Advertisement
ಕೋಸ್ಟಲ್‌ವುಡ್‌ಗೆ ಭರವಸೆಯ ಸಿನೆಮಾ ನೀಡಿರುವ ಕಾಪಿಕಾಡ್ ಈಗ ಇನ್ನೊಂದು ಸಿನೆಮಾ ಮಾಡುವ ಬಗ್ಗೆ ಪ್ಲ್ಯಾನಿಂಗ್ ಶುರು ಮಾಡಿದ್ದಾರೆ. ಅಂದಹಾಗೆ, ಸಿನೆಮಾ ಕನ್ನಡವಾ? ತುಳುವಾ? ಎಂದು ಇನ್ನೂ ಅವರು ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೂ, ಹೊಸ ಸಿನೆಮಾದ ಬಗ್ಗೆ ಸಿದ್ಧತೆ ನಡೆಸುತ್ತಿರುವ ಅವರು ಕೆಲವೇ ತಿಂಗಳಿನಲ್ಲಿ ಹೊಸ ಸಿನೆಮಾ ಮಾಡುವ ತಯಾರಿಯಲ್ಲಿದ್ದಾರೆ.
Related Articles
Advertisement
ಅಂತೂ ಕಾಪಿಕಾಡ್ ಸದ್ಯ ಫುಲ್ ಬ್ಯುಸಿ ಆಗಿದ್ದಾರೆ. ಜಬರ್ದಸ್ತ್ ಶಂಕರ ರಿಲೀಸ್‌ನ ಹೊಸ್ತಿಲ್ಲಿರುವಾಗಲೇ ಹೊಸ ಸಿನೆಮಾ ಮಾಡಲು ಕಾಪಿಕಾಡ್ ಹೆಜ್ಜೆ ಇರಿಸಿದ್ದು, ಈ ಸಿನೆಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಎಂಬಿತ್ಯಾದಿ ಸಂಗತಿಗಳು ಸದ್ಯಕ್ಕಿಲ್ಲ.
ಬರ್ಸ, ಚಂಡಿ ಕೋರಿ, ಅರೆ ಮರ್ಲೆರ್, ಏರಾ ಉಲ್ಲೆರ್‌ಗೆ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ ಕಾಪಿಕಾಡ್ ಇನ್ನೂ ಹಲವು ಸಿನೆಮಾದ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದವರು. ತುಳುವಿನ ಹಲವು ಸಿನೆಮಾದಲ್ಲಿ ಬಣ್ಣಹಚ್ಚಿ, ನಗುವಿನ ಜತೆಗೆ ಮೋಡಿಮಾಡಿದವರು. ಜತೆಗೆ, ರಮೇಶ್ ಅರವಿಂದ್ ಜತೆಗೆ ವೆಂಕಟ ಇನ್ ಸಂಕಟ, ಯಶ್ ಜತೆಗೆ ತೂಫಾನ್ ಹಾಗೂ ಕಾರ್ತಿಕ್ ಎಂಬ ಸಿನೆಮಾದಲ್ಲಿ ಬಣ್ಣಹಚ್ಚಿದ ದೇವದಾಸ್ ಕಾಪಿಕಾಡ್ ಅವರಿಗೆ ಹೆಚ್ಚಾ ಕಡಿಮೆ 38ರಷ್ಟು ಕನ್ನಡ ಚಿತ್ರಗಳ ಆಫರ್ ಬಂದಿತ್ತು. ಆದರೆ, ತುಳು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕರಾವಳಿ ಭಾಗದಲ್ಲಿಯೇ ಸಮಯ ಬೇಕಾಗಿರು ವುದರಿಂದ ಸ್ಯಾಂಡಲ್‌ವುಡ್‌ನ ಆಫರ್‌ಗಳನ್ನು ಕಾಪಿಕಾಡ್ ನಯವಾಗಿ ನಿರಾಕರಿಸಿ ದ್ದರು. ವಿಶೇಷ ವೆಂದರೆತಮಿಳು, ಮಲಯಾಳಂ ನಲ್ಲೂ ಇಂತಹುದೇ ಆಫರ್ ಬಂದಿದ್ದು, ಕಾಪಿಕಾಡ್‌ಗೆ ಸಮಯ ಸಾಕಾಗದೆ, ಅತ್ತ ಗಮನಹರಿಸಿಲ್ಲ.ಅಂದಹಾಗೆ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದ “ಜಬರ್‌ದಸ್ತ್ ಶಂಕರ’ ಸಿನೆಮಾ ಇನ್ನೇನು ಕೆಲವೇ ದಿನದಲ್ಲಿ ತೆರೆಕಾಣಲಿದೆ. ಇರುವೈಲ್, ಉಲಾಯಿಬೆಟ್ಟು, ಎಡಪದವು, ಬೆಂಜನಪದವು, ಕೊಡಾ¾ಣ್, ಮೆಲ್ಕಾರ್, ಪಣೋಲಿಬೈಲ್ ಬಳಿಯ ಕೇಶವನಗರ ಮುಂತಾದೆಡೆ ಜಬರ್‌ದಸ್ತ್ ಶಂಕರ ಸಿನೆಮಾಕ್ಕೆ ಚಿತ್ರೀಕರಣ ನಡೆದಿದೆ. ಸಿನೆಮಾದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು ಮಾಸ್ ಮಾದ ಸಾಹಸದ ದೃಶ್ಯಗಳನ್ನು ಸಂಯೋಜಿಸಿದ್ದಾರೆ. - ದಿನೇಶ್ ಇರಾ