Advertisement
ನಿತ್ಯ ಸಂಕಷ್ಟ: ದೇವನಹಳ್ಳಿ ನಗರದ ಗಿರಿಯಮ್ಮ ವೃತ್ತದಿಂದ ಹಿಡಿದು, ರಾಣಿ ಸರ್ಕಲ್‌ವರೆಗೆ ರಸ್ತೆಗಳು ಗುಂಡಿ ಬಿದ್ದಿವೆ. ನಗರದ ಹಳೇ ಆರ್‌ಟಿಒ ಕಚೇರಿಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ, ಬೃಹತ್ ಗಾತ್ರದ ಗುಂಡಿ ಬಿದ್ದಿದ್ದು ವಾಹನ ಸವಾರರು ಸಂಚರಿಸಲು ಸಂಕಷ್ಟ ಪಡುವಂತಾಗಿದೆ.
Related Articles
Advertisement
ಅರ್ಧಕ್ಕೆ ನಿಂತ ಕಾಮಗಾರಿ: ದೇವನಹಳ್ಳಿ – ದೊಡ್ಡಬಳ್ಳಾಪುರ ಮಾರ್ಗದ ರಸ್ತೆಗಳಲ್ಲಿಯೂ ಗುಂಡಿಗಳದ್ದೇ ಕಾರುಬಾರು. ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಭಯ ಹೆಚ್ಚು ಮಾಡಿದೆ. ಡಾಬಸ್‌ಪೇಟೆಯಿಂದ ಹೊಸೂರು ಮುಖ್ಯರಸ್ತೆಗೆ ಸೇರಲು ರಿಂಗ್‌ರೋಡ್ ರಸ್ತೆಯನ್ನು 2010ರಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಇದುವರೆಗೂ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದೆ. ದಿನೇ ದಿನೆ ದೇವನಹಳ್ಳಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಮಧ್ಯೆ ರಸ್ತೆಗಳ ಸಂಚಾರ ಬಲು ಕಷ್ಟಕರವಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸವಾರರು, ಚಾಲಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೇವನಹಳ್ಳಿ ನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖ್ಯಾತಿ ಹೊಂದಿದೆ. ಆದರೆ, ರಸ್ತೆಗಳಲ್ಲಿ ಗುಂಡಿ ಗಳನ್ನು ನೋಡಿದರೆ, ಭಯವಾಗುತ್ತದೆ. ಲೋಕೋಪಯೋಗಿ ಇಲಾಖೆಯನ್ನು ಕೇಳಿದರೆ, ರಾಷ್ಟ್ರೀಯ ಹೆದ್ದಾರಿಗೆ ಬರುತ್ತದೆ ಎಂದು ಹೇಳುತ್ತಾರೆ. ಪುರಸಭೆಯನ್ನು ಕೇಳಿದರೆ ಪಿಡಬ್ಲ್ಯುಡಿಗೆ ಬರುತ್ತದೆ ಎಂದು ಹಾರಿಕೆ ಉತ್ತರ ನೀಡಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. -ಎಚ್.ಕೆ.ವೆಂಕಟೇಶಪ್ಪ, ಡಿಎಸ್‌ಎಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ
ಮಳೆಗಾಲ ಪ್ರಾರಂಭವಾಗಿರುವುದರಿಂದಕೂಡಲೇ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಿಸುವ ಕಾರ್ಯ ಮಾಡಬೇಕು. ರಸ್ತೆಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಬೇಕು. ಅಧಿಕಾರಿಗಳು ಎಲ್ಲಿ ರಸ್ತೆ ಗುಂಡಿ ಬಿದ್ದಿದೆಯೋ ಅದನ್ನು ಕೂಡಲೇ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. –ಎಲ್.ಎನ್.ನಾರಾಯಣಸ್ವಾಮಿ, ಶಾಸಕ
ಡಾಂಬರೀಕರಣ ಮಾಡುವಂತೆ ನಾವು ಈಗಾಗಲೇ 2ಬಾರಿರಾಷ್ಟ್ರೀಯಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ನೀಡಿದ್ದೇವೆ. ಇದುವರೆಗೆಕೆಲಸ ಮಾಡಿಲ್ಲ. ಹಾಗಾಗಿ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಆದಷ್ಟು ಬೇಗ ಸಭೆಕರೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತನಾಡಿ ಡಾಂಬರೀಕರಣಕ್ಕೆ ಸೂಚನೆ ನೀಡಲಿದ್ದಾರೆ. –ಕೃಷ್ಣಪ್ಪ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ
–ಎಸ್.ಮಹೇಶ್