Advertisement

ದೇವಾಡಿಗ ಸಂಘ ಪುಣೆ  ಪ್ರತಿಭಾ ಪುರಸ್ಕಾರ, ಆಟಿಡೊಂಜಿ ದಿನ

03:49 PM Aug 12, 2018 | |

ಪುಣೆ: ಪುಣೆ ದೇವಾಡಿಗ ಸಂಘದ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಆಟಿಡೊಂಜಿ ದಿನ ಆಚರಣೆಯು ಆ. 5ರಂದು ಹೊಟೇಲ್‌ ಪಿಕಾಕ್‌ ಸಭಾಂ ಗಣ, ತಿಲಕ್‌ರೋಡ್‌ನ‌ಲ್ಲಿ ನಡೆಯಿತು.

Advertisement

ಸಂಘದ ಅಧ್ಯಕ್ಷ ಸಚಿನ್‌ ಕೆ. ದೇವಾಡಿಗ, ಪ್ರಧಾನ ಸಲಹೆಗಾರ ನರಸಿಂಹ ದೇವಾಡಿಗ ಹಾಗೂ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹತ್ತನೇ ತರಗತಿಯ ವರೆಗಿನ ವಿದ್ಯಾ ರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಶೇ. 82 ಅಂಕಗಳನ್ನು ಪಡೆದ ಆಕಾಂಕ್ಷ ಅಜಯ್‌ ದೇವಾಡಿಗ ಇವರನ್ನು ಸತ್ಕರಿಸಲಾಯಿತು.

ಈ ಸಂದರ್ಭ ವಿಶೇಷ  ಅತಿಥಿಗಳಾಗಿ  ಉಪಸ್ಥಿತರಿದ್ದ  ಹರೀಶ್‌ ದೇವಾಡಿಗ ಮಾತನಾಡಿ, ಸಂಘದ ವತಿಯಿಂದ ಸಮಾಜ ಬಾಂಧವರ ಶಿಕ್ಷಣಕ್ಕೆ ಪ್ರೋತ್ಸಾಹ  ನೀಡುವ ಕಾರ್ಯ ಸ್ತುತ್ಯರ್ಹವಾಗಿದೆ. ಸಂಘದ ಮೂಲಕ ಸಮಾಜಮುಖೀ ಕಾರ್ಯಗಳು  ನಡೆಯುತ್ತಿರಲಿ. ತನ್ನಿಂದಾದ ಸಹಕಾರವನ್ನು ಸಂಘಕ್ಕೆ ನೀಡುತ್ತೇನೆ ಎಂದರು.

ನಾಸಿಕ್‌ನ ಸಂತೋಷ್‌  ದೇವಾಡಿಗ ಮಾತನಾಡಿ,  ಪುಣೆಯಲ್ಲಿ ಸಮಾಜಬಾಂಧವರು  ಸಂಖ್ಯೆಯಲ್ಲಿ ಒಗ್ಗಟ್ಟಿನಿಂದ  ಬೆಸೆದಿರುವುದನ್ನು ಕಂಡಾಗ ನಮ್ಮದೇ ಕುಟುಂಬದಲ್ಲಿ ಸಂಭ್ರಮಿಸಿದ ಅನುಭವ ನೀಡಿತು. ಸಂಘವು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಮುಖ್ಯ ಸಲಹೆಗಾರರಾದ ನರಸಿಂಹ ದೇವಾಡಿಗರು ಮಾತನಾಡಿ, ನಮ್ಮ ಸಂಘವು ಸಮಾಜದ  ಒಗ್ಗಟ್ಟಿಗಾಗಿ  ಶ್ರಮಿಸುವುದಲ್ಲದೆ ಉತ್ತಮ   ಕಾರ್ಯಕ್ರಮಗಳ ಮೂಲಕ ಮಾದರಿ  ಸಂಘವಾಗಿ ಗುರುತಿಸಿಕೊಂಡಿದೆ. ಮುಂದೆಯೂ ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರಲಿ ಎಂದರು. ಸಂಘದ ಅಧ್ಯಕ್ಷ ಸಚಿನ್‌ ಕೆ. ದೇವಾಡಿಗ ಮಾತನಾಡಿ ಹನಿಗೂಡಿ ಹಳ್ಳ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರೂ ತಮ್ಮಿಂದಾದ ಸಹಕಾರವನ್ನು ನೀಡಿ ಜತೆಸೇರಿ ಮಾಡಿದ ಯಾವುದೇ ಕಾರ್ಯವು ಯಶಸ್ವಿಯಾಗಿ ನೆರವೇರುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ನಮ್ಮ ಸಂಘದ ಮಹಿಳೆಯರೆಲ್ಲ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಆಟಿಯ ಸವಿಯನ್ನು ಹಂಚುತ್ತಿರುವುದಕ್ಕೆ ಅವರೆಲ್ಲರನ್ನೂ ಅಭಿನಂದಿಸಬೇಕಾಗಿದೆ ಎಂದು ನುಡಿದು  ವಿದ್ಯಾರ್ಥಿಗಳಿಗೆ  ಶುಭವನ್ನು ಹಾರೈಸಿದರು.

Advertisement

ಸಂಘದ ಸತ್ಕಾರವನ್ನು ಸ್ವೀಕರಿಸಿದ ಆಕಾಂಕ್ಷ ಎ. ದೇವಾಡಿಗ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ್ದಲ್ಲದೆ ನಿಯಮಿತವಾದ ಅಭ್ಯಾಸದಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಯಿತು ಎಂದರು. ಭಾವನಾ ನೃತ್ಯ ಅಕಾಡೆಮಿಯ ಭಾವನಾ ರಾಮ್‌ ದೇವಾಡಿಗ ಸಂಘದ ಕಾರ್ಯಕ್ರಮಕ್ಕೆ ಶುಭ ಕೋರಿದರು. ಲತಾ ಆರ್‌. ದೇವಾಡಿಗ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಸುರೇಶ ಶ್ರೀಯಾನ್‌, ಜತೆ ಪದಾಧಿಕಾರಿಗಳಾದ ನಾರಾಯಣ ದೇವಾಡಿಗ, ವಿಠಲ್‌ ದೇವಾಡಿಗ, ನವೀನ್‌ ದೇವಾಡಿಗ, ಸುಧಾಕರ್‌ ದೇವಾಡಿಗ, ಜಗದೀಶ್‌ ದೇವಾಡಿಗ, ಪುರಂದರ ದೇವಾಡಿಗ, ಸಂತೋಷ್‌ ದೇವಾಡಿಗ, ಸತೀಶ್‌ ದೇವಾಡಿಗ, ಪ್ರಕಾಶ್‌ ದೇವಾಡಿಗ, ಉದಯ್‌ ದೇವಾಡಿಗ, ಶಶಿಕಾಂತಿ ದೇವಾಡಿಗ ಹಾಗೂ ಸುರೇಶ ದೇವಾಡಿಗ ಉಪಸ್ಥಿತರಿದ್ದು ಸಹಕರಿಸಿದರು. ಪ್ರಿಯಾ ಎಚ್‌. ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕವಾಗಿ ಆಟಿ ತಿಂಗಳಲ್ಲಿ ಸಿದ್ಧಪಡಿಸುವ ವಿಶೇಷ ಖಾದ್ಯಗಳನ್ನು ಮಹಿಳೆಯರು ಸಿದ್ಧಪಡಿಸಿ ಭೋಜನ ವ್ಯವಸ್ಥೆಯನ್ನು ಮಾಡಿದ್ದರು. ತಿಮರೆ ಚಟ್ನಿ, ಕುಕ್ಕುದ ಚಟ್ನಿ, ಕುಡುತ ಚಟ್ನಿ, ಉಪ್ಪಡ್‌ ಪಚ್ಚಿರ್‌, ತೊಜಂಕ್‌ ಪಲ್ಯ, ಪತ್ರೊಡೆ, ಪುಂಡಿ, ಸೇಮೆದಡ್ಡೆ, ದೋಸೆ, ಕೊ¨ªೆಲ್‌, ತೆಕ್ಕರೆ ತಲ್ಲಿ, ಪದೆಂಗಿ ಪಾಯಸ, ಗೋದಿದ ಪಾಯಸ, ಮೆತ್ತೆದ ಗಂಜಿ ಇತ್ಯಾದಿ ಖಾದ್ಯಗಳು ಒಳಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next