Advertisement

ಅವೈಜ್ಞಾನಿಕ ನಿಯಮ ಕೈಬಿಡಿ

06:41 PM Jun 26, 2020 | Naveen |

ದೇವದುರ್ಗ: ಶಿಕ್ಷಕರ ವರ್ಗಾವಣೆ ಕರಡಿನಲ್ಲಿರುವ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಇಂದಿರಾ ಅವರಿಗೆ ಮನವಿ ಸಲ್ಲಿಸಿದರು.

Advertisement

ಶೇ.25ರಷ್ಟು ಖಾಲಿ ಹುದ್ದೆಗಳರುವ ತಾಲೂಕಿನಲ್ಲಿ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಅವಕಾಶವಿಲ್ಲ ಎಂಬ ನಿಯಮ ರದ್ದುಗೊಳಿಸಬೇಕು. ವಿಭಾಗದ ಒಳಗಡೆ ವರ್ಗಾವಣೆಗೆ ನಿಗದಿ ಪಡಿಸಿದ ಶೇ.2ರ ಮಿತಿಯನ್ನು ಶೇ.4ಕ್ಕೆ ಹೆಚ್ಚಿಸಬೇಕು. ಅಂತರ್‌ ವಿಭಾಗ ವರ್ಗಾವಣೆಗೆ ನಿಗದಿ ಪಡಿಸಿದ ಶೇ.2ರ ಮಿತಿಯನ್ನು ಶೇ.4ಕ್ಕೆ ಹೆಚ್ಚಿಸಬೇಕು. 10ವರ್ಷಕ್ಕೂ ಹೆಚ್ಚು ಕಾಲ ಕಲ್ಯಾಣ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅವರ ಮೂಲ ಜಿಲ್ಲೆಗಳಿಗೆ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು. ಇತರೇ ಶಿಕ್ಷಕ ಮತ್ತು ಶಿಕ್ಷಕಿಯರ ಪ್ರಕರಣದ ಆದ್ಯತೆಯನ್ನು ಬೇರ್ಪಡಿಸದೇ ಸೇವಾ ಜೇಷ್ಠತೆ ಆಧಾರದ ಮೇಲೆ ವರ್ಗಾವಣೆಗೆ ಅವಕಾಶ ನೀಡಬೇಕು. ಪತಿ ಹಾಗೂ ಪತ್ನಿ ಒಂದೇ ತಾಲೂಕಿನ ಬೇರೆ ಬೇರೆ ಕ್ಲಸ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅಂತಹ ದಂಪತಿ ಪ್ರಕರಣಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಪರಸ್ಪರ ವರ್ಗಾವಣೆಗೆ ನಿಗದಿಪಡಿಸಿರುವ 7 ವರ್ಷಗಳ ಸೇವೆ ಕಡ್ಡಾಯ ಮಾಡಿರುವುದನ್ನು ಕೈಬಿಟ್ಟು ಮೊದಲಿನಂತೆ 3 ವರ್ಷಗಳ ಸೇವೆ ನಿಯಮ ಮುಂದುವರಿಸಬೇಕು. ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಂಘಟನೆ ತಾಲೂಕು ಅಧ್ಯಕ್ಷ ವಿಠೊಬಾ ನಾಯಕ, ಕಾರ್ಯದರ್ಶಿ ಬಸವರಾಜ, ರಾಜ್ಯ ಸಮಿತಿ ಸದಸ್ಯ ಎಂ.ಜಿ. ಸತೀಶ, ಕಿಶನ್‌ ಪವಾರ, ಯಲ್ಲನಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next