Advertisement
ಮೊದಲಿಗೆ 10 ಜನ ಋತ್ವಿಜರ ತಂಡದಿಂದ ಗಣಪತಿ ಹೋಮ ನಡೆಯಿತು. ಯಾಗ ಶಾಲೆಗೆ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸಿದರು. ಚಂಡಿಕಾಯಾಗದ ಸಂಕಲ್ಪದ ನಂತರ 100 ಜನ ಋತ್ವಿಜರ ತಂಡ ಪಾರಾಯಣ ಆರಂಭಿಸಿದರು. ಒಟ್ಟು 5 ದಿನ ನಡೆಯುವ ಸಹಸ್ರ ಚಂಡಿಕಾ ಯಾಗದಲ್ಲಿ ವೈದಿಕರು ಬೆಳಗ್ಗೆ 10 ಪಾರಾಯಣ, ಸಂಜೆ 10 ಸಾವಿರ ಜಪ ಕೈಗೊಳ್ಳಲಿದ್ದಾರೆ.
ಬೆಂಗಳೂರು: ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸದ ಯೋಜನೆ ರೂಪಿಸಿರುವ ದೇವೇಗೌಡರು ಅದಕ್ಕೆ ಮುನ್ನ ಶೃಂಗೇರಿಯಲ್ಲಿ ಚಂಡಿಕಾಯಾಗ ನಡೆಸುತ್ತಿದ್ದಾರೆ. ಆ ನಂತರ ಜ.24 ಕ್ಕೆ ಪಕ್ಷದ ಸಮಾವೇಶ ಆಯೋಜಿಸಿದ್ದು ಪಕ್ಷ ಸಂಘಟನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.