Advertisement

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಡಾ|ಕೆ.ಜಿ.ಜಗದೀಶ್‌

11:41 AM Sep 30, 2017 | |

ದೇರಳಕಟ್ಟೆ : ಶೈಕ್ಷಣಿಕ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ, ಮುಂದಿನ ವೃತ್ತಿ ಜೀವನದಲ್ಲಿ ದಕ್ಷತೆ, ಪ್ರಾಮಾಣಿಕತೆಯೊಂದಿಗೆ ವೃತ್ತಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅಭಿಪ್ರಾಯಪಟ್ಟರು.

Advertisement

ನಿಟ್ಟೆ  ವಿವಿಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜಿನ 18ನೇ ವಾರ್ಷಿಕೋತ್ಸವದಲ್ಲಿ ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ, ಪ್ರಶಸ್ತಿ ವಿತರಿಸಿ, ನೂತನ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಜೀವನದಲ್ಲಿ ಸಿಗುವ ಸಮಯ ಅತ್ಯಮೂಲ್ಯವಾದದ್ದು. ಆ ಕ್ಷಣ ಗಳ ಮಹತ್ವ ಭವಿಷ್ಯದ ಜೀವನದಲ್ಲಿ ನಮಗೆ ಅರಿವಿಗೆ ಬರುತ್ತದೆ. ಶೈಕ್ಷಣಿಕ ಜೀವನದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜತೆ ಸಾಗುತ್ತಿರುವಂತೆಯೇ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.  ಕಾಲೇಜಿನಲ್ಲಿ ಕಳೆಯುವ ಪ್ರತಿ ಕ್ಷಣಕ್ಕೂ ಮಹತ್ವವಿರುವುದರಿಂದ  ಪ್ರತಿ ನಿಮಿಷವನ್ನು ಅವಿಸ್ಮರಣೀಯವಾಗಿಸಬೇಕು ಎಂದರು.

ವಿವಿ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ| ಎಸ್‌.ರಮಾನಂದ ಶೆಟ್ಟಿ, ವಿದ್ಯಾರ್ಥಿ ಸಂಘದ ಸಲಹೆಗಾರ, ಡಾ| ಸಿದ್ದಾರ್ಥ ಹಾಗೂ ನಿಟ್ಟೆ ವಿವಿ ಪರೀಕ್ಷಾಂಗ ಕುಲಸಚಿವೆ ಪ್ರೊ| ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.

ದಿ| ಕಿದಿಯೂರು ತೇಜಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ, ದಿ| ಅಂಜಾರು ಕರು ಣಾಕರ ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿ ಎಲಿಶಾ ಅಣ್ಣಾ ವರ್ಗಿಸ್‌, ದಿ| ಪರಿಕಶೇಖರ್‌ ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿಯನ್ನು ಫಿಸಿ ಯೊಲಾಜಿಯ ಸತ್ಯಾ ರೋಯ್‌, ಜಸ್ಟಿಸ್‌ ಕೆ.ಎಸ್‌.ಹೆಗ್ಡೆ ಪ್ರಶಸ್ತಿಯನ್ನು ಎಂಬಿಬಿಎಸ್‌ನ ಪೇಸ್‌ ಒನ್‌ನಲ್ಲಿ ಸತ್ಯಾ ರೋಯ್‌, ದಿ| ಡಾ| ಬಿ.ಎನ್‌.ಶ್ರೀನಿವಾಸ ರಾವ್‌ ಪ್ರಶಸ್ತಿಯನ್ನು ಪಥೋಲಾಜಿಯ ಸಂಯುಕ್ತ ಸಂಕರನ್‌, ವೋಂತಿಬೆಟ್ಟು ದಿ| ಡಾ. ರವಿವರ್ಮ ಹೆಗ್ಡೆ ಪ್ರಶಸ್ತಿಯನ್ನು ಮೈಕ್ರೋ ಬಯೋಲಾಜಿಯ ನಂದನಾ ಮುರಳೀಧರನ್‌, ದಿ| ಸೂರ್ಯನಾರಾಯಣ ಶೆಟ್ಟಿ ಪ್ರಶಸ್ತಿ ಯನ್ನು ಫಾರ್ಮೊಕಾಲಾಜಿಯ ನಂದನಾ ಮುರಳೀಧರನ್‌, ದಿ| ಆದಿವಾಚಾರ್‌ ಸೌದಿ ಪ್ರಶಸ್ತಿಯನ್ನು ಫೋರೋನ್ಸಿಕ್‌ ಮೆಡಿಸಿನ್‌ನ ನಝೀನ್ ನ್  ಕಲ್ಲಿವಲಪ್ಪಿಲ್‌, ಎಂಎಂಬಿಬಿಎಸ್‌ ಪೇಸ್‌ 2ವಿಷಯಗಳಲ್ಲಿ ನಿಟ್ಟೆ ಎಜುಕೇಶನ್‌ ಟ್ರಸ್ಟ್ ಪ್ರಶಸ್ತಿಯನ್ನು ಶರ್ಮಿಳಾ ಎಸ್‌., ಮೊಳಹಳ್ಳಿ ವಿಶಾಲಾಕ್ಷಿ ಶೆಟ್ಟಿ  ಪ್ರಶಸ್ತಿಯನ್ನು ಕಮ್ಯೂನಿಟಿ ಮೆಡಿ ಸಿನ್‌ನ ವತ್ಸಲಾ ಎನ್‌., ಬಾವಬೀಡು ಗೋಪಿ ಎಸ್‌. ಭಂಡಾರಿ ಮತ್ತು ಹೇರೂರು ಸದಾಶಿವ ಭಂಡಾರಿ ಪ್ರಶಸ್ತಿಯನ್ನು ಇಎನ್‌ಟಿಯ ಸಬರಿದಾಸ್‌ ಎಸ್‌, ಸಚ್ಚರಪರಾರಿ ದಿ| ಜಲಜಾ ಶೆಟ್ಟಿ ಹಾಗೂ ದಿ| ಅರ್ಚನಾ ಶೆಟ್ಟಿ ಪ್ರಶಸ್ತಿ, ಓಪ್ತೊಮೋಲಾಜಿಯ ನಿಶಾ ಚಂದ್ರಶೇಖರ್‌, ನಿಟ್ಟೆ ಎಜುಕೇಶನ್‌ ಟ್ರಸ್ಟ್‌ ಎಂಬಿಬಿಎಸ್‌ ಪೇಸ್‌ 3 ರಲ್ಲಿ ಅಪರ್ಣಾ ಕಲ್ಯಾಣಿ ಪರಿಯಾದತ್‌, ಡಾ| ವಿ.ಆರ್‌. ಭಟ್‌ ಪ್ರಶಸ್ತಿಯನ್ನು ಜೆನರಲ್‌ ಮೆಡಿಸಿನ್‌ನ  ಹರ್ಷಿತಾ ಕೆ. ಪೂಂಜ, ಜನರಲ್‌ ಸರ್ಜರಿಯಲ್ಲಿ ಸುಲೋಚನಾ ಆರ್‌. ಬಲ್ಲಾಳ್‌ ಪ್ರಶಸ್ತಿ , ಪೀಡಿಯಾಟ್ರಿಕ್ಸ್‌ ನಲ್ಲಿ ದಿ| ವಿಠಲ ಶೆಟ್ಟಿ ಪ್ರಶಸ್ತಿ, ಪ್ರೊ| ಅಮರನಾಥ ಹೆಗ್ಡೆ ಪ್ರಶಸ್ತಿ , 2012-13ರ ಬ್ಯಾಚಿನ ಅತ್ಯುತ್ತಮ ಔಟ್‌ ಗೋಯಿಂಗ್‌ ಪ್ರಶಸ್ತಿಯನ್ನು  ಹರ್ಷಿತಾ ಕೆ.ಪೂಂಜ, ಒಬಿಜಿ ಯಲ್ಲಿ ಬೆಳೆಂಜೆ ಕಮಲಾ ಹೆಗ್ಡೆ ಪ್ರಶಸ್ತಿ ದಿಲ್‌ರಶ ರಶ್‌  ಫಾತಿಮಾ ಅಡೂರು, ವಿದ್ಯಾರ್ಥಿ ಒಬಿಜಿಯಲ್ಲಿ ಡಾ. ಎಂ ಸತ್ಯಾ ನಂದ ಹೆಗ್ಡೆ ಪ್ರಶಸ್ತಿ ಡಾ| ಸ್ಪಂದನಾ ಜೆ.ಸಿ ಅವರಿಗೆ ನೀಡಿ ಗೌರವಿಸಲಾಯಿತು.

Advertisement

ಕಾಲೇಜಿನ ಸ್ಮರಣ ಸಂಚಿಕೆ (ಎಕ್ಕೋ) ಕುರಿತಾಗಿ ಸಂಪಾದಕಿ ಅನ್ವೀನಾ ಕಿರು ಮಾಹಿತಿ ನೀಡಿದರು. ಸಾಧಕರನ್ನು ಕ್ಷೇಮ ಕುಲಸಚಿವ ಡಾ| ಜಯಪ್ರಕಾಶ್‌ ಶೆಟ್ಟಿ ಹಾಗೂ ಕಳೆದ ಸಾಲಿನಲ್ಲಿ ಕ್ರೀಡಾ ಕ್ಷೇತ್ರದ ಸಾಧಕನ್ನು   ಕ್ಷೇಮ ಕ್ರೀಡಾ ಸಲಹೆಗಾರ ಡಾ| ಮುರಳಿಕೃಷ್ಣ ವಾಚಿ ಸಿದರು. ವೈಸ್‌ ಡೀನ್‌ ಡಾ| ಎ.ಎಮ್‌.ಮಿರಾಜ್ಕ್ ರ್‌ ವಾರ್ಷಿಕ ವರದಿ ಮಂಡಿಸಿದರು. ವೈಸ್‌ ಡೀನ್‌ ಡಾ| ಪ್ರಕಾಶ್‌  ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು. ವಿದ್ಯಾರ್ಥಿ ಅಜೀಶ್‌ ಸ್ಯಾಮ್‌ ಜಾರ್ಜ್‌ ಚಟುವಟಿಕೆಗಳನ್ನು ವಿವರಿಸಿದರು. ಕುರುಪ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next