Advertisement

ಉತ್ತರದಲ್ಲಿ ಎಚ್‌ಡಿಡಿ-ಸಿದ್ದು ಜಂಟಿ ಪ್ರಚಾರ

11:33 AM Apr 06, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಕೊಡಲು ನಾನಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಅವರು ಮಾಡಿರುವ ಸಾಧನೆ ಬಗ್ಗೆಯೂ ಚರ್ಚೆಗೆ ಸಿದ್ಧನಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.
ದೇವೇಗೌಡ ತಿಳಿಸಿದ್ದಾರೆ.

Advertisement

ಆರ್‌.ಟಿ.ನಗರ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ನಾನೂ ಪ್ರಧಾನಿಯಾಗಿ ದೇಶದ ಅಭಿವೃದಿಟಛಿಗೆ ಸಾಕಷ್ಟು ಯೋಜನೆ ರೂಪಿಸಿದ್ದೇನೆ. ಹಿಂದೆ ಎಲ್ಲರೂ ಮಾಡಿ ರುವುದು ಬಿಟ್ಟು ತಾವೊಬ್ಬರೇ ಮಾಡಿದ್ದು ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರಕ್ಕಾಗಿಮೈತ್ರಿ ಮಾಡಿಕೊಂಡಿಲ್ಲ. ಜನರ ಅಭಿವೃದ್ಧಿಗೆ ಒಂದಾಗಿದ್ದೇವೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥಿಸುತ್ತೇನೆ. ಕೃಷ್ಣ ಬೈರೇಗೌಡರಿಗೆ ಮತ ನೀಡಿ. ವಿದ್ಯಾವಂತ
ಯುವಕ, ನಾನೇ ಅವರನ್ನು ಸ್ಪರ್ಧೆ ಮಾಡು ಎಂದು ಹೇಳಿದ್ದೆ ಎಂದು ಹೇಳಿದರು.

ನನ್ನ ಮಗ ಮುಖ್ಯಮಂತ್ರಿಯಾಗಿದ್ದು ಪ್ರಚಾರಕ್ಕೆ ಹೆಲಿಕಾಪ್ಟರ್‌ ಪಡೆಯಲು ಸಾಧ್ಯವಾಗುತ್ತಿಲ್ಲ. ನಾನು ಸಿದ್ದರಾಮಯ್ಯ ಅವರೊಂದಿಗೆ ಹೋಗಿ ಪ್ರಚಾರ
ನಡೆಸುತ್ತೇನೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಬಾರಿಯ ಲೋಕಸಬೆ ಚುನಾವಣೆ ರಾಹುಲ್‌ಗಾಂಧಿ ಹಾಗೂ ನರೇಂದ್ರಮೋದಿ ನಡುವಿನ ಚುನಾವಣೆಯಲ್ಲಿ, ಪ್ರಜಾತಂತ್ರ ಉಳಿಸುವ ಚುನಾವಣೆ. ಜಾತ್ಯತೀತ ಮತಗಳು ವಿಭಜನೆಯಾಗಬಾರದು. ಇದರಿಂದ ಬಿಜೆಪಿಗೆ
ಅನುಕೂಲವಾಗುತ್ತದೆ ಎಂದು ಹೇಳಿದರು.

Advertisement

ದೇವೇಗೌಡರು ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಎಂದು ನಾವೆಲ್ಲಾ ಹೇಳಿದ್ದೆವು. ಆದರೆ, ತುಮಕೂರಿನಲ್ಲಿ ಒತ್ತಡ ಇದ್ದ ಕಾರಣ ಅಲ್ಲಿ ಸ್ಪರ್ಧೆ ಮಾಡಿದ್ದಾರೆ. ಕೃಷ್ಣ ಬೈರೇಗೌಡರು ನಿಂತರೆ ಮಾತ್ರ ಸದಾನಂದಗೌಡರನ್ನು ಸೋಲಿಸಲು ಸಾಧ್ಯ ಎಮದು ಊಈ ಭಾಗದ
ಶಾಸಕರು ಹೇಳಿದರು. ಹೀಗಾಗಿ, ಅವರನ್ನೇ ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದರು. ಸಚಿವರಾದ ಡಿ.ಕೆ. ಶಿವಕುಮಾರ್‌, ಜಮೀರ್‌ ಅಹಮದ್‌, ಶಾಸಕರಾದ ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ,
ಬೈರತಿ ಸುರೇಶ್‌ ಪಾಲ್ಗೊಂಡಿದ್ದರು.

ಸಮಾಗಮ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಡಿ ಬಂದು ಪ್ರಚಾರದಲ್ಲಿ ಪಾಲ್ಗೊಂಡಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next