ಕಟೀಲು: ಅಹಂಕಾರವನ್ನು ದೂರವಿಟ್ಟು ವಿನಯದ ಭಕ್ತಿಯಿಂದ ಬೇಡಿದರೆ ದೇವರು ಅನುಗ್ರಹಿಸುತ್ತಾನೆ ಎಂದು ಉಡುಪಿಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಹೇಳಿದರು.
ಅವರು ರವಿವಾರ ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಭಾÅಮರೀ ಸಭಾಂಗಣದಲ್ಲಿ ಕೋಟಿ ಜಪ ಯಜ್ಞದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಣಿಲ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ತುಳು ವಿದ್ವಾಂಸ ಖ್ಯಾತ ವಾಗ್ಮಿ ಡಾ| ಗಣೇಶ್ ಅಮೀನ್ ಸಂಕಮಾರ್ ಉಡಲ್ದ ಉಳ್ಳಾಲ್ತಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ತುಳುನಾಡಿನಲ್ಲಿ ದುರ್ಗೆ ಉಳಾಲ್ತಿಯು ಅರ್ಥನಾಗಿ ಬಂದ ಭಕ್ತರನ್ನು ಪೊರೆಯುವ ತಾಯಿಯಾಗಿದ್ದಾಳೆ. ಅದುವೇ ನಮ್ಮ ತುಳುನಾಡಿನ ಸತ್ಯ ನಂಬಿಕೆ ಮೂಲನಂಬಿಕೆಯಾಗಿದೆ ಎಂದರು. ಮಡಂತ್ಯಾರು ರೌದ್ರನಾಥೇಶ್ವರ ದೇವಳದ ಧರ್ಮದರ್ಶಿ ಎನ್. ರವಿ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭ ಕಟೀಲು ದೇಗುಲಕ್ಕೆ ಸಹಕರಿಸಿದ ದಾನಿಗಳನ್ನು ಸಮ್ಮಾನಿಸಲಾುತು.
ಕಟೀಲು ದೇಗುಲ ಆಡಳಿತ ಸಮಿತಿ ಅಧ್ಯಕ್ಷ ಮತ್ತು ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಬ್ಯಾಂಕ್ ಆಫ್ ಬರೋಡದ ಜನರಲ್ ಮ್ಯಾನೇಜರ್ ಎಂ.ಜೆ. ನಾಗರಾಜ, ಮಂಗಳೂರು ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ, ಕಾರ್ಪೋ ರೇಶನ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಪಿ.ವಿ. ಭಾರತಿ, ಉದ್ಯಮಿ ಪೆರ್ಮುದೆ ಅಶೋಕ ಶೆಟ್ಟಿ, ಕಟೀಲು ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಕಿಶೋರ್ ಶೆಟ್ಟಿ, ಉಡುಪಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ, ನಮ್ಮ ಕುಡ್ಲ ವಾಹಿನಿ ಮಂಗಳೂರು ನಿರ್ದೇಶಕ ಲೀಲಾಕ್ಷ ಕರ್ಕೆರಾ, ಮುಂಬಯಿ ಉದ್ಯಮಿ ಇನ್ನ ಪ್ರವೀಣ್ ಜಿ. ಶೆಟ್ಟಿ, ಪದ್ಮನೂರು ನೀಲೇಶ್ ಶೆಟ್ಟಿಗಾರ್, ಬೆಂಗಳೂರು ಜಗದೀಶ ರೆಡ್ಡಿ, ನರರೋಗ ತಜ್ಞ ಡಾ| ವೆಂಕಟರಮಣ ಬೆಂಗಳೂರು, ಉದ್ಯಮಿ ಬದ್ರೀನಾಥ್ ಕಾಮತ್, ಪಡುಬಿದ್ರೆ ಖಡೆYàಶ್ವರಿ ದೇಗುಲದ ಅಧ್ಯಕ್ಷ ವೈ. ಎನ್. ರಾಮಚಂದ್ರ ರಾವ್, ಮಂಗಳೂರು ಮುಗ್ರೋಡಿ ಕನ್‌ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ ಮುಗ್ರೋಡಿ ಉಪಸ್ಥಿತರಿದ್ದರು.
ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಸ್ವಾಗತಿಸಿದರು. ಭಾಸ್ಕರದಾಸ್ ಎಕ್ಕಾರು ವಂದಿಸಿದರು. ದಯಾನಂದ ಕಟೀಲು ನಿರೂಪಿಸಿದರು.