ಬೆಂಗಳೂರು: ಮೈಸೂರಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾವೇಶಕ್ಕೆ “ವೀಲ್ ಚೇರ್’ನಲ್ಲಿ ಬಂದು ಗಮನ ಸೆಳೆದಿದ್ದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕಳೆದೆರಡು ದಿನಗಳಿಂದ ದಿಲ್ಲಿಯಲ್ಲಿ ಇದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ಸಂಸತ್ ಕಲಾಪದಲ್ಲಿ ಭಾಗಿ ಯಾಗುವುದಕ್ಕಾಗಿ ದಿಲ್ಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಪಕ್ಷದ ಉನ್ನತ ಮೂಲ ಗಳ ಪ್ರಕಾರ ಮಹತ್ವದ ಹಾಗೂ ರಹಸ್ಯ ರಾಜಕೀಯ ಕಾರ್ಯಕ್ಕಾಗಿಯೇ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಂಗಳೂರಿಗೆ ವಾಪಸಾಗಿದ್ದು, ಕುಮಾರ ಸ್ವಾಮಿ ನಿವಾಸಕ್ಕೆ ತೆರಳಿ ಗೌಪ್ಯ ಚರ್ಚೆ ನಡೆಸಿದ್ದಾರೆ. ಇದೆಲ್ಲ ದರಮಧ್ಯೆ ಕೇಂದ್ರದ ಪ್ರಭಾವಿ ಸಚಿವರೊಬ್ಬರು ವಿಮಾನ ನಿಲ್ದಾಣದಲ್ಲಿ ಕುಮಾರಸ್ವಾಮಿ ಯವ ರನ್ನು ಭೇಟಿಯಾಗಿದ್ದರು ಎಂಬ ಸುದ್ದಿ ಬಣ್ಣಬಣ್ಣದ ಕತೆ ಗಳನ್ನು ಹುಟ್ಟುಹಾಕಿದೆ.