Advertisement

ದೇವಾಡಿಗ ಸಂಘ ಮುಂಬಯಿ ವಾರ್ಷಿಕ ಮಹಾಸಭೆ, ಶೈಕ್ಷಣಿಕ ನೆರವು ವಿತರಣೆ

12:29 PM Sep 04, 2018 | |

ಮುಂಬಯಿ: ದೇವಾಡಿಗ ಸಂಘ ಮುಂಬಯಿ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಣೆ ಮತ್ತು ಸ್ವಾತಂತ್ರ್ಯ  ದಿನಾಚರಣೆಯು ಆ. 15 ರಂದು  ಸಂಘದ ಅಧ್ಯಕ್ಷರಾದ  ರವಿ ಎಸ್‌. ದೇವಾಡಿಗ ಅಧ್ಯಕ್ಷತೆಯಲ್ಲಿ ನೆರೂಲ್‌ನ ದೇವಾಡಿಗ ಭವನದಲ್ಲಿ ನಡೆಯಿತು.

Advertisement

ಧ್ವಜಾರೋಹಣಗೈದು ಮಾತ ನಾಡಿದ ಅಧ್ಯಕ್ಷ ರವಿ ಎಸ್‌. ದೇವಾಡಿಗ ಅವರು, ಈ   ದಿನ ನಮಗೆ ಎಲ್ಲರಿಗೂ ಮಂಗಳಕರ ಸಂದರ್ಭವಾಗಿದೆ, ಭಾರತದ ಸ್ವಾತಂತ್ರ್ಯ  ದಿನವು ಎಲ್ಲಾ   ಭಾರತೀಯ ನಾಗರಿಕರಿಗೆ ಪ್ರಮುಖ ದಿನವಾಗಿದೆ ಎಂದು ಇತಿಹಾಸದಲ್ಲಿ ಶಾಶ್ವತವಾಗಿ ಉಲ್ಲೇಖೀಸಲಾಗಿದೆ. ಭಾರತದ ಮಹಾನ್‌ ಸ್ವಾತಂತ್ರ್ಯ  ಹೋರಾಟಗಾರರಿಂದ ಅನೇಕ ವರ್ಷಗಳ ಕಠಿಣ ಹೋರಾಟದ ನಂತರ ನಾವು ಬ್ರಿಟಿಷ್‌ ಆಳ್ವಿಕೆಯಿಂದ ಸ್ವಾತಂತ್ರ್ಯ  ಬಂದ ದಿನ. ಭಾರತದ ಸ್ವಾತಂತ್ರ್ಯ ದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಮತ್ತು ಭಾರತದ ಸ್ವಾತಂತ್ರ್ಯ  ಪಡೆಯುವಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿದ ಮಹಾನ್‌ ನಾಯಕರ ಎÇÉಾ ತ್ಯಾಗಗಳನ್ನು ನೆನಪಿಟ್ಟುಕೊಳ್ಳಲು ಆ.  15 ರಂದು ಪ್ರತಿ ವರ್ಷ ಸ್ವಾತಂತ್ರ್ಯ  ದಿನವನ್ನು ಆಚರಿಸುತ್ತೇವೆ. ನಮ್ಮ ಸಂಘದಲ್ಲಿ ನಾವು ಎಲ್ಲರೂ ಒಂದಾಗಬೇಕಿದೆ ಏಕೆಂದರೆ ಮುಂದಿನ  ದಿನಗಳಲ್ಲಿ 2025 ರ ಶತಮಾನೋತ್ಸವದ ಆಚರಣೆಗಾಗಿ ನಾವು ಅನೇಕ ಕಾರ್ಯಕ್ರಮಗಳನ್ನು ಹೊಂದಿದ್ದೇವೆ ಎಂದರು.

ಪ್ರಧಾನ ಗೌರವ  ಕಾರ್ಯದರ್ಶಿ ವಿಶ್ವನಾಥ್‌ ಬಿ. ದೇವಾಡಿಗ,  ಆನಂದ್‌ ಶೇರಿಗಾರ್‌, ಪ್ರಾದೇಶಿಕ ಸಮನ್ವಯ ಸಮಿತಿ ನವಿ ಮುಂಬಯಿಯ  ಮಾಜಿ ಅಧ್ಯಕ್ಷ ಎಚ್‌.  ಮೋಹನ್‌ದಾಸ್‌,  ಜತೆ ಕಾರ್ಯದರ್ಶಿಗಳಾದ ಮಾಲತಿ ಜೆ ಮೊಯಿಲಿ ಮತ್ತು ಗಣೇಶ್‌ ಶೇರಿಗಾರ್‌,  ಕೃಷ್ಣ ಬಿ. ದೇವಾಡಿಗ, ಶಿಕ್ಷಣ ಸಮಿತಿಯ ಅಧ್ಯಕ್ಷ, ಕೋಶಾಧಿಕಾರಿ   ದಯಾನಂದ ದೇವಾಡಿಗ, ವೈಧ್ಯಕೀಯ ಮತ್ತು ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ  ಜನಾರ್ಧನ ದೇವಾಡಿಗ, ಪೂರ್ಣಿಮಾ ದೇವಾಡಿಗ, ಮಹಿಳಾ  ವಿಭಾಗ ಕಾರ್ಯದರ್ಶಿ ನಿತೇಶ್‌ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ ನಗರ ವಲಯದ ಸದಸ್ಯರುಗಳಾದ ಚಂದ್ರಶೇಖರ ದೇವಾಡಿಗ, ಶಾಂತಾ ದೇವಾಡಿಗ, ರಂಜಿನಿ ಮೊಲಿ, ಮಹಿಳಾ ವಿಭಾಗ ಉಪಾಧ್ಯಕ್ಷೆ ಲತಾ ಶೇರಿಗಾರ್‌ ವನಿತಾ ದೇವಾಡಿಗ  ಉಪಸ್ಥಿತರಿದ್ದರು. ಮಾಲತಿ ಜೆ. ಮೊಲಿ ಅವರು ವಂದಿಸಿದರು.

ಭೋಜನದ ನಂತರದ ಸಂಘದ  93 ನೇ ವಾರ್ಷಿಕ ಮಹಾಸಭೆ ರಂಜಿನಿ ಮೊಲಿ ಅವರ  ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅಜೆಂಡಾ ಪ್ರಕಾರ ಚರ್ಚೆ ನಡೆಸಿದರು. ಸಂಘದ ಉನ್ನತಿ ಮತ್ತು ಶತಮಾನೋತ್ಸವದ ಆಚರಣೆಯ  ವಿಷಯವಾಗಿ  ಸದಸ್ಯರು ತಮ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಕುಮಾರಿ  ಸುಮಾ ವೆಂಕಟೇಶ್‌ ಗೌಡ  ಕನ್ನಡ ಭವನ ಸೊಸೈಟಿ ಪ್ರೌಢಶಾಲೆ ಫೋರ್ಟ್‌  ಮತ್ತು  ಸಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ  ಕುಮಾರಿ ಶ್ವೇತಾ ಗೋಪಾಲ್‌ ದೇವಾಡಿಗ ಅವರನ್ನು ಸಂಘದ ಮಾಜಿ ಅಧ್ಯಕ್ಷರಾದ  ಕೆ. ಭುಜಂಗ ರಾವ್‌ ಮತ್ತು  ಶ್ರೀ ಏಕನಾಥೇಶ್ವರಿ  ದೇವಸ್ಥಾನದ ಟ್ರಸ್ಟಿ  ಅಣ್ಣಯ್ಯ ಶೇರಿಗಾರ್‌ ಅವರು ಗೌರವಿಸಿದರು. 224 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಸಂಘದ ಕಚೇರಿ ಮತ್ತು ಬೇರೆ ಬೇರೆ ಪ್ರಾದೇಶಿಕ ಸಮನ್ವಯ ಸಮಿತಿಯ ಕಚೇರಿಯ ವತಿಯಿಂದ ವಿದ್ಯಾರ್ಥಿ ವೇತನವನ್ನು ಪಡೆದರು.  

Advertisement

ಶಿಕ್ಷಣ ವಿಭಾಗದ ಅಧ್ಯಕ್ಷ ಕೃಷ್ಣ ಬಿ. ದೇವಾಡಿಗ ವಿದ್ಯಾರ್ಥಿವೇತನ ವಿತರಿಸುವುದರಲ್ಲಿ ಸಹಕಾರ ನೀಡಿದ ಸದಸ್ಯರ ಸಹಕಾರಕ್ಕಾಗಿ ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next