Advertisement

ರೈತರು-ಸೈನಿಕರಿಗೆ ಗೌರವ ನೀಡಿ

01:14 PM Sep 23, 2019 | Naveen |

ದೇವದುರ್ಗ: ಪ್ರತಿಯೊಬ್ಬರು ರೈತರಿಗೆ ಸೈನಿಕರಿಗೆ ಗೌರವ ನೀಡಬೇಕು. ಸಾರ್ವಜನಿಕರು ಪೊಲೀಸ್‌ ಮಧ್ಯೆ ಒಳ್ಳೆಯ ಬಾಂಧ್ಯವ ಹೊಂದಬೇಕು ಎಂದು ಪಿಎಸ್‌ಐ ಎಲ್‌.ಬಿ. ಅಗ್ನಿ ಹೇಳಿದರು.

Advertisement

ಪಟ್ಟಣದ ಮುರಿಗೆಪ್ಪ ಖೇಣೇದ್‌ ಫಂಕ್ಷನ್‌ ಸಭಾಂಗಣದಲ್ಲಿ ತಾಲೂಕು ಛಾಯಾಚಿತ್ರಗ್ರಾಹಕರ ಸಂಘ ದೇವದುರ್ಗ ನಾಗರಿಕ ವೇದಿಕೆ ಸಂಯುಕ್ತಾಶ್ರದಲ್ಲಿ ರವಿವಾರ ನಡೆದ 180ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಷ್ಟದಲ್ಲಿ ಸೈನಿಕರು ದೇಶ ರಕ್ಷಣೆಗೆ ಮುಂದಾಗಿದ್ದಾರೆ. ಅವರ ಪರಿಶ್ರಮದಿಂದ ಜನ ನೆಮ್ಮದಿಯಾಗಿದ್ದಾರೆ. ಪ್ರತಿಯೊಂದು ವೇದಿಕೆ ಸೈನಿಕರನ್ನು ನೆನೆದು ಗೌರವ ಸಲ್ಲಿಸುವ ಕೆಲಸ ಆಗಬೇಕಾಗಿದೆ. ದೇಶದ ಬೆನ್ನೆಲುಬು ಅನ್ನದಾತ ರೈತರಿಗೆ ಗೌರವಿಸುವ ಕೆಲಸ ಆಗಬೇಕು. ಹಗಲು ರಾತ್ರಿ ಜೀವನವೇ ಮೂಡುಪಿಟ್ಟು ನಾಡಿಗೇ ಅನ್ನ ನೀಡುತ್ತಿದ್ದಾರೆ.

ಸಾರ್ವಜನಿಕರಲ್ಲಿ ಸಮಯ ಪ್ರಜ್ಞೆ ಬಹಳ ಅವಶ್ಯವಾಗಿದೆ. ತಾಳ್ಮೆ ಎಂಬ ಪದವೇ ಸಮಯ ಪಾಲನೆಯ ಅರ್ಥವಾಗಿದೆ. 24 ತಾಸು ಕೆಲಸ ಮಾಡುವ ಪೊಲೀಸ್‌ ಅಧಿಕಾರಿಗಳಿಗೆ ಸಾರ್ವಜನಿಕರ ಸಹಕಾರ ಬಹು ಮುಖ್ಯವಾಗಿದೆ ಎಂದು ಹೇಳಿದರು.

ಸರಕಾರದ ಸೌಲಭ್ಯಗಳು ಇಲ್ಲದೇ ಜೀವನ ಸಾಗಿಸುವ ಛಾಯಾಚಿತ್ರಗ್ರಾಹಕರಿಗೆ ಸವಲತ್ತುಗಳು ಸಿಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಪತ್ರಕರ್ತ ಸಂಘದ ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, ಛಾಯಾಚಿತ್ರಗ್ರಾಹಕರು ಮಾಧ್ಯಮದ ಒಂದು ಭಾಗ. ಸಮಾಜದಲ್ಲಿ ಅಂಕು ಡೊಂಕು ತಿದ್ದುವ ಕೆಲಸ ಆಗಬೇಕಾಗಿದೆ. ಹಾನಿ ಅವಘಡ ಸಂಭವಿಸಿದಾಗ ಛಾಯಾಚಿತ್ರಗ್ರಾಹಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

Advertisement

ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಭಾನು ಪ್ರಕಾಶ ಖೇಣೆದ, ಮಾಜಿ ಸೈನಿಕ ಭೀಮನಗೌಡ, ಶಿಕ್ಷಕ ಶರಣು ಹುಣಸಗಿ, ಗಂಗನಗೌಡ, ಸುರೇಶ ಅಂಗಡಿ, ತಾಯಪ್ಪ ಭೂಮಣ್ಣ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಅಧ್ಯಕ್ಷ ಬೂದೆಪ್ಪ ಬಳೇ, ಉಪನ್ಯಾಸಕ ಸುಭಾಷ ಪಾಟೀಲ, ಸಂಗಮೇಶ ಹರವಿ, ಆದೆಪ್ಪ ಕುಂಬಾರ, ವೀರೇಶ, ಗುರುನಾಥ ಉಭಾಳೆ, ರವಿಕುಮಾರ ರಾಯಚೂರಕರ್‌, ವಿಜಯಕುಮಾರ ಕುಂಬಾರ, ಆನಂದ ಬಡಿಗೇರ, ರಾಜು ಇಲ್ಲೂರು, ಗುರುಶಾಂತಯ್ಯ, ನಿಂಗಯ್ಯ ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next