Advertisement

ದೇವಾಡಿಗ ಸಂಘ ಮುಂಬಯಿ ಪ್ರತಿಭಾ ಪುರಸ್ಕಾರ ಪ್ರದಾನ

02:01 PM Sep 01, 2019 | Suhan S |

ಮುಂಬಯಿ, ಆ. 31: ದೇವಾಡಿಗ ಸಂಘ ಮುಂಬಯಿ ಇದರ ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್‌ ಇವರಿಂದ ಉಚಿತ ಪುಸ್ತಕ ವಿತರಣೆ ಮತ್ತು ಆಟಿಡೊಂಜಿ ದಿನ ಕಾರ್ಯಕ್ರಮವು ಆ. 10ರಂದು ನಡೆಯಿತು.

Advertisement

ಭಾಂಡೂಪ್‌ ಸಮಿತಿಯ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಮೆಗ್ಡಾಲಿನ್‌ ಜಿ. ದೇವಾಡಿಗ ಮತ್ತು ಕಾರ್ಯಾಧ್ಯಕ್ಷ ವಿಶ್ವನಾಥ್‌ ಪಿ. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಜರಗಿತು. ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಮತ್ತು ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್‌ ಇದರ ಸಲಹೆಗಾರ್ತಿ ಪ್ರಫುಲ್ಲಾ ವಾಸು ದೇವಾಡಿಗ, ಮ್ಯಾಗ್ಡಾಲಿನ್‌ ಜಿ. ದೇವಾಡಿಗ, ಸುಜಯಾ ದೇವಾಡಿಗ, ಶ್ರೀ ಬ್ರಹ್ಮ ಮಹಾಲಿಂಗೇಶ್ವರ ಪೂಜಾ ಸಮಿತಿಯ ಸದಸ್ಯರಾದ ಸುಧಾ ಮತ್ತು ಚಂದ್ರಾವತಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಭಾಂಡೂಪ್‌ ಪ್ರಾದೇಶಿಕ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ದೇವಾಡಿಗ ಸಂಘ ಮುಂಬಯಿ ಇದರ ಸಮಿತಿ ಸದಸ್ಯ ಹಾಗೂ ಯುವ ಮಾರ್ಗದರ್ಶಕರಾದ ನರೇಶ್‌ ದೇವಾಡಿಗ ಅವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಯುವಕರ ಸಬಲೀಕರಣಕ್ಕೆ ವೇದಿಕೆಯನ್ನು ರಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕು| ಚಿತ್ರಾ ದೇವಾಡಿಗ ವಹಿಸಿ ನಮ್ಮ ತುಳು ನಾಡಿನ ಕುರಿತು ಮಾತನಾಡಿದರು. ಉಪಕಾರ್ಯಾಧ್ಯಕ್ಷೆ ಕು| ತೀರ್ಥಾ ದೇವಾಡಿಗ ಅವರು ಆಟಿಡೊಂಜಿ ದಿನ, ಕೋಶಾಧಿಕಾರಿ ಅಶ್ವಿ‌ನಿ ದೇವಾಡಿಗ ಅವರು ಆಟಿದ ಒಂಜಿ ತಿಂಗೊಲು, ಕಾರ್ಯದರ್ಶಿ ಕುಮಾರಿ ಕನಿಕಾ ದೇವಾಡಿಗರವರು ಬೆನ್ನಿದ ವಿಶೇಷ, ಮುಖ್ಯ ಅತಿಥಿ ಕು| ಓಜಲ್ ಕುಂದರ್‌ ಆಟಿದ, ಕು| ಹರ್ಷಿತಾ ಶೇರಿಗಾರ್‌ ಇವರು ನೃತ್ಯದ ಪ್ರಾಮುಖ್ಯತೆ ಮತ್ತು ಕು| ದೀಪ್ತಿ ಶೇರಿಗಾರ್‌ ತುಳು ಭಾಷೆಯ ಬಗ್ಗೆ ಮಾತನಾಡಿದರು.

ಇಡೀ ಕಾರ್ಯಕ್ರಮವನ್ನು ಪ್ರಾದೇಶಿಕ ಸಮನ್ವಯ ಸಮಿತಿಯ ಯುವ ಮತ್ತು ಡೈನಾಮಿಕ್‌ ಸ್ಪೀಕರ್‌ ಮೇಘಾ ದೇವಾಡಿಗ ನಿರೂಪಿಸಿದರು. ದೇವಾಡಿಗ ಸಂಘದ ಮುಂಬಯಿಯ ಹಿಂದಿನ ಅಧ್ಯಕ್ಷರಾದ ವಾಸು ದೇವಾಡಿಗ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ದೇವಾಡಿಗ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌ ಬಿ ದೇವಾಡಿಗ, ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್‌ ಇದರ ಕಾರ್ಯಾದ್ಯಕ್ಷರಾದ ವಿಶ್ವನಾಥ್‌ ಪಿ. ದೇವಾಡಿಗ, ದೇವಾಡಿಗ ಸಂಘ ಮುಂಬಯಿ ಮಹಿಳಾ ವಿಭಾಗ ಜತೆ ಕಾರ್ಯದರ್ಶಿ ಪ್ರಮೀಳಾ ವಿ. ಶೇರಿಗಾರ್‌, ಜಯ ಎಲ್ ದೇವಾಡಿಗ ಉಪಸ್ಥಿತರಿದ್ದರು. ಸುಧಾಕರ ಎಲ್ಲೂರು ಅವರು ಆಟಿದ ಒಂಜಿ ದಿನ ಕುರಿತು ಮಾತನಾಡಿದರು.

Advertisement

ನರೇಶ್‌ ದೇವಾಡಿಗ ಅವರು ಸಂಘದ ಬಗ್ಗೆ ಮಾತನಾಡಿದರು. ಕು| ಓಜಲ್ ಕುಂದರ್‌ ಅವರು ಆಟಿ ಕಳೆಂಜ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸಿದರು. ಲೋಲಾಕ್ಷಿ ದೇವಾಡಿಗ ಮತ್ತು ಕುಮಾರಿ ಹರ್ಷಿತಾ ಶೇರಿಗಾರ್‌ ನೃತ್ಯ ಪ್ರದರ್ಶಿಸಿದರು. ಉಚಿತ ಪುಸ್ತಕ ವಿತರಣೆಯನ್ನು ನರೇಶ್‌ ದೇವಾಡಿಗ ಅವರು ಪ್ರಾಯೋಜಿಸಿದರು. ಪ್ರಫುಲ್ಲಾ ದೇವಾಡಿಗರು ವಿದ್ಯಾರ್ಥಿ ವೇತನವನ್ನು ನೀಡಿದರು. ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿಯ ಸದಸ್ಯೆಯರು ತಯಾರಿಸಿದ ರುಚಿಕರವಾದ ಮತ್ತು ಸಾಂಪ್ರದಾಯಿಕ ಆಹಾರಗಳನ್ನು ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next