Advertisement

ಉಡುಪಿಯ ಮನೆಯಿಂದ 22 ಲಕ್ಷ ರೂ. ಕದ್ದ ಇಬ್ಬರು ಕಳ್ಳರ ಬಂಧನ

09:45 AM Sep 15, 2019 | keerthan |

ಉಡುಪಿ: ಇಲ್ಲಿನ ಒಳಕಾಡಿನ ಮನೆಯೊಂದರಿಂದ ಗುರುವಾರ 22 ಲಕ್ಷ ರೂ ನಗದು ಮತ್ತು ಬೆಳ್ಳಿಯ ವಸ್ತುಗಳನ್ನು ಕದ್ದ ಆರೋಪಿಗಳಿಬ್ಬರನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆರೋಪಿಗಳನ್ನು ಸಾಂಗ್ಲಿ ಮೂಲದ ಅತುಲ್‌ ಮಹದೇವ್‌ ಬಾಂಗ್ನೆ ( 24 ವ) ಮತ್ತು ಸಂದೀಪ್‌ ಚಂದ್ರಕಾಂತ್‌ ಶಿಂಧೆ ( 25ವ) ಎಂದು ಗುರುತಿಸಲಾಗಿದೆ.

ಉಡುಪಿ ಒಳಕಾಡಿನ ಸುನಂದ ಮಾಣಿಕ್ಯ ಪಾಟೀಲ್‌ ಅವರು ಸೆ.12 ರಂದು ಶಾಲೆಗೆ ಹೋಗಿ ಮಕ್ಕಳಿಗೆ ಟಿಫಿನ್ ಕೊಟ್ಟು ಬರುವಾಗ ಬೀಗ ಮುರಿದು ಅಡುಗೆ ಮನೆಯ ಡಬ್ಬಗಳಲ್ಲಿದ್ದ ನಗದು ಹಾಗೂ ಅರ್ಧ ಕೆಜಿ ಬೆಳ್ಳಿ ಕಳವು ಮಾಡಲಾಗಿತ್ತು.

ಆರೋಪಿಗಳಲ್ಲಿ ಅತುಲ್‌ ಮಹಾದೇವ್‌ ಬಾಂಗ್ನೆಯನ್ನು ಗೋವಾದಲ್ಲಿ ಬಂಧಿಸಿದ್ದು, ಸಂದೀಪ್‌ ಚಂದ್ರಕಾಂತ್‌ ಶಿಂಧೆಯನ್ನು ಬೈಂದೂರಿನಲ್ಲಿ ಸೆರೆಹಿಡಿಯಲಾಗಿದೆ.  ಕಳವುಗೈದ 22 ಲಕ್ಷ ರೂಪಾಯಿಯಲ್ಲಿ 15 ಸಾವಿರವನ್ನು ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಕಳವು ಮಾಡಿದ್ದ ಅರ್ಧ ಕೆಜಿ ಬೆಳ್ಳಿಯನ್ನು ಕೂಡಾ ಸ್ವಾಧೀನ ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next