Advertisement

ರಾಜ್ಯಮಟ್ಟದ ಮಕ್ಕಳ ಸಂಘಟನೆಗಳ ಒಕ್ಕೂಟ ರಚನೆಗೆ ನಿರ್ಣಯ

04:21 PM May 23, 2019 | Team Udayavani |

ಧಾರವಾಡ: ಇಲ್ಲಿ ನಡೆದ ಮಕ್ಕಳ ಲೋಕದ ಮನಸುಗಳ ಚಿಂತನಾ ಸಮಾವೇಶದಲ್ಲಿ ರಾಜ್ಯಮಟ್ಟದ ಮಕ್ಕಳ ಸಂಘಟನೆಗಳ ಒಕ್ಕೂಟ ರಚಿಸಲು ನಿರ್ಣಯ ಕೈಗೊಳ್ಳಲಾಗಿದೆ.

Advertisement

ಒಕ್ಕೂಟ ರಚನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲು ಸಂಚಾಲಕರನ್ನಾಗಿ ಶಂಕರ ಹಲಗತ್ತಿ ಅವರನ್ನು ಆಯ್ಕೆ ಮಾಡಲಾಯಿತು.

ಅತಿಥಿಯಾಗಿದ್ದ ಪರಿಸರ ತಜ್ಞ ಪಿ.ವಿ. ಹಿರೇಮಠ ಮಾತನಾಡಿ, ಮುಂಬರುವ ಅಪಾಯ ಅರಿತು ಮಕ್ಕಳನ್ನು ಜಾಗೃತಗೊಳಿಸಬೇಕಾದರೆ ಅದಕ್ಕೊಂದು ಸಮರ್ಥವಾದ ಸಂಘಟನೆ ಇರಬೇಕು. ಆ ನಿಟ್ಟಿನಲ್ಲಿ ಪರಸರ ವಿನಾಶದಿಂದ ನಾವು ಎದುರಿಸುತ್ತಿರುವ ಸಮಸ್ಯೆಗಳ ಅರಿವು ಮೂಡಿಸುವ ಕಾರ್ಯ ತುರ್ತಾಗಿ ನಡೆಯಬೇಕು ಎಂದರು.

ಸಮಾರೋಪ ಸಮಾರಂಭದಲ್ಲಿ ಮೂರು ಪ್ರಮುಖ ವಿಷಯಗಳ ಕುರಿತು ಘೋಷಿಸಲಾಯಿತು. ಸರ್ವರೂ ಚಪ್ಪಾಳೆ ತಟ್ಟಿ ಈ ಮೂರೂ ಘೋಷಣೆಗಳನ್ನು ಅನುಮೋದಿಸುವ ಮೂಲಕ ಮಂಡಿಸಲಾಯಿತು. ಡಾ|ನಿಂಗು ಸೊಲಗಿ ಘೋಷಿಸಿದರು. ಅವು ಇಂತಿವೆ.

1)ಯಾವುದೇ ಸರಕಾರಿ ಯೋಜನೆಗಳು ರೂಪುಗೊಳ್ಳುವಾಗ, ಅನುಷ್ಠಾನಗೊಳ್ಳುವಾಗ ಮಕ್ಕಳ ಕೇಂದ್ರಿತ ಆಗು ಹೋಗುಗಳ ಬಗ್ಗೆ ಪರಾಮರ್ಶಿಸಿ ನಿರ್ಣಯ ಕೈಗೊಳ್ಳಲು ಮಕ್ಕಳ ಕ್ಷೇತ್ರದ ತಜ್ಞರ ಸಮಿತಿಯೊಂದನ್ನು ಸರಕಾರ ರಚಿಸಿ, ಈ ಸಮಿತಿ ಸಲಹೆ ಮೇರೆಗೆ ಕಾರ್ಯ ಅನುಷ್ಠಾನಗೊಳಿಸುವುದು.

Advertisement

2)ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ, ಬಾಲಭವನ, ಮೊದಲಾದ ಸರಕಾರದ ಅಧಿಧೀನದಲ್ಲಿರುವ ಮಕ್ಕಳ ಕಾರ್ಯ ಕ್ಷೇತ್ರದ ಸಂಸ್ಥೆ, ಅಕಾಡೆಮಿ, ನಿಗಮ-ಮಂಡಳಿಗಳ ಯಾವುದೇ ಸ್ಥಾನಕ್ಕೆ ನೇಮಕ ಮಾಡುವಾಗ ಮಕ್ಕಳ ಸಾಹಿತ್ಯ-ಸಾಂಸ್ಕೃತಿಕ, ಸಂಘಟನೆ ಕ್ಷೇತ್ರದ ಗಣ್ಯರನ್ನೇ ನೇಮಕ ಮಾಡಬೇಕು.

3)ಶಾಲಾ ಶಿಕ್ಷಣದಲ್ಲಿನ ಗೊಂದಲಗಳ ನಿವಾರಣೆಯೊಂದಿಗೆ ಮಕ್ಕಳ ಸೃಜನಶೀಲತೆಯ ಪೋಷಣೆಯ ನಿಟ್ಟಿನಲ್ಲಿ ಸೂಕ್ತ ಕಾರ್ಯ ಯೋಜನೆ ರೂಪಿಸಬೇಕು. ವಿಶೇಷ ಚೇತನ ಮಕ್ಕಳಿಗಾಗಿ ತಾಲೂಕು ಕೇಂದ್ರದಲ್ಲಿ ಸಂಯೋಜಿತ ಶಾಲಾ ಶಿಕ್ಷಣಕ್ಕೆ ಪೂರಕ ಮಕ್ಕಳ ಸ್ನೇಹಿ ವಾತಾವಣವಿರುವ, ಎಲ್ಲ ಸೌಲಭ್ಯ ಹೊಂದಿರುವ ಸಮನ್ವಯ ಸಂಪನ್ಮೂಲ ತರಬೇತಿ ಶಾಲೆಗಳ ನಿರ್ಮಾಣವಾಗಬೇಕು ಎಂದು ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next