ದೇವದುರ್ಗ: ಕೋವಿಡ್ ವೈರಸ್ ಭೀತಿ ಹಿನ್ನೆಲೆಯಲು ದಾನಿಗಳು ಬಡವರಿಗೆ ಸಹಾಯದ ಹಸ್ತ ಚಾಚಿದ್ದಾರೆ. ಆದರೆ ಇಲ್ಲಿ ಸಾಮಾಜಿಕ ಅಂತರ ಮರೆಯಾಗಿರುವುದು ಕಂಡು ಬಂದಿದ್ದು, ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಒಂದೂವರೆ ತಿಂಗಳಿಂದ ಕೋವಿಡ್ ವೈರಸ್ ಒತ್ತಡಕ್ಕೆ ಲಾಕ್‌ಡೌನ್ ಘೋಷಣೆ ಹಿನ್ನೆಲೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಹೊಟ್ಟೆ ತುಂಬ ಊಟವಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಂಘ ಸಂಸ್ಥೆ ರಾಜಕೀಯ ಪಕ್ಷದ ಮುಖಂಡರ ಆಹಾರ ಪದಾರ್ಥ ಅಗತ್ಯ ವಸ್ತುಗಳ ವಿತರಣೆ ವೇಳೆ ಸಾಮಾಜಿಕ ಅಂತರ ಪಾಲನೆ ಆಗದೇ ಸಮಸ್ಯೆಗೆ ಕಾರಣವಾಗುತ್ತಿದೆ.
ರಾಯಚೂರು ಜಿಲ್ಲೆ ಗ್ರೀನ್ ಝೋನ್ ಹಿನ್ನೆಲೆಯಲ್ಲಿ ಮೇ 4ರಂದು ಲಾಕ್‌ಡೌನ್ ಕೊಂಚ ಸಡಿಲಿಕೆ ಆಗುತ್ತಿದ್ದಂತೆ ಸಾಮಾಜಿಕ ಅಂತರ ಉಲ್ಲಂಘನೆ ಆಗುತ್ತಿದೆ. ಗುಂಪು ಗುಂಪಾಗಿ ಆಹಾರ ಪದಾರ್ಥಗಳು ಕೈಲಾದಷ್ಟು ಉಚಿತವಾಗಿ ವಿತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಸರಕಾರ ರೂಪಿಸಿರುವ ಕೋವಿಡ್ ಮಾರ್ಗಸೂಚಿಗಳು ಮೂಲೆಗುಂಪಾಗಿರುವ ಆತಂಕ ಹೆಚ್ಚುವಂತೆ ಮಾಡಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ನಿಮಯಗಳು ಪಾಲನೆಯಲ್ಲಿ ಸಂಘ ಸಂಸ್ಥೆಗಳು ರಾಜಕೀಯ ಮುಖಂಡರು ಸಾಮಾಜಿಕ ಅಂತರ ಕಾಪಾಡದೇ ಆಹಾರ ಪದಾರ್ಥಗಳು ವಿತರಣೆ ವೇಳೆ ಅಪಾಯಕಾರಿ ಆಗುತ್ತಿದೆ ಎನ್ನಲಾಗುತ್ತಿದೆ.
ಸಂಘ ಸಂಸ್ಥೆ ರಾಜಕೀಯ ಪಕ್ಷದವರು ಜನರ ಮನೆ ಮನೆಗೆ ಆಹಾರ ಧಾನ್ಯಗಳು ಕಿಟ್ ವಿತರಿಸುತ್ತಿದ್ದಾರೆ. ಪಟ್ಟಣದಲ್ಲಿರುವ ಬಹುತೇಕ ಬ್ಯಾಂಕ್ ಗಳಲ್ಲಿ ಹಣ ಪಡೆಯಲು ಬ್ಯಾಂಕ್ ಮುಂದೆ ಮುಗಿಬಿದ್ದ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ತಾಲೂಕು ಆಡಳಿತ ಪೊಲೀಸ್ ಇಲಾಖೆ ಹಲವು ಬಾರಿ ಸಾಮಾಜಿಕ ಅಂತರ ಕಾಪಾಡುವಂತೆ ಜಾಗೃತಿ ಮೂಡಿಸಿದೆ.
ಕೋವಿಡ್ ಲಾಕ್‌ಡೌನ್‌ಗೆ ಸಿಲುಕಿರುವ ಬಡವರಿಗೆ ಉಚಿತ ಆಹಾರ ಧಾನ್ಯ ಮಾಸ್ಕ್, ಸ್ಯಾನಿಟೈಸರ್ ಸೇರಿ ಅಗತ್ಯ ವಸ್ತುಗಳನ್ನು ವಿತರಿಸುವ ಜನರ ಸಾಮಾಜಿಕ ಕಳಕಳಿಯೇ ಈಗ ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಗೃಹ ಬಳಕೆ ದಿನ ವಸ್ತು ತರಕಾರಿ, ಕಿರಾಣಿ ಅಂಗಡಿ ವಸ್ತುಗಳ ಖರೀದಿಯಲ್ಲಿ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ. ತಿಳಿವಳಿಕೆ ಕೊರತೆ ಮಧ್ಯೆ ಬುದ್ಧಿವಂತ ನಾಗರಿಕರು ಅಗತ್ಯ ವಸ್ತುಗಳ ವಿತರಣೆ ವೇಳೆ ಸಾಮಾಜಿಕ ಅಂತರ ಕಾಪಾಡದೇ ಮೈಮರೆತ್ತಿದ್ದಾರೆ. ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಕುಳಿತುಕೊಂಡು, ಒಬ್ಬರಿಗೊಬ್ಬರು ಅಂತರ ಕಾಪಾಡದೇ ಕೊರೊನಾ ವೈರಸ್ ಸೋಂಕಿತರು ಇಲ್ಲದ ಜಿಲ್ಲೆಯಲ್ಲಿ ಆಹಾರ ಪದಾರ್ಥಗಳು ವಿತರಣೆಯಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ.
ನಾಗರಾಜ ತೇಲ್ಕರ್