Advertisement

ಡೋಂಡಂಬಳಿ ಗ್ರಾಮದ ಹೊಲದಲ್ಲಿ ಯಂತ್ರ-ಮಂತ್ರ ಕಲ್ಲು ಪತ್ತೆ

12:18 PM Feb 19, 2020 | Naveen |

ದೇವದುರ್ಗ: ದೊಂಡಂಬಳಿ ಗ್ರಾಮದ ಹೊಲವೊಂದರಲ್ಲಿ ಯಂತ್ರ-ಮಂತ್ರ ಕಲ್ಲು ಪತ್ತೆಯಾಗಿದೆ. ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ| ಚನ್ನಬಸಪ್ಪ ಮಲ್ಕಂದಿನ್ನಿ ಬಿಳಿ ಕಣ ಶಿಲೆ ಪತ್ತೆ ಹಚ್ಚಿದ್ದಾರೆ. ಇಂತಹ ಯಂತ್ರ ಮಂತ್ರಶಾಸ್ತ್ರ ಚತುರ್ವೇದಗಳಲ್ಲೊಂದಾದ ಅಥರ್ವಣ ವೇದದಲ್ಲಿ ನಿರೂಪಿತವಾಗಿದೆ. ಅದರಲ್ಲಿ ಪರಮೇಶ್ವರ ಪಾರ್ವತಿ ದೇವಿಗೆ ನಿರೂಪಿಸಿದ. ಇದನ್ನು ಅಗ್ನಿ ದೇವರು ತಿಳಿದುಕೊಂಡು ನಂತರ ಮಹಾಮುನಿಗಳಾದ ವಶಿಷ್ಟ ಮಹರ್ಷಿಗಳು ಅರಿತುಕೊಂಡು ಬಳಕೆಗೆ ತಂದರು ಎಂಬ ನಂಬಿಕೆಯಿದೆ ಎಂದು ಡಾ| ಮಲ್ಕಂದಿನ್ನಿ ಮಾಹಿತಿ ನೀಡಿದ್ದಾರೆ.

Advertisement

ಅಥರ್ವಣವೇದ ಸಾಮಾನ್ಯರ ನಂಬಿಕೆ ಪ್ರತಿಬಿಂಬಿಸುವ ಯಂತ್ರ ಮಂತ್ರ ಮೋಡಿ ಮಾಡುವ ವಿದ್ಯೆ ಒಳಗೊಂಡಿದೆ. ರೋಗಾದಿಗಳು ದುಷ್ಟಬೂತಗಳನ್ನು ಮಂತ್ರ-ತಂತ್ರಗಳಿಂದ ಕಡಿಮೆ ಮಾಡಬಹುದು ಎಂದು ಹೇಳಿದೆ. ದೊಂಡಂಬಳಿ ಗ್ರಾಮದಲ್ಲಿ ಪತ್ತೆಯಾದ ಯಂತ್ರ ಚಿಕ್ಕ ಮಕ್ಕಳಿಗೆ ಬರುವ ಬಾಲಗ್ರಹ ಎಂದು ತಿಳಿದು ಬರುತ್ತದೆ.

ಮಕ್ಕಳು ಹಠಮಾಡುವುದು, ಮೌನವಾಗಿರುವುದು, ಕೈಕಾಲುಗಳು ನಿಸ್ತೇಜವಾಗುವ ಲಕ್ಷಣಗಳುಂಟಾದರೆ ಶಾಸ್ತ್ರಜ್ಞರು ಬಾಲಗ್ರಹ ಎಂದು ತಿಳಿದು ತಾಮ್ರದ ತಗಡಿನಲ್ಲಿ ಮಂತ್ರ ಬರೆದು ಅಭಿಮಂತ್ರಿಸಿ ತಾಯತಗಳಲ್ಲಿ ತುಂಬಿ ಕೊರಳು, ರಟ್ಟೆಗಳು ಮತ್ತು ನಡುವಿನಲ್ಲಿ ಕಟ್ಟುತ್ತಿದ್ದರು. ಇದರಿಂದ ಮಗು ಆರಾಮವಾಗುತ್ತಿತ್ತು. ಒಟ್ಟಾರೆ ಅವರವರ ನಂಬಿಕೆಯಲ್ಲಿ ಇದು ಕೆಲಸ ಮಾಡುತ್ತಿತ್ತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಜನರು ಇಂತಹ ಯಂತ್ರ-ಮಂತ್ರಗಳಿಗೆ ಮೊರೆ ಹೋಗುವುದು ಕಡಿಮೆಯಾಗಿದೆ.

ದೊಂಡಂಬಳಿ ಗ್ರಾಮದಲ್ಲಿ ಪತ್ತೆಯಾದ ಅಂಕೆಗಳಿರುವ ಚಪ್ಪಡಿಕಲ್ಲು ಕ್ರಿಶ 19-20ನೇ ಶತಮಾನದ್ದು ಇರಬಹುದು. ಇದರಲ್ಲಿರುವ ಎಡಗಡೆಯಿಂದ ಬಲಭಾಗಕ್ಕೆ ನಾಲ್ಕು ಸಾಲಿನಲ್ಲಿ ಸಂಖ್ಯೆ ಕೂಡಿಸಿದರೆ ಒಟ್ಟು 24 ಬರುತ್ತದೆ. ಹಾಗೆಯೇ ಮೇಲಾºಗದಿಂದ ಕೆಳಭಾಗಕ್ಕೆ ನಾಲ್ಕು ಸಾಲಿನ ಅಂಕಿ ಕೂಡಿಸಿದರೆ ಒಟ್ಟು 24 ಬರುತ್ತದೆ. ಇದು ಬಹಶಃ ಹಿಂದೆ ಜಂಗಮರು ಜಮೀನು ಆಗಿರಬೇಕು. ಹಾಗೆಯೇ ಜಂಗಮರ ಹೊಳೆ ದಂಡೆಯಲ್ಲಿರುವ ಜಮೀನು ಇದ್ದ ಕಾರಣ ಇಲ್ಲಿಗೆ ಸ್ನಾನಕ್ಕೆ ಅನೇಕ ಸ್ಥಳಗಳಿಂದ ಬಂದ ಜನರು ಪರ್ವ, ಅಮಾವಾಸ್ಯೆಗಳ ಕಾಲದಲ್ಲಿ ಹೊಳೆ(ಕೃಷ್ಣಾನದಿ)ಯಲ್ಲಿ ಸ್ನಾನಮಾಡಿ ಯಂತ್ರ ಕಲ್ಲು ನೋಡುವುದರಿಂದ ಮತ್ತು ಪೂಜೆ ಮಾಡುವುದರಿಂದ ಜನರಿಗೆ ಪುಣ್ಯ ಪ್ರಾಪ್ತಿಯಾಗಲಿ ಎಂಬ ಉದ್ದೇಶದಿಂದ ಹಾಕಿಸಿರಬಹುದು ಅಥವಾ ಈ ಕಲ್ಲು ಯಾರೋ ಜಂಗಮರ ಮನೆಯಲ್ಲಿದ್ದು, ಅದು ನಂತರದ ದಿನಗಳಲ್ಲಿ ಜಮೀನಿಗೆ ಏಕೆ ಬಂತು ಎಂದು ಹೇಳುವುದು ನಿಗೂಢವಾಗಿದೆ. ಯಂತ್ರ ಮಂತ್ರ ಕಲ್ಲಿನ ಕೆಳಗೆ ಅಥವಾ ಸಮೀಪದಲ್ಲಿ ನಿಧಿ ಹುದುಗಿಸಿಟ್ಟಿರುತ್ತಾರೆ ಎಂಬ ತಪ್ಪು ಕಲ್ಪನೆಯು ಸಹ ಇಲ್ಲಿನ ಜನರಲ್ಲಿ ಬೇರೂರಿದೆ. ವಿವಿಧ ತರಹದ ಇಲ್ಲ ಸಲ್ಲದ ಅನುಮಾನ ಮೂಡಿಸಿಕೊಂಡಿದ್ದಾರೆ. ಆದ್ದರಿಂದ ಪ್ರಜ್ಞಾವಂತ ಇಲ್ಲಿನ ನಾಗರಿಕರು ಇಂತಹ ತಪ್ಪು ಕಲ್ಪನೆಗಳಿಗೆ ಕಿವಿಗೊಡಬರದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next