Advertisement

ದೇವಲ್ ಗಾಣಗಾಪುರ ನಕಲಿ ವೆಬ್ ಸೈಟ್: ಕೊನೆಗೂ ವಿಚಾರಣೆಗೆ ಹಾಜರಾದ ಅರ್ಚಕರು

08:23 PM Jul 09, 2022 | Team Udayavani |

ಕಲಬುರಗಿ: ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾಸ್ಥಳ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ ದೇವರ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿರುವ ದೇವಾಲಯದ ಐವರು ಅರ್ಚಕರು ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾರೆ.

Advertisement

ಅರ್ಚಕರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈ ಹಿಂದೆ ಎರಡು ನೋಟಿಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ.‌

ವಂಚನೆ ಸಂಬಂಧ ದೇವಾಲಯದ ಐವರ ಅರ್ಚಕರ ವಿರುದ್ದ ಮೊದಲು ದೇವಲ್ ಗಾಣಗಾಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ ತದನಂತರ ಜಿಲ್ಲಾ ಸೈಬರ್ ಕ್ರೈಂ ( ಸಿಇಎನ್) ಠಾಣೆಗೆ ವರ್ಗಾವಣೆಯಾಗಿದ್ದರಿಂದ ಠಾಣಾ ಇನ್ಸಪೆಕ್ಟರ್ ಸೋಮಲಿಂಗ ಕಿರದಳ್ಳಿ ಈ ಮೊದಲು ಕಳೆದ ಜೂನ್ 27ರಂದು ವಿಚಾರಣೆಗೆ ಹಾಜರಾಗುವಂತೆ ಮೊದಲ ನೋಟೀಸ್ ನೀಡಿದ್ದರು.‌ ಆದರೆ ಅರ್ಚಕರು ವಿಚಾರಣೆಗೆ ಗೈರು ಹಾಜರಾಗಿದ್ದರು.‌ತದನಂತರ ನೀಡಲಾಗಿದ್ದ ಎರಡನೇ ನೋಟಿಸ್ ಗೂ ಗೈರು ಹಾಜರಾಗಿದ್ದರು.‌

ಮೂರನೇ ನೋಟೀಸ್ ನೀಡಿ ಜುಲೈ 9 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಹೀಗಾಗಿ ಅರ್ಚಕರು ಶನಿವಾರ ವಿಚಾರಣೆಗೆ ಹಾಜರಾದರು.‌ ನಕಲಿ‌ ವೆಬ್ ಸೈಟ್ ವಿಳಾಸ ಹಾಗೂ ಖಾತೆಗಳ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.‌ ಮತ್ತೆ ಎರಡ್ಮೂರು ದಿನದೊಳಗೆ ವಿಚಾರಣೆಗೆ ಕರೆಯಲಾಗುವುದು ಎಂದು ತಿಳಿಸಿ ವಾಪಸ್ಸು ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next