗಜೇಂದ್ರಗಡ: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ತಂತ್ರಾಂಶವನ್ನು ಸರ್ಕಾರಗಳು ಹೆಚ್ಚೆಚ್ಚು ಅಭಿವೃದ್ಧಿಪಡಿಸಿ ಯುವ ಪೀಳಿಗೆಗೆ ಮುಟ್ಟುವಂತೆ ಮಾಡಬೇಕಿದೆ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಸಚಿನ ಮೇಟಿಮಠ ಹೇಳಿದರು.

Advertisement

ಪಟ್ಟಣದ ಮೈಸೂರ ಮಠದಲ್ಲಿ ಕಸಾಪ ತಾಲೂಕಾ ಹಾಗೂ ನಗರ ಘಟಕ ವತಿಯಿಂದ ನಡೆದ 180ನೇ ವಾರದ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಅವರು ಉಪನ್ಯಾಸ  ನೀಡಿದರು.

ತಾಂತ್ರಿಕ ಯುಗದಲ್ಲಿ ಬದುಕುತ್ತಿರುವ ನಾವು ದಿನದಿಂದ ದಿನಕ್ಕೆ ಜ್ಞಾನದ ಶಾಖೆಯನ್ನು ಹರಡುತ್ತಾ ಹೊಸ, ಹೊಸ ವಿಷಯಗಳನ್ನು ಕಲಿಯುತ್ತಿದ್ದೇವೆ. ತಂತ್ರಜ್ಞಾನ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ಕನ್ನಡ ತಂತ್ರಾಂಶವನ್ನು ದಿನನಿತ್ಯದ ಕೆಲಸವಾಗಿ ಬಳಸಿಕೊಳ್ಳುತ್ತಿದ್ದೇವೆ. ನುಡಿ ತಂತ್ರಾಂಶ ಅತಿ ಮುಖ್ಯವಾದ ಸಾಫ್ಟ್‌ವೇರ್‌ ಆಗಿದೆ. ಆದರೆ ಅದನ್ನು ಅಭಿವೃದ್ಧಿಪಡಿಸುವ ಕೆಲಸ ಮಾತ್ರ ನಡೆದಿಲ್ಲ. ಗೂಗಲ್‌ನಲ್ಲಿ ಅನೇಕ ವರ್ಷಗಳ ಒತ್ತಡದಿಂದ ಕನ್ನಡವನ್ನು ಸೇರಿಸಲಾಯಿತು. ಕನ್ನಡ ತಂತ್ರಾಂಶ ಇನ್ನೂ ಬೆಳೆಯ ಬೇಕಾಗಿದೆ ಎಂದರು. ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಬಹುಭಾಷಾ ಸಂಸ್ಕೃತಿಯನ್ನು ಹೊಂದಿರುವುದರಿಂದ ಆಂಗ್ಲ ಭಾಷೆಯ ಪ್ರಭಾವ ಬಹುಬೇಗನೆ ನಮ್ಮೆಲ್ಲರನ್ನು ಮರುಳಾಗಿಸಿದೆ. ಅಲ್ಲದೆ ಆಂಗ್ಲ ಭಾಷೆಯಲ್ಲಿ ಕಲಿತರಷ್ಟೆ ನಾವು ಬದುಕಬಲ್ಲೆವೆಂಬ ಕಲ್ಪನೆಯಲ್ಲಿ ತೇಲಾಡುತ್ತಿದ್ದೇವೆ. ಹೀಗಾಗಿ ಕನ್ನಡ ಭಾಷೆಯ ಮೇಲೆ ನಿರ್ಲಕ್ಷ್ಯ ಧೋರಣೆ ಬಂದಿದೆ. ಪ್ರತಿಯೊಬ್ಬರೂ ಮಾತೃಭಾಷೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ದಿ| ಎಲ್‌.ಎಸ್‌. ಶೇಷಗಿರಿರಾವ್‌ ಅವರಿಗೆ ನುಡಿನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಬೀದರನಲ್ಲಿ ನಡೆದ ಮಂದಾರ ಬೆಳ್ಳಿ ಕವಿಗೋಷ್ಠಿ ಸಮಾರಂಭದಲ್ಲಿ ಸಾಹಿತ್ಯ ಸೇವಾರತ್ನ ಪುರಸ್ಕಾರ ಪಡೆದ ಐ.ಎ. ರೇವಡಿ, ಕುಂ. ವೀರಭದ್ರಪ್ಪ ರತ್ನ ಪುರಸ್ಕಾರ ಪಡೆದ ಶರಣಪ್ಪ ಬೇವಿನಕಟ್ಟಿ ಅವರಿಗೆ ಸನ್ಮಾನಿಸಲಾಯಿತು.

ಕಲಾವತಿ ಮುನವಳ್ಳಿ, ಶರಣಮ್ಮ ಅಂಗಡಿ, ಕೆ.ಎಸ್‌. ಗಾರವಾಡಹಿರೇಮಠ, ಜಿ.ಬಿ. ಪಾಟೀಲ, ಪಿ.ಎಸ್‌. ವಸ್ತ್ರದ, ಶಂಕರ ಕಲ್ಲಿಗನೂರ, ವಿಜಯಕುಮಾರ ನೂಲ್ವಿ, ಹನುಮಂತ ಭಜಂತ್ರಿ, ಎಸ್‌.ಎಸ್‌. ನರೇಗಲ್ಲ, ಎಮ್‌.ಎಸ್‌. ಮಕಾನದಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next