Advertisement

ಸಾಮೂಹಿಕ ವಿವಾಹ ಬಡವರಿಗೆ ವರದಾನ

04:41 PM May 13, 2019 | Naveen |

ದೇವದುರ್ಗ: ಪ್ರತಿ ವರ್ಷ ಸಾಮೂಹಿಕ ವಿವಾಹ ಆಯೋಜಿಸುತ್ತಿರುವ ಸುಕ್ಷೇತ್ರ ದೇವರಗುಡ್ಡ ಬಡವರ ಹಸಿವು ನೀಗಿಸುವ ಕ್ಷೇತ್ರವಾಗಿ ಬೆಳೆಯಬೇಕು ಎಂದು ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಮೀಪದ ದೇವರಗುಡ್ಡ ಗ್ರಾಮದ ಶಿವಯೋಗಿ ಶ್ರೀ ಶರಣ ಅಮಾತೇಶ್ವರ ದೇವಸ್ಥಾನದಲ್ಲಿ ರವಿವಾರ ಆಯೋಜಿಸಿದ್ದ 26 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪುಣ್ಯಕ್ಷೇತ್ರದಲ್ಲಿ ಪುಣ್ಯ, ಧಾರ್ಮಿಕ ಕೆಲಸಗಳು ಆಗಾಗ ನಡೆಯುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹಗಳು ಬಡವರಿಗೆ ವರವಾಗಿವೆ. ಇಂತಹ ಕಾರ್ಯಕ್ರಮಗಳು ಇತರರಿಗೆ ಪ್ರೇರಣೆ ಆಗಬೇಕು ಎಂದು ಹೇಳಿದರು.

ವೀರಗೋಟದ ಶ್ರೀ ಅಡವಿಲಿಂಗ ಮಹಾರಾಜ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳ ಮೇಲೆ ಭಕ್ತರಿಗೆ ನಂಬಿಕೆ ಬರಬೇಕು. ಆಧುನಿಕ ಯುಗದಲ್ಲಿ ಯುವಕರಿಗೆ ಮೊಬೈಲ್ ಮೇಲಿರುವ ಆಸಕ್ತಿ ಮಠ, ಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಇಲ್ಲ ಎಂದು ವಿಷಾದಿಸಿದ ಅವರು, ನಂಬಿಕಯೇ ಮಾನವನ ಜೀವನ ಬದಲಾವಣೆಗೆ ಪ್ರೇರಣಾ ಶಕ್ತಿ ಎಂದರು.

ಉಚಿತ ಸಾಮೂಹಿಕ ವಿವಾಹ ಹಿನ್ನೆಲೆ ಸುಕ್ಷೇತ್ರ ದೇವರಗುಡ್ಡ ಗ್ರಾಮದ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

Advertisement

ಡಾ| ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಖಂಡಯ್ಯ ತಾತ ದೇವರಗುಡ್ಡ, ಶ್ರೀ ಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ನಿಜಲಿಂಗ ಸ್ವಾಮೀಜಿ, ಶ್ರೀ ಪ್ರಭು ಪಂಡಿತಾರಾಧ್ಯರು, ಶ್ರೀ ಶಿವಕುಮಾರ ಸ್ವಾಮೀಜಿ, ನಿಂಗಣ್ಣ ತಾತಾ ಗೊಂದೇನೂರು, ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸದಾಶಿವಯ್ಯ ತಾತಾ ಮುಂಡರಗಿ, ಗಂಗಪ್ಪಯ್ಯ ತಾತಾ ಮಾನಸಗಲ್, ಜಹಿರುದ್ಧೀನ್‌ ಪಾಷಾ ತಾತಾ, ಗುರು ಬಸವರಾಜ ಗುರುಗಳು ನಿಜಾನಂದ ಆಶ್ರಮ ಮಂದಕಲ್, ವಿ.ವಸಂತಕೃಷ್ಣ ಅರ್ಚಕ ಕನಕಗಿರಿ, ಸಿಪಿಐ ಮಹ್ಮದ್‌ ಶಿರಾಜ್‌, ಪಿಎಸ್‌ಐ ಮಂಜುನಾಥ, ಶಿಕ್ಷಣ ಸಂಯೋಜಕ ಸುರೇಶ ಪಾಟೀಲ, ಶಾಂತಕುಮಾರ, ತಿರುಪತಿ ಸೂಗೂರು, ವೇಣುಮೂರ್ತಿ ಚನ್ನಯ್ಯ ತಾತಾ, ಶರಣಪ್ಪ ತಾತಾ ಸೇರಿ ಸಾವಿರಾರು ಭಕ್ತರು ಇದ್ದರು.

ಅಚ್ಚುಕಟ್ಟು ವ್ಯವಸ್ಥೆ: ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಟ್ಟಣ ಸೇರಿ ಬೇರೆ ಬೇರೆ ತಾಲೂಕಿನಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಪುರುಷರು, ಮಹಿಳೆಯರಿಗೆ ಊಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಂದರಲ್ಲಿ ನೀರಿನ ಟ್ಯಾಂಕರ್‌ಗಳನ್ನು ನಿಲ್ಲಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಭಕ್ತರಿಗೆ ಯಾವುದೇ ಕೊರತೆ ಆಗದಂತೆ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿತ್ತು. ವಾಹನ, ಬೈಕ್‌ ನಿಲುಗಡೆಗೆ ಆರೇಳು ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಬಿಸಿಲಿಗೆ ತತ್ತರ: ಬೇಸಿಗೆ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದೆ. ವೇದಿಕೆ ಕಾರ್ಯಕ್ರಮದಲ್ಲಿ ಏರ್‌ಕೂಲರ್‌ ವ್ಯವಸ್ಥೆ ಮಾಡಿದ್ದರೂ ಬಿಸಿ ಗಾಳಿಗೆ ವೇದಿಕೆಯಲ್ಲಿದ್ದ ಬಹುತೇಕ ಗಣ್ಯರು, ಸ್ವಾಮೀಜಿಗಳು ಆಮಂತ್ರಣ ಪತ್ರಿಕೆಯಿಂದ ಗಾಳಿ ಬೀಸಿಕೊಳ್ಳುತ್ತಿದ್ದರು. ಕೆಳ ಭಾಗದಲ್ಲಿ ಕುಳಿತ ಭಕ್ತರು ಸೆಖೆಗೆ ಮೈಯೆಲ್ಲ ನೀರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next