Advertisement
ಇಲ್ಲಿ ವಾಹನಗಳ ಸುತ್ತಾಟಕ್ಕೆ ಕೊನೆಯಿಲ್ಲ. ನಗರ ಅಭಿವೃದ್ಧಿಯ ಹೆಸರಿನಲ್ಲಿ 2 ವರ್ಷಗಳ ಹಿಂದೆ ಚೆರ್ಕಳ ಪೇಟೆಯ ಹೆದ್ದಾರಿ ನವೀಕರಿಸಿದ್ದು, ಪೇಟೆಗೆ ತಲುಪುವ ವಾಹನಗಳು, ಪ್ರಯಾಣಿಕರು ಎರಡು ಸುತ್ತು ಬರಬೇಕಾದ ಸ್ಥಿತಿಯುಂಟಾಗಿದೆ. ಪ್ರಧಾನ ಪ್ರವೇಶ ಸ್ಥಳದಲ್ಲಿ ಒಂದು ವೃತ್ತ ಬೇಕಾದಲ್ಲಿ ಎರಡು ವೃತ್ತಗಳನ್ನು ನಿರ್ಮಿಸಿರುವುದು ಇದಕ್ಕೆ ಕಾರಣ. ಇದರಿಂದ ಹೊರ ರಾಜ್ಯಗಳಿಂದ ಬರುವ ಚಾಲಕರು ಯಾವ ಸರ್ಕಲ್‌ನಲ್ಲಿ ಸುತ್ತುವರಿದರೆ ಉದ್ದೇಶಿತ ರಸ್ತೆಗೆ ತಲುಪಬಹುದು ಎಂಬ ಗೊಂದಲ ಎದುರಿಸುವಂತಾಗಿದೆ. ಅಂಗೆ„ ಅಗಲ ಜಾಗದಲ್ಲಿ ಎರಡು ವೃತ್ತಗಳನ್ನು ನಿರ್ಮಿಸಿದಾಗ ಉಂಟಾದ ಅನಾಹುತ ಕಡಿಮೆಯೇನಲ್ಲ. ಆದುದರಿಂದ ನಾನಾ ಭಾಗಗಳಿಂದ ಬರುವ ವಾಹನ ಚಾಲಕರ ಹಾಗೂ ಊರವರ ಪ್ರತಿಭಟನೆಗೆ ಸ್ಪಂ ದಿಸಿದ ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಈ ವೃತ್ತವನ್ನು ತೆರವುಗೊಳಿಸಲು ಆದೇಶಿಸಿದ್ದರು. ಅದರಂತೆ ವರ್ಷಗಳ ಹಿಂದೆ ವೃತ್ತವನ್ನು ತೆರವುಗೊಳಿಸಲಾಯಿತು. ಇದು ಇಲ್ಲಿನ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿರುವುದು ವಿಪರ್ಯಾಸ. ಖಾಸಗಿ ವಾಹನಗಳ ಪಾರ್ಕಿಂಗ್ ಗ್ರೌಂಡ್ ಆಗಿ ಬದಲಾದ ವೃತ್ತದಲ್ಲಿ ರಾತ್ರಿಯಾದರೆ ಹೊರರಾಜ್ಯ ಖಾರ್ಮಿಕರು ಮಲಗಿ ನಿದ್ರಿಸುತ್ತಿದ್ದು ಈ ಮಾರ್ಗವಾಗಿ ಸಂಚರಿಸುವ ಘನವಾಹನಗಳು ಮತ್ತಿತರ ವಾಹನಗಳಿಂದ ಉಂಟಾಗಬಹುದಾದ ಅಪಘಾತ, ಜೀವಹಾನಿ ಸಾಧ್ಯತೆ ಜನರ ಆತಂಕಕ್ಕೆ ಕಾರಣವಾಗಿದೆ.
Related Articles
ಪೇಟೆ ಪ್ರವೇಶಿಸುತ್ತಿದ್ದಂತೆ ಗೊಂದಲ ವಾಗುತ್ತದೆ. ಯಾವ ರಸ್ತೆಯಲ್ಲಿ ಸಂಚರಿ ಸಬೇಕು ಎಂದೇ ತಿಳಿಯುವುದಿಲ್ಲ. ವಾಹನ ಮತ್ತು ಜನದಟ್ಟಣೆ ಹೆಚ್ಚಿರುವುದರಿಂದ ಎಷ್ಟೇ ಜಾಗ್ರತೆ ವಹಿಸಿದರೂ ಸಾಲದು. ವೃತ್ತದ ಕೆಲಸ ಪೂರ್ತಿಗೊಳಿಸಿ, ರಸ್ತೆಯನ್ನು ವಿಸ್ತಾರ ಗೊಳಿಸಿ ನಿರಾತಂಕ ಸಂಚಾರಕ್ಕೆ ಅನುಕೂಲ ಮಾಡುವ ಅಗತ್ಯವಿದೆ. ಚೆರ್ಕಳ ಪೇಟೆಯಲ್ಲಿ ವಾಹನ ಚಲಾಯಿಸುವುದು ಸವಾಲೇ ಸರಿ.
-ಪ್ರಭಾಕರ
ಕೆ.ಕೆ. ಪುರಂ, ಬಸ್ ಚಾಲಕ.
Advertisement
ಸಂಸದರಿಗೆ ಮನವಿಗೆ ತೀರ್ಮಾನಟೂರಿಸ್ಟ್ ಗಾಡಿಗಳು, ಶಬರಿಮಲೆಗೆ ಹೋಗುವ ಭಕ್ತರ ಸಾವಿರಾರು ವಾಹನಗಳು ಎಲ್ಲೆಂದರಲ್ಲಿ ಸಂಚರಿಸುತ್ತಿದ್ದು ಪರದಾಡುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಚಾಲಕರಿಗೂ ಪಾದಚಾರಿಗಳಿಗೂ ಸವಾ ಲಾಗಿರುವ ಇಲ್ಲಿನ ಸಮಸ್ಯೆಗೆ ಶೀಘ್ರ ಪರಿಹಾರ ಕೋರಿ ನೂತನ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
-ಆನಂದ ಮಣಿಯಾಣಿ,
ಚೇನಕ್ಕೋಡು.
-ವಿದ್ಯಾಗಣೇಶ್ ಅಣಂಗೂರು