ತಲುಪಿಸುವ ಉದ್ದೇಶದಿಂದ ಎರಡನೇ ಬಾರಿಗೆ ಮಾವು ಮೇಳ ಹಮ್ಮಿಕೊಂಡಿದ್ದು, ಮಾವು ಬೆಳೆಗಾರರ ಸಂಕಷ್ಟಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ಹಾಗೂ ಗ್ರಾಹಕರಿಗೆ ನೇರವಾಗಿ ರೈತರಿಂದಲೇ ಸ್ವಾದಿಷ್ಟಭರಿತ ಮಾವಿನ ಹಣ್ಣು ಒದಗಿಸುವ ನಿಟ್ಟಿನಲ್ಲಿ ಮೇಳವನ್ನು ಆಯೋಜಿಸಿದೆ.
Advertisement
ಪಟ್ಟಣದ ರಾಣಿ ಸರ್ಕಲ್ ಸಮೀಪದಲ್ಲಿರುವ ನಂದಿ ಉಪಚಾರ ಹೋಟೆಲ್ ಹತ್ತಿರ ಮಾವು ಮೇಳ ಆಯೋಜಿಸಲು ಅಧಿಕಾರಿಗಳು ನಿರ್ಧರಿಸಿದ್ದು, ಬೆಂಗ ಳೂರಿನ ಲಾಲ್‌ಬಾಗ್‌ನಲ್ಲಿ ಮೇ 27ರಿಂದ ಮಾವು ಹಾಗೂ ಹಲಸು ಮೇಳ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ನಡೆಸಲು ನಿರ್ಧರಿಸಲಾಗಿದೆ.
Related Articles
Advertisement
ರಿಯಾಯಿತಿ ದರದಲ್ಲಿ ಸಸಿ ಮಾರಾಟ: ಮಾವು ಮೇಳದ ಜೊತೆ ಹಲಸಿನ ಸ್ಟಾಲ್‌ಗಳಿಗೆ ಅವಕಾಶ ಮಾಡಿ ಕೊಡಲಾಗುತ್ತಿದೆ. ತೋಟ ಗಾರಿಕೆ ಇಲಾಖೆ ಸಸ್ಯ ಸಂತೆ ಮೂಲಕ ಮಾವು, ಸೀಬೆ ಸೇರಿದಂತೆ ವಿಭಿನ್ನ ತಳಿಯ ಸಸಿ ರಿಯಾಯಿತಿ ಅಂದರೆ ಸರ್ಕಾರ ನಿರ್ಧರಿಸಿದ ದರದಲ್ಲಿ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸ ಲಾಗಿದೆ. ಮಾವು ಮಾರಾಟ ಮಾಡಬೇಕೆಂದರೆ ಬೆಂಗಳೂರು ನಗರದ ಲಾಲ್‌ಬಾಗ್ ಹೋಗಬೇಕಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮಾವಿನ ಮಾರಾಟ ಮಾಡುವ ಸುವರ್ಣಾವಕಾಶ ಕಲ್ಪಿಸುತ್ತಿರುವುದರಿಂದ ವಿವಿಧ ತಳಿಯ ಹಣ್ಣುಗಳನ್ನು ಮಾವು ಮೇಳದಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಅವಕಾಶ ಜಿಲ್ಲೆಯ ಜನತೆಗೆ ದೊರೆಯಲಿದೆ.
ಜಿಲ್ಲಾಡಳಿತದಿಂದ ಪ್ರಚಾರ: ದೇವನಹಳ್ಳಿ ಜಿಲ್ಲಾ ಕೇಂದ್ರವಾದ ಬಳಿಕ ಎರಡನೇ ಬಾರಿ ಮಾವು ಮೇಳ ಆಯೋಜಿಸಲು ತೋಟಗಾರಿಕೆ ಇಲಾಖೆಯೂ ಸಹ ಉತ್ಸಾಹದಿಂದ ಮುಂದೆ ಬಂದು ತಿಂಗಳ ಅಂತ್ಯದ ವೇಳೆಗೆ ದೇವನಹಳ್ಳಿ ಭಾಗದ ಜನತೆಗೆ ಹಣ್ಣಿನ ಸವಿ ರುಚಿ ನೀಡುವಂತೆ ಆಗಿದೆ. ಜಿಲ್ಲೆಯಲ್ಲಿ ಮಾವು ಮೇಳ ಹಮ್ಮಿಕೊಂಡಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಪ್ರಚಾರ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಾವು ಮೇಳವನ್ನು ಮೇ 27ರಿಂದ 29 ರವರೆಗೆ ಪಟ್ಟಣದ ರಾಣಿಸರ್ಕಲ್‌ನ ನಂದಿ ಉಪಚಾರ ಹತ್ತಿರದಲ್ಲಿ ಸ್ಟಾಲ್‌ಗಳನ್ನು ಹಾಕಿ ರೈತ ರಿಂದ ಮಾವು ಮಾರಾಟ ಮಾಡಲಾಗುವುದು. ಸ್ಥಳೀಯ ತಳಿಗಳ ಮಾವು, ಹಲಸಿನ ಹಣ್ಣು ರೈತ ರಿಂದ ಗ್ರಾಹಕರು ನೇರವಾಗಿ ತೆಗೆದುಕೊಳ್ಳ ಬಹುದು.ಮಾವಿನ ಮೇಳಕ್ಕೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಡಲಾಗಿದೆ.● ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಾವು ಮೇಳ ಮಾಡುವುದರಿಂದ ಗ್ರಾಹಕರಿಗೆ ವಿಭಿನ್ನ ರೀತಿಯ ಹಣ್ಣು ನೀಡಲು ಅನುಕೂಲವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ಮಳೆಯಿಂದ ಮಾವಿನ ಇಳುವರಿ ಸಾಕಷ್ಟು ಕುಂಠಿತವಾಗಿದೆ. ಮಾವು ಮೇಳ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮಧ್ಯವರ್ತಿಗಳ ಕಾಟ ತಪ್ಪಿಸಿದ್ದು, ಗ್ರಾಹಕರಿಗೆ ಗುಣಮಟ್ಟದ ಹಣ್ಣನ್ನು ನೀಡಲು ಅನುಕೂಲವಾಗಿದೆ.
● ನಾರಾಯಣಸ್ವಾಮಿ, ರೈತ ಮಾವು ಮೇಳದಲ್ಲಿ ಮಾವನ್ನು ಖರೀದಿಸಲು ಬೆಂಗಳೂರಿನ ಲಾಲ್‌ಬಾಗ್, ಇತರೆ ಕಡೆ ಹೋಗುತ್ತಿದ್ದೆವು. ಇದೀಗ ದೇವನಹಳ್ಳಿಯಲ್ಲೇ ಮಾವು ಮೇಳ ಮಾಡುತ್ತಿರುವುದರಿಂದ ಮಾವಿನ ರುಚಿ ಸವಿಯಲು ಅನುಕೂಲವಾಗಿದೆ.
● ಪ್ರಭುದೇವ್, ಗ್ರಾಹಕ