ಚಿತ್ರದುರ್ಗ: ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಹಾಗೂ ಬೆಂಗಳೂರು ಮೂಲದ ಇಕ್ಷುಧವಾ, ವಾಸುದೇವ ಶೆಟ್ಟಿ, ಪ್ರತಾಪ್ ರತ್ನಸ್ವಾಮಿ ಹಾಗೂ ವಿನೋದ್ ಬಂಧಿತರು.
ಹಿರಿಯೂರು ತಾಲೂಕಿನ ಗೌನಹಳ್ಳಿ ಬಳಿ ಕಾಡಿನಂಚಿನಲ್ಲಿ ಬೇಟೆಗಾರರು ಇರುವ ಮಾಹಿತಿ ಬಂದಿದ್ದು, ಖಚಿತಪಡಿಸಿಕೊಳ್ಳಲು ಎರಡು ಬಾರಿ ವೀಕ್ಷಣೆ ಮಾಡಿ ಖಚಿತಪಡಿಸಿಕೊಂಡು ದಾಳಿ ಮಾಡಿ ಬಂಧಿಸಲಾಗಿದೆ.
ಇದನ್ನೂ ಓದಿ:“ಬೂದು ಪಟ್ಟಿ’ಯಿಂದ ಹೊರಬರಲು ಹರಸಾಹಸ: ಅಮೆರಿಕ ಪುಸಲಾಯಿಸಲು ಪಾಕ್ “ಲಾಬಿ ದಾರಿ’
ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ ಎಚ್.ಜಿ. ರಘುರಾಮ್, ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರಿಹರ್ಷ ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಬೇಟೆಗಾರರಿಂದ ನಾಲ್ಕು ಅತ್ಯಾಧುನಿಕ ಬಂದೂಕುಗಳು, ಒಂದು ಪಿಸ್ತೂಲ್, ಬೊ ಆ್ಯಂಡ್ ಆ್ಯರೋ, ಹೈ ಫ್ಲಾಶ್ ಲೈಟ್ ಗಳು, ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು ಹಾಗೂ ಎರಡು ಮಹಿಂದ್ರ ಜೀಪ್ ಹಾಗೂ ಮಹಿಂದ್ರ ಸ್ಕಾರ್ಪಿಯೋ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ