ಶೌಚಾಲಯ ನಿರ್ಮಿಸಿ ವರ್ಷವೇ ಗತಿಸಿದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಉದ್ಘಾಟನೆಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಗ್ರಾಮದ
ಮಹಿಳೆಯರು ಶೌಚಕ್ಕೆ ಬಯಲು, ಜಾಲಿಗಿಡಗಳ ಮರೆಯನ್ನೇ ಆಶ್ರಯಿಸುವಂತಾಗಿದೆ.
Advertisement
ಸುತ್ತಲೂ ಜಾಲಿಗಿಡಗಳು ಕಟ್ಟಡದೆತ್ತರಕ್ಕೆ ಬೆಳೆದಿದ್ದು, ಶೌಚಾಲಯ ಕಾಣದಂತಾಗಿದೆ.ರಾಷ್ಟ್ರೀಯ ಮಹಾತ್ಮ ಗಾಂ ಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೌಚಾಲಯ
ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ. ಸರ್ಕಾರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದ್ದರೂ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದ ನಿರ್ಮಿಸಿದ ಸಾರ್ವಜನಿಕ ಶೌಚಾಲಯಕ್ಕೆ ಸಮರ್ಪಕ ನೀರು, ನಿರ್ವಹಣೆ, ವಿದ್ಯುತ್ ಸೌಲಭ್ಯ ಒದಗಿಸದ್ದರಿಂದ ನಿರುಪಯುಕ್ತವಾಗಿವೆ.
ಶೌಚಕ್ಕೆ ಬಯಲನ್ನೇ ಆಶ್ರಯಿಸುವಂತಾಗಿದೆ. ನಿರ್ಮಿಸಿದ ಶೌಚಾಲಯ ಕಟ್ಟಡಗಳು ಉದ್ಘಾಟನೆಗೆ ಮುನ್ನವೇ ಹಾಳಾಗಿ ಹಾಳು ಕೊಂಪೆಯಂತಾಗುತ್ತಿವೆ. ಸರ್ಕಾರದ ಲಕ್ಷಾಂತರ ರೂ. ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ನವಿಲಗುಡ್ಡ: ಸಮೀಪದ ನವಿಲಗುಡ್ಡ ಗ್ರಾಮದ ಹೊರವಲಯದಲ್ಲಿ ಎರಡು ಹೈಟೆಕ್
ಶೌಚಾಲಯ ನಿರ್ಮಿಸಲಾಗಿದೆ. ಇವುಗಳಿಗೆ ನೀರಿನ ಸೌಲಭ್ಯ ಕಲ್ಪಿಸದ್ದರಿಂದ ಎರಡು
ವರ್ಷಗಳಿಂದ ನಿರುಪಯುಕ್ತವಾಗಿವೆ. ಈ ಶೌಚಾಲಯಗಳನ್ನು ಗ್ರಾಮದಿಂದ ಅರ್ಧ ಕಿ.ಮೀ. ಅಂತರದಲ್ಲಿ, ಮಹಿಳೆಯರು ಒಬ್ಬರೇ ಹೋಗಲಾರದಂತ ಜಾಗದಲ್ಲಿ
ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
Related Articles
ಶೌಚಾಲಯಗಳಿಗೆ ನೀರಿನ ಸೌಲಭ್ಯ ಕಲ್ಪಿಸಿ ಉದ್ಘಾಟಿಸಿ ಮಹಿಳೆಯರಿಗೆ ಅನುಕೂಲ
ಕಲ್ಪಿಸಬೇಕೆಂದು ಗ್ರಾಮಸ್ಥರಾದ ರಂಗಪ್ಪ, ಹುಸೇನ್ ಪಾಷಾ ಆಗ್ರಹಿಸಿದ್ದಾರೆ.
Advertisement