Advertisement

ನಾಗರಿಕ ಪಜ್ಞೆ ಬೆಳೆಸಿಕೊಳ್ಳಿ: ಜಾಲವಾದಿ

03:04 PM Aug 16, 2017 | |

ತಾಳಿಕೋಟೆ: ನಯನ ಮನೋಹರ ತಾಣಗಳನ್ನು ಹೊಂದಿದ ಬಸವಾದಿ ಶರಣರು ನಡೆದಾಡಿ ಇಡಿ ದೇಶವನ್ನೇ ಪಾವನಗೊಳಿಸಿದ ನಮ್ಮ ದೇಶ ನೋಡಲು ವಿದೇಶಿಗರು ದಿನೇ ದಿನೇ ಸಾಲುಗಟ್ಟಿ ಬರುತ್ತಲಿದ್ದಾರೆಂದು ಎಸ್‌.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಆರ್‌.ವಿ. ಜಾಲವಾದಿ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಖಾಸ್ಗತೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ನಮ್ಮ ಮನೆ ಸುತ್ತ ಸ್ವತ್ಛತೆ ಕಾಪಾಡಬೇಕು. ಈ ಕುರಿತು ಶಕ್ತಿ ಮೀರಿ ಶ್ರಮಿಸಲು ಪಣ ತೊಡಬೇಕು. ಇಂತಹ ಕಾರ್ಯಗಳಿಂದ ರೋಗ ರುಜಿನಗಳು ದೂರಾಗುತ್ತವೆ. ಸ್ವತ್ಛತೆ ಸ್ವಾಭಿಮಾನದ ಸಂಕೇತವಾಗಿದೆ. ಸ್ವತ್ಛತಾ ಸಂಸ್ಕೃತಿ ಮತ್ತು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳವುದು ಅವಶ್ಯ ಎಂದರು. ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿ, ಸ್ವತ್ಛತಾ ಕಾರ್ಯ ಕುರಿತು ಜನಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸುವ ಪೂರ್ವದಲ್ಲಿಯೇ ರಾಷ್ಟ್ರೀಯ ಸೇವಾ ಘಟಕಗಳು ಗ್ರಾಮಾಂತರ ಪ್ರದೇಶಗಳಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದು ಶ್ಲಾಘನೀಯ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಳಿಕೋಟಿ ವಲಯ ಮೇಲ್ವಿಚಾರಕಿ ಉಷಾ ಎಂ.ಎಸ್‌. ಅವರು ತಮ್ಮ ಸಂಘಟನೆಯ ಸೇವಾ ಕಾರ್ಯಗಳ ಕುರಿತು ವಿವರಿಸಿ ಕಸವಿಲೇವಾರಿ ಒಂದು ಚಿಂತನೆ ಎಂಬ ಹಾಗೂ ನಾಗರಿಕ ಪ್ರಜ್ಞೆಯ ಸೂತ್ರಗಳ ಸಂಬಂಧಿತ ಕರಪತ್ರಗಳನ್ನು ಸ್ಥಳದಲ್ಲಿಯೇ ವಿತರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸ್ವಯಂ ಸೇವಕರಿಂದ ಖಾಸ್ಗತೇಶ್ವರ ಮಠದ ಆವರಣ ಸ್ವತ್ಛತೆ ನಡೆಯಿತು. ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ರಾಜೇಶ್ವರಿ ವಾಲಿ, ಸೇವಾ ಪ್ರತಿನಿಧಿ  ನೀಲಮ್ಮ ವಿರಕ್ತಮಠ, ನವೀನಕುಮಾರ ಇಜೇರಿ, ಭರತ ಗಿರಣಿವಡ್ಡರ, ರಾಹುಲ್‌ ರಜಪೂತ, ಅಲ್ಲಾಭಕ್ಷ, ಶಿವರಾಯಗೌಡಾ ಪಾಟೀಲ, ಫೀರಸಾಬ ಮುಲ್ಲಾ, ನಳನಿ ಹಿರೇಮಠ, ಶೃತಿ ಬೋನಾಳ, ಉಮಾಶ್ರೀ ಮಾಲಿಪಾಟೀಲ, ಗ್ಯಾನಮ್ಮ ಮಾಲಿಪಾಟೀಲ, ಸುನೀತಾ ಸುಭೇದಾರ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next