Advertisement

ಸರ್ಕಾರಗಳ ನೀತಿ ರೈತಪರ ಇರಲಿ

07:28 PM Nov 09, 2019 | Naveen |

ದೇವದುರ್ಗ: ಬರ ಮತ್ತು ನೆರೆಗೆ ತುತ್ತಾದ ರೈತರ ಪರ ಕೆಲಸ ಮಾಡದ ಸರಕಾರಗಳ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಶುಕ್ರವಾರ ಉಪತಹಶೀಲ್ದಾರ್‌ ಶ್ರೀನಿವಾಸ ಚಾಪಲ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲಾ ಮತ್ತು ತಾಲೂಕು ಆಡಳಿತ ಗಾಡ್‌ನಿದ್ರೆಗೆ ಜಾರಿದ್ದು, ರೈತರು ಸಂಕಷ್ಟ ಅನುಭವಿಸಬೇಕಾಗಿದೆ. ಪ್ರವಾಹ ನೆರೆಯಿಂದ ಸಾವಿರಾರ ರೂ. ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಯಾಗಿದ್ದು, ಇಲ್ಲಿವರೆಗೆ ರೈತರಿಗೆ ನಷ್ಟದ ಪರಿಹಾರ ನೀಡದೇ ಮಲತಾಯಿ ಧೋರಣೆ ತಾಳಿದ್ದಾರೆ ಎಂದು ದೂರಿದರು.

ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್‌ 10ವರೆಗೆ ನೀರು ಹರಿಸಬೇಕು. ಬಲದಂಡೆ ಮುಖ್ಯ ಕಾಲುವೆಗಾಗಿ ಭೂಮಿ ಕಳೆದುಕೊಂಡ ಆಗ್ರಹಾರ, ಮಸೀದಿಪುರ, ಶಾಂವತಗಲ್‌ ಸೇರಿ ನೊಂದ ರೈತರಿಗೆ ಸಮಪರ್ಕವಾಗಿ ಭೂ ಪರಿಹಾರ ಒದಗಿಸಬೇಕು. ತಾಲೂಕಿನ ಎಲ್ಲಾ ರೈತರಿಗೂ 2018 ಹಿಂಗಾರು ಹಂಗಾಮಿನ ಬೆಳೆನಷ್ಟ ಪರಿಹಾರ ನೀಡಬೇಕು.

ಫಸಲ್‌ ಭೀಮಾ ಯೋಜನೆಯಡಿ ವಿಮೆ ಕಂತು ತುಂಬಿದ ರೈತರಿಗೆ ಪರಿಹಾರ ಒದಗಿಸಬೇಕು. ನೆರೆ ಸಂತ್ರಸ್ತರ ಗ್ರಾಮಗಳಲ್ಲಿ ಪುನರ್ವಸತಿ ಕಲ್ಪಿಸಬೇಕು. ಬೆಳೆ ನಷ್ಟಕ್ಕೆ ಎಕರೆಗೆ 20 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನೋಂದಣಿ ಕಚೇರಿಯಲ್ಲಿ ಎರಡನೇ ಮಹಡಿಯಲ್ಲಿದ್ದು, ವೃದ್ಧರಿಗೆ ಸೇರಿ ಇತರೆರಿಗೆ ತೊಂದರೆ ಉಂಟಾಗುತ್ತಿದೆ. ಕಳೆಗಡೆ ಕಚೇರಿ ಸ್ಥಳಾಂತರ ಮಾಡಬೇಕು. ಸರಕಾರದ ನಿರ್ಬಂಧವಿದ್ದರೂ ತಾಲೂಕಿನ್ಯಾದಂತ ಬಯೋ ರಾಸಾಯನಿಕ ಕ್ರಿಮಿನಾಶಕಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಮಳೆಯಿಂದಾಗಿ ಬಹುತೇಕ ಗ್ರಾಮಗಳ ರಸ್ತೆಗಳ ತೀರ ಹದಗೆಟ್ಟು ಹೋಗಿದ್ದು, ದುರಸ್ತಿ ಕಾರ್ಯದ ಕೆಲಸ ಅಧಿಕಾರಿಗಳು ಬೇಗನೆ ಆರಂಭಿಸಬೇಕು. ಬ್ಯಾಂಕ್‌ ಗಳಲ್ಲಿ ರೈತರಿಗೆ ಸಾಲ ಸಿಗುತ್ತಿಲ್ಲ. ತಾಲೂಕು ಆಡಳಿತ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆದು ಸರಳ ಸಾಲ ದೊರಕುವಂತೆ ಮಾಡಬೇಕು.

Advertisement

ಕ್ಯಾದಿಗೇರಾ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯುತ್ತಿಲ್ಲ. ಹೀಗಾಗಿ ರೈತರು ಜನಸಾಮಾನ್ಯರು ಬ್ಯಾಂಕಿಗೆ ಅಲೆದಾಡುವಂತಾಗಿದೆ. ಇಲ್ಲಿನ ಸಮಸ್ಯೆ ಕುರಿತು ಬಗೆಹರಿಸಲು ಪ್ರತ್ಯೇಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬೂದೆಯ್ಯಸ್ವಾಮಿ ಗಬ್ಬೂರ, ಬೆಟ್ಟನಗೌಡ ಅಗ್ರಹಾರ, ಮಲ್ಲಪ್ಪಗೌಡ ಗಬ್ಬೂರ, ಬಸನಗೌಡ ಅಗ್ರಹಾರ, ಉಮಾಪತಿಗೌಡ ನಗರಗುಂಡ, ರಾಮನಗೌಡ ಗಣೇಕಲ್‌, ಆಂಜನೇಯ್ಯ, ಮಸ್ತಾನ್‌, ಉಮ್ಮಣ್ಣ ನಾಯಕ, ಶಿವುಕುಮಾರ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next