Advertisement

ಆಂಧ್ರದ ಅಂತಾರಾಜ್ಯ ಕಳ್ಳನ ಬಂಧನ

01:36 PM Jun 28, 2019 | Suhan S |

ಹುಬ್ಬಳ್ಳಿ: ಜನರನ್ನು ಯಾಮಾರಿಸಿ ಹಣ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಇಲ್ಲಿನ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಆಂಧ್ರ ಮೂಲದ ಗಿರಿಧರ ದುದೇಕುಲಾ (27) ಎಂಬುವನನ್ನು ಬಂಧಿಸಿದ್ದು, ಆತನಿಂದ 9.20 ಲಕ್ಷ ರೂ. ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ದಾಜಿಬಾನ ಪೇಟೆಯ ಲಕ್ಷ್ಮೀ ದೇವಸ್ಥಾನ ಬಳಿ ಸಂಶಯಾಸ್ಪದ ಮೇಲೆ ನಿಂತಿರುವ ಬಗ್ಗೆ ಖಚಿತ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಡವರಿಸಿದ್ದನ್ನು ಕಂಡು ಠಾಣೆಗೆ ಕರೆದುಕೊಂಡು ಬಂದು ಬ್ಯಾಗ್‌ ಪರಿಶೀಲಿಸಿದಾಗ ಹಣ ಇರುವುದು ಗೊತ್ತಾಗಿದೆ.

ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪ್ರೊದತ್ತೂರಿನ ಶ್ರೀ ಚೇತನ ಆಂಗ್ಲ ಮಾಧ್ಯಮ ಶಾಲೆಯ ಹಣವನ್ನು ಬ್ಯಾಂಕಿಗೆ ಜಮಾ ಮಾಡಲು ಹೋದ ಸಂದರ್ಭದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ ಹಣ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪಿಎಸ್‌ಐ ಬಿ.ಕೆ.ಹೂಗಾರ, ಸಿಬ್ಬಂದಿಯಾದ ಎಸ್‌.ಎಸ್‌.ಪಾಂಡೆ, ಎಂ.ವೈ.ಯಕ್ಕಡಿ, ವಿ.ಆರ್‌.ಸುರವೆ, ಬಿ.ಎಂ.ಹುದ್ದೇರಿ, ಎಸ್‌.ಎಸ್‌.ಹೆದ್ದೇರಿ, ಎಸ್‌.ಎಸ್‌. ಚವ್ಹಾಣ, ಎಂ.ಬಿ.ಧನಿಗೊಂಡ, ಕೆ.ಎನ್‌.ನೆಲಗುಡ್ಡ, ಶಂಕರ ಕಲ್ಲಾಪುರ, ಬಿ.ಎಫ್‌. ಸುಣಗಾರ, ಮಂಜು ಕಮತದ, ಮಾಬುಸಾಬ್‌ ಮುಲ್ಲಾ, ದಯಾನಂದ ಗುಂಡಗೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next