ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ದೇವರಾಯನ ದುರ್ಗದಲ್ಲಿ 10.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಭರದಿಂದ ಸಾಗಿದೆ. ದೇವರಾಯನದುರ್ಗದ ಯೋಗ ನರಸಿಂಹಸ್ವಾಮಿ ಕ್ಷೇತ್ರ ಹಲವು ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿತ್ತು, ದೇವರಾಯನ ದುರ್ಗಕ್ಕೆ ಬರುವ ಭಕ್ತಾದಿಗಳ ಸಮಸ್ಯೆಯನ್ನು ಸ್ಥಳೀಯರು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾದ ಡಿ.ಸಿ ಗೌರಿಶಂಕರ್ ಅವರ ಗಮನಕ್ಕೆ ತಂದಿದ್ದರು.
ಸ್ಥಳೀಯರ ಸಮಸ್ಯೆ ಆಲಿಸಿದ್ದ ಶಾಸಕ ಡಿ.ಸಿ ಗೌರಿಶಂಕರ್ ಮೂಲಭೂತ ಸೌಕರ್ಯ ಕಲ್ಪಿಸಲು ಸಾಕಾರಗೊಳಿಸಿದ್ದಾರೆ. ಎಚ್.ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶಾಸಕ ಗೌರಿಶಂಕರ್ ಮುಖ್ಯಮಂತ್ರಿಗಳಿಗೆ ಒತ್ತಡ ತಂದು ದೇವರಾಯನ ದುರ್ಗದ ಸಮಗ್ರ ಅಭಿವೃದ್ಧಿಗೆ 10.5 ಕೋಟಿ ಅನುದಾನ ಮಂಜೂರು ಮಾಡಿಸಿ ದೇವರಾಯನ ದುರ್ಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ.
ಶಾಸಕ ಡಿ.ಸಿ ಗೌರಿಶಂಕರ್ ವಾರಕ್ಕೊಮ್ಮೆ ದೇವರಾಯನದುರ್ಗಕ್ಕೆ ಭೇಟಿ ನೀಡಿ ಗುತ್ತಿಗೆದಾರರು ಹಾಗೂ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಿ ಗುಣಮಟ್ಟದ ಕಾಮಗಾರಿ ಮಾಡಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿರುವ ಪರಿಣಾಮ ಕಾಮಗಾರಿಗಳು ವೇಗ ಪಡೆದಿವೆ. ಶಾಸಕ ಡಿ.ಸಿ ಗೌರಿಶಂಕರ್ ಅವರ ಖಡಕ್ ಸೂಚನೆ ಪರಿಣಾಮ ದೇವಸ್ಥಾನದ ರಥ ಬೀದಿಯ ಸಿಸಿ ರಸ್ತೆ ಕಾಮಗಾರಿ ಪ್ರಕ್ರಿಯೆ ಚುರುಕಿನಿಂದ ಸಾಗಿದೆ.
ದೇವಸ್ಥಾನದ ವಿಮಾನ ಗೋಪುರ ಸ್ಥಳದಿಂದ ರಥಗೋಪುರ ರಸ್ತೆ ದುರಸ್ತಿ ಕಾರ್ಯ ಚಾಲ್ತಿಯಲ್ಲಿದೆ. ಒಳ ಚರಂಡಿ ಕಾಮಗಾರಿಗಳೂ ಸಹ ಪ್ರಗತಿಯಲ್ಲಿದ್ದು, ಕಾಮಗಾರಿಗೆ ಬೇಕಾದ ಕಲ್ಲು, ಜೆಲ್ಲಿ, ಮರಳು, ಪೈಪು, ಕಬ್ಬಿಣ ಇನ್ನಿತರೆ ಸಾಮಾನುಗಳನ್ನು ದಾಸ್ತಾನು ಮಾಡಲಾಗಿದೆ. ಬೋಜನಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ನಾಮದ ಚಿಲುಮೆ ಆರತಿ ಬಂಡೆ ತಿರುವು ರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಗಳನ್ನು ಲೋಕೋಪಯೋಗಿ ಇಲಾಖೆ ಡಾಂಬರು ಹಾಕಿ ಮುಚ್ಚಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಒಟ್ಟಾರೆ ದೇವರಾಯನ ದುರ್ಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕ್ಷೇತ್ರದ ಜನರು ಶಾಸಕ ಡಿ.ಸಿ ಗೌರಿಶಂಕರ್ ಅವರನ್ನು ಪ್ರಶಂಸಿಸಿದ್ದಾರೆ.
ದೇವರಾಯನದುರ್ಗ ಅತೀ ಪುಣ್ಯ ಕ್ಷೇತ್ರ. ನಾಡಿನ ಮೂಲೆ ಮೂಲೆಗಳಲ್ಲಿ ಈ ಸನ್ನಿಧಿಯ ಭಕ್ತರಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದಿ ಕಾಣುತ್ತಿತ್ತು, ಇಲ್ಲಿ ಮೂಲಬೂತ ಸೌಕರ್ಯ ಕಲ್ಪಿಸುವಂತೆ ಇಲ್ಲಿನ ಸ್ಥಳೀಯರು ಹಾಗೂ ಭಕ್ತರು ಒತ್ತಾಯಿಸುತ್ತಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ 10.5 ಕೋಟಿ ಅನುದಾನ ಮಂಜೂರು ಮಾಡಿಸಿದೆ. ಇಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ, ಭಕ್ತರ ಮುಖದಲ್ಲಿ ನೆಮ್ಮದಿ ಮೂಡಿದೆ ಈ ಕೆಲಸದಿಂದ ನನಗೆ ದೇವರ ಸೇವೆ ಮಾಡಿದ ತೃಪ್ತಿ ಸಿಕ್ಕಿದೆ.
-ಡಿ.ಸಿ ಗೌರಿಶಂಕರ್. ಗ್ರಾಮಾಂತರ ಶಾಸಕ