ಮುಳಬಾಗಿಲು: ತಾಲೂಕಿನಲ್ಲಿ ನಡೆದಿದ್ದ ನಾಲ್ಕು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಅಂತರರಾಜ್ಯ ಕುಖ್ಯಾತ ಕಳ್ಳನನ್ನು ಗ್ರಾಮಾಂತರ ಪೊಲೀಸರು ಬಂಧಿಸಿ, ಆತನಿಂದ 12.15 ಲಕ್ಷ ರೂ. ಮೌಲ್ಯದ 405 ಗ್ರಾಂ ಚಿನ್ನಾಭರಣ ಮತ್ತು 300 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ವಿ.ಕೋಟೆ ಬಳಿಯ ತೋಟಕನಮು ಬಾಬು(40)ಬಂಧಿತ ಆರೋಪಿ. ಈತ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿವಿಧ ಕಳವು ಪ್ರಕರಣ ಸೇರಿದಂತೆ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಎಸ್ಪಿ ರೋಹಿಣಿ ಕಟೋಚ್ ಸೆಪಟ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಉಮೇಶ್, ಸಿಪಿಐ ಸುಧಾಕರ್‌ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಬಿ.ಟಿ.ಗೋವಿಂದ್, ಸಿಬ್ಬಂದಿ ಲಿಂಗಯ್ಯ, ಸಿ.ಜಿ.ನಾರಾಯಣ ಸ್ವಾಮಿ, ಗುರುಪ್ರಸಾದ್, ಗೋವಿಂದರಾಜ್, ನಾಗರಾಜ್, ಎಂ.ರಮೇಶ್, ಇ.ವಿ.ಮಂಜುನಾಥ್, ಶಂಕರ್, ಶೇಖರ್, ಮಂಜುನಾಥ್, ಸತ್ಯನಾರಾಯಣಸಿಂಗ್, ಶ್ರೀನಿವಾಸ್, ಪ್ರಶಾಂತ್, ಲಕ್ಷ್ಮೀನಾರಾಯಣ, ರಾಜೇಂದ್ರರೆಡ್ಡಿ, ಕರುಣಸಿಂಗ್ ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿ ಕೊಂಡಿದ್ದಾನೆ. ಸಹಚರರಾದ ಅಡುಗೆ ಶಂಕರ್, ನದೀಮ್, ಜಬೀ ಅವರೊಂದಿಗೆ ಸೇರಿ ತಾಲೂಕಿನ ಉತ್ತನೂರು, ತಾಯಲೂರು, ಮಲ್ಲನಾಯಕನಹಳ್ಳಿ, ಹಾಗೂ ಬೆಂಗಳೂರಿನ ಚಂದಾಪುರ, ಗೌರಿಬಿದನೂರು ಟೌನ್, ವಿ.ಕೋಟೆಗಳಲ್ಲಿ ಕಳುವು ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್ಪಿ ರೋಹಿಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.