Advertisement

Devara: ನಿರೀಕ್ಷೆಗೂ ಮೀರಿದ ಜನ; ಕೊನೆ ಕ್ಷಣದಲ್ಲಿ ʼದೇವರʼ ಪ್ರೀ ರಿಲೀಸ್‌ ಇವೆಂಟ್‌ ರದ್ದು

03:16 PM Sep 23, 2024 | Team Udayavani |

ಹೈದರಾಬಾದ್:‌ ಜೂ.ಎನ್‌ ಟಿಆರ್‌ (Jr. NTR) ʼದೇವರʼ ಪಾರ್ಟ್‌ -1 (Devara Part -1) ಮುಂದಿನ ವಾರ(ಸೆ.27ರಂದು) ರಿಲೀಸ್‌ ಆಗಲಿದೆ. ಅಭಿಮಾನಿಗಳಲ್ಲಿ ಸಿನಿಮಾ ಸಖತ್‌ ಕ್ರೇಜ್‌ ಹುಟ್ಟಿಸಿದೆ.

Advertisement

ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ರಿಲೀಸ್‌ ಆಗಲಿರುವ ʼದೇವರʼ ಈ ವರ್ಷದ ಬಹು ನಿರೀಕ್ಚಿತ ಸಿನಿಮಾಗಳಲ್ಲಿ ಒಂದು. ಟ್ರೇಲರ್‌ ಮೂಲಕ ಜೂ.ಎನ್‌ಟಿಆರ್‌ ಅವರ ಮಾಸ್‌ ಲುಕ್‌ ನೋಡಿ ಫ್ಯಾನ್ಸ್‌ ಗಳು ಕುತೂಹಲದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಹೈದರಾಬಾದ್ ನ ಮಾದಾಪುರದ ನೊವೊಟೆಲ್‌ನಲ್ಲಿ ಭಾನುವಾರ (ಸೆ.22ರಂದು) ʼದೇವರʼ ಪ್ರೀ ರಿಲೀಸ್‌ ಇವೆಂಟ್‌ ನಡೆಸಲು ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿತ್ತು. ಇನ್ನೇನು ಕಾರ್ಯಕ್ರಮ ಆರಂಭಗೊಳ್ಳಲಿದೆ ಎನ್ನುವ ಕಾರಣದಿಂದ ಇವೆಂಟ್‌ ನಡೆಯುವ ಸ್ಥಳಕ್ಕೆ ಸಾವಿರಾರು ಮಂದಿ ಜೂ.ಎನ್‌ ಟಿಆರ್‌ ಅವರ ಅಭಿಮಾನಿಗಳು ಆಗಮಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ಕ್ಯಾನ್ಸಲ್‌ ಮಾಡಲಾಗಿದೆ.

ನಿರೀಕ್ಷೆಗಿಂತ ಹೆಚ್ಚಿನ ಸೇರಿದ್ದರಿಂದ ಭದ್ರತಾ ದೃಷ್ಟಿಯಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಇದರಿಂದ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್‌ ಗಳಿಗೆ ಭಾರೀ ನಿರಾಶೆಯಾಗಿದೆ.

Advertisement

ಜನ ಹೆಚ್ಚಾಗಿ ವಿಐಪಿ ಸೀಟ್‌ ಗಳನ್ನು ಕೂಡ ಫ್ಯಾನ್ಸ್‌ ಗಳನ್ನು ಆಕ್ರಮಿಸಿಕೊಂಡಿದ್ದಾರೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಇವೆಂಟ್‌ ಕ್ಯಾನ್ಸಲ್‌ ಮಾಡಲಾಗಿದೆ.

ಇತ್ತ ಪ್ರೀ ರಿಲೀಸ್‌ ಇವೆಂಟ್‌ ರದ್ದಾದ ಬೆನ್ನಲ್ಲೇ ಸ್ಥಳದಲ್ಲಿ ನೆರದಿದ್ದ ಸಾವಿರಾರು ಮಂದಿ ನಿರ್ಮಾಪಕರು ಮತ್ತು ಸಂಘಟಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿಯನ್ನು ಅರಿತ ಜೂನಿಯರ್ ಎನ್ ಟಿಆರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

“ದೇವರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಕ್ಕಾಗಿ ನಾನು ತುಂಬಾ ದುಃಖಿತನಾಗಿದ್ದೇನೆ. ನಾನು ನಿಮ್ಮೊಂದಿಗೆ ಸಮಯ ಕಳೆಯಲು ಮತ್ತು ʼದೇವರʼ ಬಗ್ಗೆ ಅನೇಕ ಆಸಕ್ತಿದಾಯಕ ವಿವರಗಳನ್ನು ಹಂಚಿಕೊಳ್ಳಬೇಕೆಂದಿದ್ದೆ. ಚಿತ್ರಕ್ಕಾಗಿ ಮಾಡಿದ ಪ್ರಯತ್ನಗಳನ್ನು ವಿವರಿಸಲು ಉತ್ಸುಕನಾಗಿದ್ದೆ. ಆದರೆ ಭದ್ರತಾ ಕಾರಣಗಳಿಂದ ಕಾರ್ಯಕ್ರಮ ನಡೆಯಲು ಸಾಧ್ಯವಾಗಲಿಲ್ಲ. ನಾನು ನಿಮ್ಮ ನಿರಾಶೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ನನ್ನ ನೋವು ನಿಮಗಿಂತ ಹೆಚ್ಚು. ಇವೆಂಟ್ ರದ್ದತಿಗೆ ನಿರ್ಮಾಪಕರು ಅಥವಾ ಸಂಘಟಕರನ್ನು ದೂಷಿಸುವುದು ತಪ್ಪು” ಎಂದು ಅವರು ಹೇಳಿದ್ದಾರೆ.

“ನಾವು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು. ನಾವು ಈ ಚಿತ್ರಕ್ಕಾಗಿ ವರ್ಷಗಳಿಂದ ಶ್ರಮಿಸಿದ್ದೇವೆ. ಮತ್ತು ಅದನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಬಯಸಿದ್ದೇವೆ. ವಿಶೇಷವಾಗಿ ಇದು 6 ವರ್ಷಗಳ ನಂತರ ನಮ್ಮ ಪ್ರೀತಿಯ ಮ್ಯಾನ್ ಆಫ್ ಮಾಸ್ ಎನ್‌ಟಿಆರ್ ಅವರ ಮೊದಲ ಸೋಲೋ ರಿಲೀಸ್‌ ಇದು. ಆದರೆ ನಾವು ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಪ್ರೀ ರಿಲೀಸ್ ಇವೆಂಟ್ ನ್ನು ಗಣೇಶ್ ನಿಮಾರ್ಜನಂನ ಬಹಳ ಹತ್ತಿರದಲ್ಲಿ ನಿಗದಿಪಡಿಸಲಾಗಿತ್ತು. ಈ ರೀತಿಯ ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಕನಿಷ್ಠ ಒಂದು ವಾರದ ತಯಾರಿ ಅಗತ್ಯವಿರುತ್ತದೆ. ಹೆಚ್ಚುವರಿಯಾಗಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯು ಅನೇಕ ಸವಾಲುಗಳನ್ನು ಸೃಷ್ಟಿಸಿದೆ” ಎಂದು ಚಿತ್ರ ತಂಡ ಹೇಳಿದೆ.

“ಇಂದು ಮಳೆ ಬಾರದಿದ್ದರೂ ಹೊರಾಂಗಣ ಕಾರ್ಯಕ್ರಮವನ್ನು ನಾವು ಯೋಜಿಸಿದ್ದರೂ ಸಹ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತಿರಲಿಲ್ಲ. ಹೆಚ್ಚಿನ ಜನಸಂದಣಿಯಿಂದಾಗಿ ಬ್ಯಾರಿಕೇಡ್‌ಗಳು ಮುರಿದುಬಿದ್ದಿದ್ದರಿಂದ ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಅಭಿಮಾನಿಗಳನ್ನು ನಿಯಂತ್ರಿಸಲಾಗಲಿಲ್ಲ. ಪ್ರತಿಯೊಬ್ಬರ ಸುರಕ್ಷತೆಗಾಗಿ, ನಾವು ಇವೆಂಟ್ ನ್ನು ರದ್ದುಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ನಿಮ್ಮಲ್ಲಿ ಅನೇಕರು ನಿಮ್ಮ ನಾಯಕನನ್ನು ಆಚರಿಸಲು ಮತ್ತು ನೋಡಲು ದೇಶದ ವಿವಿಧ ಭಾಗಗಳಿಂದ ಪ್ರಯಾಣಿಸಿದ್ದೀರಿ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅನಾನುಕೂಲತೆಗಾಗಿ ನಾವು ತೀವ್ರವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಪರಿಸ್ಥಿತಿಗಾಗಿ ನಿಜವಾಗಿಯೂ ವಿಷಾದಿಸುತ್ತೇವೆ. ನಿಮ್ಮ ತಿಳುವಳಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು” ಚಿತ್ರತಂಡ ಹೇಳಿದೆ.

ಕೊರಟಾಲ ಶಿವ ನಿರ್ದೇಶನದ ʼದೇವರʼ ಚಿತ್ರವು ಇದೇ ಶುಕ್ರವಾರ (ಸೆಪ್ಟೆಂಬರ್ 27 ರಂದು) ಬಿಡುಗಡೆಯಾಗಲಿದೆ. ಜೂನಿಯರ್ ಎನ್‌ಟಿಆರ್ ಜತೆ ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ತೆರೆ ಹಂಚಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next