Advertisement
ಬೆಳಗ್ಗೆ 9.30 ಕ್ಕೆ ಕೆಎಚ್‌ಡಿಸಿ ಕಾಲೊನಿಯ ದೇವರ ದಾಸಿಮಯ್ಯ ದೇವಸ್ಥಾನದಿಂದ ಆರಂಭಗೊಂಡ ಪುರಪ್ರವೇಶದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 2 ಕ್ಕೆ ಎಸ್‌ಆರ್‌ಎ ಮೈದಾನದಲ್ಲಿ ಮುಕ್ತಾಯಗೊಂಡಿತು.
Related Articles
Advertisement
ಪೀಠಾರೋಹಣದ ಗೌರವಾಧ್ಯಕ್ಷ ಡಾ.ಎಂ.ಎಸ್.ದಡ್ಡೆನ್ನವರ ಮಾತನಾಡಿ, ಹಟಗಾರು ಜಗದ್ಗುರುಗಳ ಪೀಠ ಸ್ಥಾಪನೆ ಮತ್ತು ಜಗದ್ಗುರುಗಳ ನೇಮಕ ಹೋರಾಟ ಎರಡು ದಶಕಗಳ ಕಾಲದಿಂದ ನಡೆದಿತ್ತು. ಹಟಗಾರರ ಜಗದ್ಗುರುಗಳ ಪೀಠ ಸ್ಥಾಪನೆಯಿಂದಾಗಿ ಹಟಗಾರರು ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಿದೆ ಮತ್ತ ಸಮಾಜಕ್ಕೆ ಬಲ ಬಂದಂತಾಗಿದೆ.
ಪೀಠ ಸ್ಥಾಪನೆಯಿಂದ ಯುವಕರಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮಾರ್ಗದರ್ಶನ ಮಾಡಲು ಸಹಾಯವಾಗಿದೆ. ಯುವಕರು ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಹಟಗಾರ ಸಮಾಜವನ್ನು ಬೆಳೆಸುವ ನಿಟ್ಟಿನಲ್ಲಿ ಸೂಕ್ತ ಚಿಂತನೆಗಳನ್ನು ಮಾಡಬೇಕು. ಹಟಗಾರ ಜಗದ್ಗುರುಗಳ ಪೀಠಾರೋಹಣಕ್ಕೆ ಅಪಾರ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.- ಡಾ.ಎಂ.ಎಸ್.ದಡ್ಡೆನ್ನವರ, ಪೀಠಾರೋಹಣದ ಗೌರವಾಧ್ಯಕ್ಷ
ರಾಜಶೇಖರ ಸೋರಗಾವಿ, ಶ್ರೀಶೈಲ ಧಬಾಡಿ, ಸೋಮು ಗೊಂಬಿ, ಆರ್.ಸಿ.ಘಾಳಿ, ಶ್ರೀಪಾದ ಬಾಣಕಾರ, ಶಂಕರ ಜಾಲಿಗಿಡದ, ಮಲ್ಲಿಕಾರ್ಜುನ ಬಾಣಕಾರ, ರಾಜಶೇಖರ ಮಾಲಾಪುರ, ಶ್ರೀಶೈಲ ಬೀಳಗಿ, ರಾಜು ಅಂಬಲಿ, ಚಂದ್ರಶೇಖರ ಶಿವಪೂಜಿ, ಡಾ.ಪಿ.ವಿ. ಪಟ್ಟಣ, ಎಂ.ಜಿ.ಕೆರೂರ, ಪಂಡಿತ ಪಟ್ಟಣ, ರಾಜೇಂದ್ರ ಭದ್ರನವರ, ಪ್ರಕಾಶ ಮಂಡಿ, ಬಸವರಾಜ ಜಾಡಗೌಡ, ಶಾಂತಾ ಸೋರಗಾವಿ, ಶಾಂತಾ ಮಂಡಿ, ಮಾಲಾ ಬಾವಲತ್ತಿ, ಹೇಮಲತಾ ಪಟ್ಟಣ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ನೆರೆಯ ಮಹಾರಾಷ್ಟ್ರದಿಂದ ಆಗಮಿಸಿದ ಹಟಗಾರ ಸಮಾಜದ ಪ್ರಮುಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.