Advertisement
ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ “ಬಿ’ 7 ವಿಕೆಟಿಗೆ 283 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಶುಭಮನ್ ಗಿಲ್ ನಾಯಕತ್ವದ ಇಂಡಿಯಾ “ಸಿ’ 9 ವಿಕೆಟಿಗೆ 232 ರನ್ ಗಳಿಸಿ ಶರಣಾಯಿತು. ಲೀಗ್ ಹಂತದಲ್ಲಿ ಇಂಡಿಯಾ “ಬಿ’ ತಂಡ ಇಂಡಿಯಾ “ಸಿ’ಗೆ ಶರಣಾಗಿತ್ತು. ಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿತು.
ಇಂಡಿಯಾ “ಬಿ’ ತಂಡದ ಆರಂಭವೇನೂ ಭರವಸೆಯಿಂದ ಕೂಡಿರಲಿಲ್ಲ. ಓಪನರ್‌ಗಳಾದ ಋತುರಾಜ್ ಗಾಯಕ್ವಾಡ್ (0), ನಾಯಕ ಪಾರ್ಥಿವ್ ಪಟೇಲ್ (14) 28 ರನ್ ಆಗುವಷ್ಟರಲ್ಲಿ ಇಶಾನ್ ಪೊರೆಲ್‌ಗೆ ವಿಕೆಟ್ ಒಪ್ಪಿಸಿ ವಾಪಸಾಗಿದ್ದರು. ಬಾಬಾ ಅಪರಾಜಿತ್ (13) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಟೀಮ್ ಇಂಡಿಯಾದ ಕೇದಾರ್ ಜಾಧವ್ ಒತ್ತಡವನ್ನು ಮೆಟ್ಟಿ ನಿಂತರು. ಕೊನೆಯಲ್ಲಿ ವಿಜಯ್ ಶಂಕರ್, ಕೃಷ್ಣಪ್ಪ ಗೌತಮ್ ಬಿರುಸಿನ ಆಟವಾಡಿದರು. ತಂಡದ ಮೊತ್ತದಲ್ಲಿ ಭರ್ಜರಿ ಪ್ರಗತಿಯಾಯಿತು.
Related Articles
Advertisement
ಅಗ್ರ ಕ್ರಮಾಂಕದ ವೈಫಲ್ಯಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ “ಸಿ’ ತಂಡದ ಚೇಸಿಂಗ್‌ಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ನಾಯಕ ಶುಭಮನ್ ಗಿಲ್ (1), ಮಾಯಾಂಕ್ ಅಗರ್ವಾಲ್ (28), ವಿರಾಟ್ ಸಿಂಗ್ (6), ಸೂರ್ಯಕುಮಾರ್ ಯಾದವ್ (3), ದಿನೇಶ್ ಕಾರ್ತಿಕ್ (3) ಎಲ್ಲರೂ ಬೇಗನೇ ಪೆವಿಲಿಯನ್ ಸೇರಿಕೊಂಡರು. ಕ್ರೀಸ್ ಆಕ್ರಮಿಸಿಕೊಂಡದ್ದು ವನ್‌ಡೌನ್ ಬ್ಯಾಟ್ಸ್‌ಮನ್ ಪ್ರಿಯಮ್ ಗರ್ಗ್ ಮಾತ್ರ (74). ಎಡಗೈ ಸ್ಪಿನ್ನರ್ ಶಾಬಾಜ್ ನದೀಂ 4 ವಿಕೆಟ್ ಉರುಳಿಸಿದರು. ಕೊಹ್ಲಿ ನಾಯಕತ್ವದ ದಾಖಲೆ ಮುರಿದ ಗಿಲ್
ದೇವಧರ್ ಟ್ರೋಫಿ ಕೂಟದ ಫೈನಲ್‌ನಲ್ಲಿ ಎಡವಿದರೂ ಇಂಡಿಯಾ “ಸಿ’ ತಂಡದ ನಾಯಕ ಶುಭಮನ್ ಗಿಲ್ ನೂತನ ದಾಖಲೆಯೊಂದನ್ನು ಸ್ಥಾಪಿಸಿ ಸುದ್ದಿಯಾದರು. ಈ ಪಂದ್ಯಾವಳಿಯ ಫೈನಲ್‌ನಲ್ಲಿ ತಂಡದ ನಾಯಕತ್ವ ವಹಿಸಿದ ಅತೀ ಕಿರಿಯ ಕ್ರಿಕೆಟಿಗನೆನಿಸಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ದಶಕದ ಹಿಂದಿನ ದಾಖಲೆ ಮುರಿಯಲ್ಪಟ್ಟಿತು. ಸೋಮವಾರ ರಾಂಚಿಯಲ್ಲಿ ತಂಡವನ್ನು ಕಣಕ್ಕಿಳಿಸುವಾಗ ಗಿಲ್ ವಯಸ್ಸು 20 ವರ್ಷ, 57 ದಿನ. 2009-10ರಲ್ಲಿ ದೇವಧರ್ ಟ್ರೋಫಿ ಫೈನಲ್‌ನಲ್ಲಿ ಕೊಹ್ಲಿ 21 ವರ್ಷ, 124ನೇ ದಿನದಲ್ಲಿ ಉತ್ತರ ವಲಯದ ನಾಯಕತ್ವ ವಹಿಸಿದ್ದು ಈವರೆಗಿನ ದಾಖಲೆಯಾಗಿತ್ತು.