Advertisement

ದೇವೇಗೌಡರಿಗೆ ಜಾತಿಯೇ ಆಮ್ಲಜನಕ, ಕುಮಾರಸ್ವಾಮಿಗೆ ಉಸಿರು: ರವಿಕುಮಾರ

11:17 PM Jun 28, 2019 | Lakshmi GovindaRaj |

ಬೆಳಗಾವಿ: “ಜಾತ್ಯತೀತ ಜನತಾದಳ ಎಂಬುದು ನೂರಕ್ಕೆ ನೂರರಷ್ಟು ಒಂದೇ ಜಾತಿಯ ಪಕ್ಷ. ಈ ಜಾತಿ ಬಿಟ್ಟರೆ ಅದು ಶೂನ್ಯ. ಪಕ್ಷದ ವರಿಷ್ಠ ದೇವೇಗೌಡರಿಗೆ ಈ ಜಾತಿಯೇ ಆಮ್ಲಜನಕ, ಕುಮಾರಸ್ವಾಮಿಗೆ ಜಾತಿ ಉಸಿರು. ಜೆಡಿಎಸ್‌ಗೆ ಜಾತಿಯ ಹೆಸರು ಬಿಟ್ಟರೆ ಬೇರೆ ಸಾಧನೆ ಅಥವಾ ಬಂಡವಾಳ ಇಲ್ಲ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಟೀಕಿಸಿದರು.

Advertisement

ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, “ಸಿಎಂ ಕುಮಾರಸ್ವಾಮಿ ಕೈಗೊಂಡಿರುವ ಗ್ರಾಮ ವಾಸ್ತವ್ಯ ಹಗಲು ನಾಟಕ. ಸರ್ಕಾರದ ದುಡ್ಡಿನಲ್ಲಿ ಜೆಡಿಎಸ್‌ ಜಾತ್ರೆ ನಡೆದಿದೆ. ಜೆಡಿಎಸ್‌ ಶಾಸಕರು ಇರುವ ಕ್ಷೇತ್ರಗಳಲ್ಲೇ ಸಿಎಂ ಗ್ರಾಮ ವಾಸ್ತವ್ಯ ನಡೆಯುತ್ತಿದೆ.

ಸರ್ಕಾರದ ಅನುದಾನವೂ ಕೇವಲ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆಯಾಗುತ್ತಿದೆ. ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಕೆಂಪೇಗೌಡರು, ಕೆಂಗಲ್‌ ಹನುಮಂತಯ್ಯ, ವಿಶ್ವೇಶ್ವರಯ್ಯ ಅವರಿಗೆ ಅವಮಾನ ಮಾಡಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next