Advertisement

ನೈಜಿರಿಯಾ ಪ್ರಜೆಗಳ ಬಂಧನ

11:23 AM Jul 22, 2017 | |

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ಯಾಟ್ರಿಕ್‌ (39) ಮತ್ತು ಮಕುಕೋ ಚುವೋಕಾ (29) ಬಂಧಿತರು. ಆರೋಪಿ ಮಕುಕೋ ಬಿಸ್‌ನೆಸ್‌ ವೀಸಾದಡಿ ಭಾರತಕ್ಕೆ ಬಂದ್ದು, ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆ. ಕೊತ್ತನೂರು ಸಮೀಪದ ಶಿವಾಲೆ ಬಸ್‌ ನಿಲ್ದಾಣ ಬಳಿ ಕೊಕೇನ್‌ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ.

Advertisement

ಈ ಮೊದಲು ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ಮಕುಕೋನನ್ನು ಬಂಧಿಸಿದ್ದರು. ಅಲ್ಲದೆ, ರಾಮಮೂರ್ತಿ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ದಂಧೆ ಮುಂದುವರೆಸಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

ಆರೋಪಿಯಿಂದ 5ಗ್ರಾಂ ಕೊಕೇನ್‌ ಸೇರಿ 1.5 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಮತ್ತೂಂದು ಪ್ರಕರಣದಲ್ಲಿ ಕೆ.ಆರ್‌.ಪುರದ ಟಿ.ಸಿ.ಪಾಳ್ಯ ರಸ್ತೆಯ ರಿಲಾಯನ್ಸ್‌ ಫ್ರೆಶ್‌ಮಾಲ್‌ ಎದುರು ಕೊಕೇನ್‌ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಪ್ಯಾಟ್ರಿಕ್‌ನನ್ನು ಕೆ.ಆರ್‌.ಪುರ ಠಾಣೆ ಬಂಧಿಸಿ, 50 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮವಾಗಿ ನೆಲೆಸಿದವನ ಸೆರೆ: ವೀಸಾ ಅವಧಿ ಮುಗಿದಿದ್ದರೂ ದೇಶದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದ್ದ ನೈಜಿರಿಯಾದ ಇಮುಯಲ್‌ ಉಜ್ವಾನ ವೋಕ್ರೋಂನನ್ನು ಬಂಧಿಸಲಾಗಿದೆ. ಈತನಿಂದ ಮೂವರು ಮೊಬೈಲ್‌ ಹಾಗೂ 2250 ರೂ. ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next