ಉಡುಪಿ: ದೇವಾಡಿಗ ಸಮಾಜದ ಇತಿಹಾಸದಲ್ಲಿ ಪ್ರಥಮ ಬಾರಿಗೆ ದೇವಾಡಿಗ ಸಮಾಜ ಬಾಂಧವರ ಭಕ್ತರ ಪಾದಯಾತ್ರೆಯು ಉಡುಪಿ ದೇವಾಡಿಗರ ಸೇವಾ ಸಂಘದಿಂದ ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದ ವರೆಗೆ ಜನವರಿ 28 ರ ಭಾನುವಾರ ನಡೆಯಿತು.
ವಿವಿಧೆಡೆಯಿಂದ ಆಗಮಿಸಿದ್ದ ದೇವಾಡಿಗ ಸಮುದಾಯದ 200 ಕ್ಕೂ ಹೆಚ್ಚು ಭಕ್ತರು ಏಕನಾಥೇಶ್ವರಿ ನಾಮಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಉಡುಪಿ ದೇವಾಡಿಗ ಸಂಘದ ನಿಕಟ ಪೂರ್ವ ಅಧ್ಯಕ್ಷ ಮತ್ತು ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರಿನ ಹೊರೆಕಾಣಿಕೆಯ ಪ್ರಧಾನ ಸಂಚಾಲಕರು ಆದ ಶ್ರೀ ಗಣೇಶ ದೇವಾಡಿಗ ಬ್ರಹ್ಮಗಿರಿ ಅವರು ತೆಂಗಿನ ಕಾಯಿ ಒಡೆದು ಪಾದಯಾತ್ರೆಗೆ ಚಾಲನೆ ನೀಡಿದರು.
ದೇವಸ್ಥಾನದ ವಿಶ್ವಸœ ಮಂಡಳಿಯ ಟ್ರಸ್ಟಿಯಾದ ಶ್ರೀ ಎಚ್. ಮೋಹನದಾಸ್ , ಮಂಬಯಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ನರಸಿಂಹ ಅವರು ಪಾದಯಾತ್ರೆ ಯಶಸ್ವಿಯಗಲಿ ಎಂದು ಪ್ರಾರ್ಥಿಸಿ ಶುಭಕೋರಿದರು.
ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷರಾದ ರವಿ.ಎಸ್.ದೇವಾಡಿಗ , ಉಡುಪಿ ಸಂಘದ ಅಧ್ಯಕ್ಷ ಸೀತಾರಾಮ ದೇವಾಡಿಗ , ಉಪಾಧ್ಯಕ್ಷ ನಾರಾಯಣ ಸೇರಿಗಾರ, ಕೋಶಾಧಿಕಾರಿ ಸುದರ್ಶನ ಸೇರಿಗಾರ್, ಮಹಿಳಾ ಸಂಘಟನೆಯ ಅಧ್ಯಕ್ಷೆಯಾದ ಜ್ಯೋತಿ ಎಸ್ ದೇವಾಡಿಗ, ಯುವ ಸಂಘಟನೆಯ ಅಧ್ಯಕ್ಷ ವಿಕ್ರಾಂತ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ರವಿ ಸೇರಿಗಾರ, ಏಕನಾಥೇಶ್ವರಿ ಸೊಸೈಟಿಯ ಅಧ್ಯಕ್ಷ ರತ್ನಾಕರ ಜಿ.ಎಸ್. ಕಾಪು ದೇವಾಡಿಗ ಸಂಘದ ಅಧ್ಯಕ್ಷರಾದ ಉಮೇಶ್ ದೇವಾಡಿಗ, ಎಲ್ಲೂರು ದೇವಾಡಿಗ ಸಂಘದ ಅಧ್ಯಕ್ಷರಾದ ಯೋಗಿಶ್ ದೇವಾಡಿಗ, ಎರ್ಮಾಳು ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ದೀಪಾ ದೇವಾಡಿಗ, ಪಡುಬಿದ್ರೆ ದೇವಾಡಿಗ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ದೇವಾಡಿಗ, ಪ್ರಧಾನ ಕಾರ್ಯದರ್ಶಿ ರಮೇಶ್ ದೇವಾಡಿಗ, ಯುವ ಸಂಘಟನೆಯ ಅಧ್ಯಕ್ಷರಾದ ಶಶಿಧರ ದೇವಾಡಿಗ, ಬ್ರಹ್ಮಾವರ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಸಾಧು ಸೇರಿಗಾರ ಹಾಗೂ ವಿವಿಧ ದೇವಾಡಿಗ ಸಂಘದ ಪದಾದಿಕಾರಿಗಳು ಹಾಗೂ ಸಮಾಜ ಬಾಂಧವರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.