Advertisement
ನೇಸರಗಿ ಗ್ರಾಮದ ರೈತರಾದ ದೊಡ್ಡಗೌಡ ಬಾಬಾಗೌಡ ಪಾಟೀಲ ಇವರ ಮದನಭಾಂವಿ ಗ್ರಾಮದ ಜಮೀನಿನಲ್ಲಿರುವ ಶೆಡ್ಡಿನಲ್ಲಿ ರೂ.1 ಲಕ್ಷ 25 ಸಾವಿರ ಮೌಲ್ಯದ ಸೋಯಾಬಿನ ಹುರುಳಿ ತುಂಬಿದ 22 ಚೀಲಗಳನ್ನು ನವ್ಹೆಂಬರ 25 ರಂದು ರಾತ್ರಿ ಕಳ್ಳರು ಶೆಡ್ಡಿನ ಕೀಲಿ ಮುರಿದು ದೋಚಿದ್ದರು. ಈ ಕುರಿತು ಜಮೀನಿನ ಮಾಲೀಕ ನ.26 ರಂದು ನೇಸರಗಿ ಪೊಲೀಸ ಠಾಣೆಗೆ ಕಳ್ಳತನವಾದ ಬಗ್ಗೆ ದೂರು ನೀಡಿದ್ದರು. ದೂರು ಆದರಿಸಿದ ತನಿಖೆ ನಡೆಸಿದ ಪೋಲಿಸರು ಆರೋಪಿತರಾದ ನೇಸರಗಿ ಗ್ರಾಮದ ತುಕಾರಾಮ ಫಕೀರಪ್ಪ ಹಂಚಿನಮನಿ, ರಾಮಚಂದ್ರ ಅಪ್ಪಣ್ಣ ವಡ್ಡಯಲ್ಲಪ್ಪಗೋಳ, ಫಕೀರಪ್ಪ ಗಂಗಪ್ಪ ಹಂಚಿನಮನಿ, ಶಂಕರ ಹನುಮಂತಪ್ಪ ಹಂಚಿನಮನಿ ಇವರನ್ನು ಪೋಲಿಸರು ಬಂದಿಸಿದ್ದಾರೆ. ಆರೋಪಿತರು ಸೋಯಾಬಿನ್ ಚೀಲಗಳನ್ನು ನ.25 ರಂದು ಕಳ್ಳತನ ಮಾಡಿ ಮಾರಾಟ ಮಾಡಿದ್ದರು. ಈ ಕುರಿತು ಪೊಲೀಸರ ಚಾಣಾಕ್ಷತೆಯಿಂದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿತರಿಂದ 1 ಲಕ್ಷ 25 ಸಾವಿರ ರೂ.ಮೌಲ್ಯದ 22 ಚೀಲ, 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, ಇನ್ನೊಂದು ಪ್ರಕರಣದಲ್ಲಿ 45 ಸಾವಿರ ರೂ. ಮೌಲ್ಯದ 10 ಗ್ರಾಮ ತೂಕದ ಬಂಗಾರ ಚೈನ್, ಮತ್ತೊಂದು ಪ್ರಕರಣದಲ್ಲಿ 50 ಸಾವಿರ ಮೌಲ್ಯದ 6 ಕ್ವಿಂಟಲ್ 50 ಕೆಜಿ ಸೋಯಾಬಿನ್ ಚೀಲಗಳು, ಮತ್ತೊಂದು ಪ್ರಕರಣದಲ್ಲಿ 50 ಸಾವಿರ ಮೌಲ್ಯದ 15 ಸೋಯಾಬಿನ್ ಚೀಲಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
Related Articles
Advertisement