Advertisement
ತೆಂಕುತಿಟ್ಟಿನ ಹಲವು ಮೇಳಗಳಿಗೆ ಸಂಘ ಸಂಸ್ಥೆಗಳಿಗೆ ಹಾಗೂ ಮಕ್ಕಳ ತಂಡಗಳಿಗೆ ಬೇಕಾದ ಪೋಷಾಕುಗಳನ್ನು ನಿರ್ಮಿಸಿಕೊಟ್ಟು ಕಾಸರಗೋಡಿನಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವ್ಯಾಪ್ತಿಯಾಗಿ ಯಕ್ಷಗಾನ ಕಲೆಯು ಉಳಿಯಲು ಮತ್ತು ಬೆಳೆಯಲು ಕಾರಣಕರ್ತರಾದರು ಎಂದು ಹಿರಿಯ ಯಕ್ಷಗಾನ ಕಲಾವಿದ ನಾಟ್ಯಗುರು ದಿವಾಣ ಶಿವಶಂಕರ ಭಟ್ ಅವರು ಹೇಳಿದರು.
Related Articles
Advertisement
ಅಧ್ಯಕ್ಷತೆಯನ್ನು ಬಳಗದ ಸದಸ್ಯ ಬಾಲಕೃಷ್ಣ ಬೆಳಿಂಜ ವಹಿಸಿದ್ದರು. ಶ್ರೀ ರಾಮನಾಥ ಸಭಾಭವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಿತಿಯ ಸದಸ್ಯ ಸತ್ಯನಾರಾಯಣ ಸ್ವಾಗತಿಸಿದರು. ಕೋಶಾಧಿಕಾರಿ ಸಂದೇಶ್ ಎನ್. ವಂದಿಸಿದರು. ಡಾ| ರತ್ನಾಕರ ಮಲ್ಲಮೂಲೆ ಪ್ರಾಸಾವಿಕ ನುಡಿಗಳನ್ನಾಡಿದರು. ತ್ರಿಶಾ ಜಿ.ಕೆ. ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ಉಪನ್ಯಾಸವನ್ನು ಮಾಡಿದ ಬಳಗದ ಯುವ ಕಲಾವಿದ ಹಾಗೂ ಮಂಗಳೂರು ಪಿ.ಎ.ಎಂಜಿ ನಿಯರಿಂಗ್ ಕಾಲೇಜಿನ ಉಪನ್ಯಾಸಕ ಶಶಿಧರ ಕುದಿಂಗಿಲ ಮಾತನಾಡಿ, ಭಾಷೆಯ ಉಳಿವಿನ ಮೂಲಕ ಒಂದು ಪ್ರಾದೇಶಿಕ ಸಂಸ್ಕೃತಿಯೂ ಉಳಿಯುತ್ತದೆ. ಜಾಗತೀಕರಣದ ಪ್ರಭಾವ ಸ್ಥಳೀಯ ಭಾಷೆ ಕಲೆ ಮತ್ತು ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಹೃದಯದ ಭಾಷೆಯ ಅಳಿವು ಮನುಷ್ಯನ ಸೃಜನಾತ್ಮಕ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ.
ಈ ನಿಟ್ಟಿನಲ್ಲಿ ಕಾಸರ ಗೋಡಿನಲ್ಲಿ ಕನ್ನಡ ಸದಾ ಕಾಲ ಉಳಿಯಬೇಕು. ಕನ್ನಡಿಗರು ಅದರಲ್ಲೂ ಯುವಜನತೆ ಈ ಮರ್ಮವನ್ನು ಅರಿತುಕೊಳ್ಳಬೇಕು. ಇಂದಿನ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಯುವಕರಲ್ಲಿ ಚಿಂತನೆಯ ಮನೋಭಾವ ಹಾಗೂ ಓದುವಿಕೆ ಕಡಿಮೆಯಾಗಿದೆ. ಪತ್ರಿಕೆಯನ್ನು ಓದುವ ಮನೋಭಾವವೂ ಕನ್ನಡಿಗರಲ್ಲಿ ಕಡಿಮೆಯಾಗುತ್ತಿದೆ. ದಿನಪತ್ರಿಕೆಯ ಓದಿನಿಂದ ಸಕಾಲಿಕ ಜ್ಞಾನ ಮಾತ್ರವಲ್ಲ ಭಾಷೆ ಸಂಸ್ಕೃತಿಯ ಆಗುಹೋಗುಗಳನ್ನೂ ತಿಳಿಯಲು ಸಾಧ್ಯ. ದಿನಪತ್ರಿಕೆ ಹಾಗೂ ನಿಯತಕಾಲಿಕಗಳ ಓದುವ ಅಭ್ಯಾಸವನ್ನು ದಿನಚರಿಯ ಒಂದು ಭಾಗವೆಂಬಂತೆ ರೂಢಿಸಿಕೊಳ್ಳಬೇಕು ಎಂದು ಶಶಿಧರ ಅವರು ನುಡಿದರು.
ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷದಿಂದ ಅಧ್ಯಾಪನ ಬದುಕಿಗೆ ಕಾಲಿರಿಸಿದ ಸಿರಿಚಂದನ ಬಳಗದ ಪದಾಧಿಕಾರಿಗಳಾದ ದಿವಾಕರ ಬಲ್ಲಾಳ್ ಎ.ಬಿ, ಪ್ರಶಾಂತ ಹೊಳ್ಳ ಎನ್, ಪ್ರದೀಪ್‌ಕುಮಾರ್‌ಎಡನೀರು ಹಾಗೂ ರಾಜೇಶ್‌ಎಸ್.ಪಿ. ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ತಾಳಮದ್ದಳೆಸಭಾ ಕಾರ್ಯಕ್ರಮದ ಬಳಿಕ ಸಿರಿಚಂದನ ಬಳಗದ ಯುವ ಕಲಾವಿದರಿಂದ “ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ರೋಹಿಣಿ ದಿವಾಣ ಹಾಗೂ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ಮದ್ದಳೆಯಲ್ಲಿ ಪುಂಡಿಕೈ ರಾಜೇಂದ್ರ ಪ್ರಸಾದ್, ಚೆಂಡೆಯಲ್ಲಿ ಶ್ರೀಸ್ಕಂದ ದಿವಾಣ ಸಹಕರಿಸಿದರು.
ಮುಮ್ಮೇಳದಲ್ಲಿ ಬಲ ರಾಮನಾಗಿ ನವೀನ ಕುಂಟಾರು, ನಾರದನಾಗಿ ಕಾರ್ತಿಕ್ ಪಡ್ರೆ, ಶ್ರೀಕೃಷ್ಣನಾಗಿ ಶಶಿಧರ ಕುದಿಂಗಿಲ, ಜಾಂಬವಂತನಾಗಿ ದಿವಾಕರ ಬಲ್ಲಾಳ್ ಎ.ಬಿ. ಸಹಕರಿಸಿದರು ಇದಮಿತ್ಥಂ
ಯಕ್ಷಗಾನದ ಬಣ್ಣಗಾರಿಕೆ ಹಾಗೂ ವೇಷ ಭೂಷಣಗಳ ಸಾಂಪ್ರದಾಯಿಕ ರೂಪುರೇಖೆಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿರುವ ದೇವಕಾನರು ತಮ್ಮ ಅಧ್ಯಯನಕ್ಕಾಗಿ ಹಲವು ವರುಷಗಳ ಕಾಲ ಪ್ರಸಿದ್ಧ ಮೇಳಗಳ ಹಿರಿಯ ಕಲಾವಿದರನ್ನು ಭೇಟಿಯಾಗುತ್ತಿದ್ದರು. ತೆಂಕುತಿಟ್ಟಿನ ಪರಂಪರಾಗತ ಶೈಲಿಯನ್ನು ವೇಷಗಳ ವೈಶಿಷ್ಟÂಗಳನ್ನು ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡಿದ್ದರು. ಆದ ಕಾರಣ ಬಣ್ಣಗಾರಿಕೆ ಹಾಗೂ ವೇಷಭೂಷಣಗಳ ಬಗ್ಗೆ ದೇವಕಾನರು ಇದಮಿತ್ಥಂ ಎಂದು ಹೇಳಬಲ್ಲ ಕಲಾವಿದನೂ ವಿದ್ವಾಂಸನೂ ಆಗಿದ್ದರು ಎಂದು ಶಿವಶಂಕರ ಭಟ್ ಅವರು ಹೇಳಿದರು.