Advertisement

“ಗೂಳಿಗಳ ಗುದ್ದಾಟದಲ್ಲಿ ಜೋಳದ ರಾಶಿ ಹಾಳಾಯ್ತು’

11:52 PM Mar 22, 2019 | |

ಗುಂಡ್ಲುಪೇಟೆ: ಹಳೇ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಗಾದೆಯಂತೆ ಎರಡು ಗೂಳಿಗಳ ನಡುವಿನ ಗುದ್ದಾಟದಲ್ಲಿ ಜೋಳದ ರಾಶಿ ಹಾಳಾಯ್ತು ಎಂಬಂತೆ ದೇವೇಗೌಡ ಮತ್ತು ಸಿದ್ದರಾಮಯ್ಯ ಒಬ್ಬರ ಕಾಲನ್ನೊಬ್ಬರು ಎಳೆಯಲು ಹವಣಿಸುತ್ತಾರೆಯೇ ಹೊರತು ಯಾವತ್ತಿಗೂ ಒಂದಾಗಲ್ಲ, ಅವರಲ್ಲಿ ಸಾಮರಸ್ಯ ಮೂಡುವುದು ಕನಸಿನ ಮಾತು ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ವ್ಯಂಗ್ಯವಾಡಿದರು.

Advertisement

ಪಟ್ಟಣದಲ್ಲಿ  ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮೈತ್ರಿ ಸರಕಾರದಲ್ಲಿ ಹೊಂದಾಣಿಕೆ ಮತ್ತು ಅಭಿವೃದ್ಧಿ ಸಾಧ್ಯವಿಲ್ಲ, ಕುಮಾರ ಪರ್ವವನ್ನು ಸಿದ್ದರಾಮಯ್ಯ ಅವರ ವಿರುದ್ಧ ಸಂಘಟಿಸಿದ್ದ ಕುಮಾರಸ್ವಾಮಿ ಅವರೇ, ಇವತ್ತು ಯಾರೊಡನೆ ಕೂಡಿಕೆ ಮಾಡ್ಕೊಂಡಿದೀರಿ ಎಂದು ಪ್ರಶ್ನಿಸಿದರು.
ದೇಶಾದ್ಯಂತ ಕಾಂಗ್ರೆಸ್‌ ದುರ್ಬಲವಾಗಿದೆ. 44 ಸಂಸದರನ್ನು ಗೆಲ್ಲಿಸಿಕೊಂಡು ರಾಹುಲ್‌ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಸಿದ್ರಾಮಯ್ಯ ನಿನ್ನ ಗೆಲ್ಲೋಕೆ ಬಿಡೋಲ್ಲ ಎಂದಿದ್ದೆ, ಅದರಂತೆ 36 ಸಾವಿರ ಮತದಿಂದ ಸೋಲಿಸಿದೆ. ನಾಟಿಕೋಳಿ ಮುದ್ದೆ ಸಾರು ಬೇಜಾರಾದ್ದರಿಂದ ಡ್ರೆç ಪೂ›ಟ್ಸ್‌ ತಿನ್ನೋಕೆ ಹೋಗಿದ್ದಾರೆ ಎಂದು ಮೂದಲಿಸಿದರು. ಇದು  ತಮ್ಮ ಕೊನೆಯ ಚುನಾವಣೆಯಾಗಿದ್ದು, ಶಕ್ತಿ ತುಂಬುವಂತೆ ಶ್ರೀನಿವಾಸ್‌ ಪ್ರಸಾದ್‌ ಮನವಿ ಮಾಡಿದರು.

“ದೇವೇಗೌಡರಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕ’
ಕಾಂಗ್ರೆಸ್‌ ಪಕ್ಷದ ಲೋಕಸಭಾ ಸ್ಥಾನವನ್ನೇ ಕಿತ್ತುಕೊಳ್ಳುತ್ತಿರುವ ಮಾಜಿ ಪ್ರಧಾನಿ ದೇವೇಗೌಡರೇ ಕಾಂಗ್ರೆಸ್‌ ಮುಕ್ತ ಕರ್ನಾಟಕದ ಕನಸನ್ನು ನನಸು ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅಭಿಪ್ರಾಯಪಟ್ಟರು.  ದೇವೇಗೌಡ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ ಎಂದರು. ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ರಂಥ  ಹಳೇ ಹುಲಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next