Advertisement

ವಂಚಕ ಮಹಿಳೆಯ ಬಂಧನ

04:14 PM Oct 28, 2017 | Team Udayavani |

ಬೆಂಗಳೂರು: ಪ್ರತಿಷ್ಠಿತ ಕಂಪೆನಿಯ ಮುಖ್ಯಸ್ಥೆ ಎಂದು ಹೇಳಿಕೊಂಡು ಹತ್ತಾರು ಮಂದಿಗೆ ವಂಚಿಸಿದಲ್ಲದೇ, ಪತಿಯ ಬ್ಯಾಂಕ್‌ ಖಾತೆ ಮೂಲಕವೇ  ವ್ಯವಹಾರ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್‌ ಮೂಲದ ಆಂಡ್ರಿಲಾ ದಾಸ್‌ ಗುಪ್ತಾ (29) ಬಂಧಿತೆ.

Advertisement

ವಿವಿಧ  ರಾಜ್ಯಗಳ ರಾಜಧಾನಿ ಗಳಲ್ಲಿರುವ ಪ್ರತಿಷ್ಠಿತ ಕಂಪೆನಿಗಳ ವ್ಯಕ್ತಿಗಳ ಈ-ಮೇಲ್‌ ಐಡಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ಅಸಲಿ ವ್ಯಕ್ತಿಯಂತೆ ಬಿಂಬಿಸಿ  ಇದುವರೆಗೂ 48 ಲಕ್ಷ ರು. ವಂಚಿಸಿದ್ದಾರೆ. ಜಾರ್ಖಂಡ್‌ ಮೂಲದ ಆಂಡ್ರಿಲಾದಾಸ್‌ ಗುಪ್ತಾ ಉತ್ತರ ಪ್ರದೇಶ ಮೂಲದ ಶಯಕ್‌ಸೇನ್‌ ಎಂಬಾತನನ್ನು ಕೆಲ  ವರ್ಷಗಳ ಹಿಂದೆ ವಿವಾಹವಾಗಿದ್ದರು. 

ಆದರೆ, ಆಕೆ ನಗರದ ಸಿ.ವಿ.ರಾಮನ್‌ನಗರದಲ್ಲ ನೆಲೆಸಿದ್ದು, ಪತಿ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ತನ್ನ ವಿಲಾಸಿ ಜೀವನಕ್ಕಾಗಿ ಆಕೆ, ಕೆಲ ಯಶಸ್ವಿ  ಉದ್ಯಮಿ ಎಂದು ಬಿಂಬಿಸಿಕೊಂಡಿದ್ದಾಳೆ. ಜತೆಗೆ ಕಂಪೆನಿಯೊಂದರ ಮುಖ್ಯಸ್ಥೆ ಎಂದು ವೆಬ್‌ಸೈಟ್‌  ವೊಂದರಲ್ಲಿ ಹಾಕಿಕೊಂಡಿದ್ದು, ಈ ವೇಳೆ ಅಥಮಸ್‌ ಕಂಪೆನಿಯ ಮಾಲೀಕ ಅಶೋಕ್‌ ಕಿನಿ ಎಂಬಾತನನ್ನು ಪರಿಚಯಸಿ ಕೊಂಡು 16 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿ ಚೆಕ್‌ ನೀಡಿದ್ದಳು.

ಇದಾದ ಕೆಲ ದಿನಗಳ ಬಳಿಕ ಆತನಿಂದ ಪತಿಯ ಅನಾರೋಗ್ಯವಿದೆ ಎಂದು ಹೇಳಿ 76 ಲಕ್ಷ ಹಣವನ್ನು  ಪತಿಯ ಖಾತೆಗೆ ಹಾಕಿಸಿಕೊಂಡಿದ್ದಾಳೆ. ಈ ಸಂಬಂಧ ದೂರು ದಾಖಲಾಗಿದ್ದು, ಬ್ಯಾಂಕ್‌ ಖಾತೆ ನಿರ್ವಹಣೆ ಮಾಡುತ್ತಿದ್ದ ಈಕೆಯ ಪತಿ ಶಯಕ್‌ಸೇನ್‌ನನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿತೆಯ ಕೃತ್ಯ ಬೆಳಕಿಗೆ ಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next