Advertisement

Devaramane; ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು

09:08 PM Mar 18, 2024 | Team Udayavani |

ಕೊಟ್ಟಿಗೆಹಾರ:ದೇವರಮನೆಯಲ್ಲಿ ಕಾಡಾನೆಯೊಂದು ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರಾದ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ಮೂಡಿಗೆರೆ ಪಟ್ಟಣದ ನಿವಾಸಿ ಲೋಕೇಶ್ ಮತ್ತು ಅವರ ಸಹೋದರಿ ದೇವರಮನೆ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಿಂದಿರುವಾಗ ದೇವರಮನೆ ರಸ್ತೆಯಲ್ಲಿ ಕಾಡಾನೆ ಬೈಕಿಗೆ ಅಡ್ಡ ಬಂದು ಅಟ್ಟಿಸಿಕೊಂಡು ಬಂದಿದೆ. ತತ್ ಕ್ಷಣ ಬೈಕ್ ಸವಾರರು ಓಡಿ ಹೋಗಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ಬೈಕ್ ಜಖಂಗೊಂಡಿದೆ.ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಅಭಿಜಿತ್, ಬಣಕಲ್ ಠಾಣಾ ಪಿಎಸ್‌ಐ ಎನ್.ಕೆ.ಓಮನಾ, ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next