Advertisement

ದೋಚಲು ಸನ್ನದ್ಧರಾದ 7 ದರೋಡೆಕೋರರ ಬಂಧನ

12:37 PM Oct 29, 2017 | |

ಹುಣಸೂರು: ದರೋಡೆ ನಡೆಸಲು ಸನ್ನದ್ದರಾಗಿದ್ದ ದರೋಡೆಕೋರರ ತಂಡದ 7 ಮಂದಿಯನ್ನು  ಕಲ್‌ಬೆಟ್ಟ ಬಳಿ ಹುಣಸೂರು  ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬಂಧಿಸಿರುವ ಘಟನೆ ಶುಕ್ರವಾರ ಮದ್ಯರಾತ್ರಿ ನಡೆದಿದೆ.

Advertisement

ದರೋಡೆಕೋರರಾದ ಕೊಡಗಿನ ಕಕ್ಕಬ್ಬೆ ಬಳಿಯ ಕುಂಜಿನ ಗ್ರಾಮದ  ಸಮೀರ್‌ ಉ. ಅಬ್ದುಲ್‌ ಸಮೀರ್‌, ಇದೇ ಗ್ರಾಮದ ನಾಸೀರ್‌ ಪುತ್ರ ಅಸ್ಕರ್‌, ನಾಪೊಕ್ಲು ಬಳಿಯ ಕೊಳಕೇರಿ ಗ್ರಾಮದ ಸೆ„ನುದ್ದೀನ್‌, ಕುಂಜಲ ಗ್ರಾಮದ ಪಿ.ಕೆ.ಜಾಫರ್‌ ಷರೀಪ್‌ ಪುತ್ರ ಮಹಮದ್‌ ಸಮೀರ್‌,  ಶ್ರೀರಂಗಪಟ್ಟಣ ತಾಲೂಕು ಬೊಮ್ಮಲೂರು ಅಗ್ರಹಾರದ ಆಟೋ ಚಾಲಕ ಮಹದೇವ,

ಮೈಸೂರು ನಗರದ ಮಂಡಿ ಮೊಹಲ್ಲಾ ಕೈಲಾಸಪುರಂನ ಗಾರೆ ಕೆಲಸಗಾರ ಶ್ರೀನಿವಾಸ, ಗಾಂಧಿ ನಗರದ ಹಾಲಿನ ವಾಹನ ಚಾಲಕ ಭೀಮರಾಜ್‌ ಬಂದಿತರು. ಮತ್ತಿಬ್ಬರು ಪರಾರಿಯಾಗಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ತಿಳಿಸಿದರು.

ಕೃತ್ಯಕ್ಕೆ ಬಳಸುತ್ತಿದ್ದ ಒಂದು ಸ್ಕಾರ್ಫಿಯೋ ವಾಹನ, ಒಂದು ನಕಲಿ ಪಿಸ್ತೂಲ್‌, ಮೊಬೈಲ್‌ಗ‌ಳು, ದೊಣ್ಣೆಗಳು, ಸೂð ಡ್ರೆŒ„ವರ್‌, ಜಾಕ್‌ರಾಡ್‌, ಸುತ್ತಿಗೆ, ಕಾರದಪುಡಿಯನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಶುಕ್ರವಾರ ರಾತ್ರಿ ಮೈಸೂರು-ವಿರಾಜಪೇಟೆ, ಕೇರಳಾ ಹೆದ್ದಾರಿಯ  ತಾಲೂಕಿನ ಕಲ್‌ಬೆಟ್ಟದ ಜಂಕ್ಷನ್‌ ಬಳಿ ಸ್ಕಾರ್ಪಿಯೋ ವಾಹನ ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ  ಹೈವೇ ಪೆಟ್ರೋಲಿಂಗ್‌ ವಾಹನದ ಪೊಲೀಸರಿಂದ ಬಂದ ಖಚಿತ ಮಾಹಿತಿ ಮೇರೆಗೆ, ಎ.ಎಸ್‌.ಪಿ.ರುದ್ರಮುನಿ, ಡಿವೈಎಸ್‌ಪಿ ಭಾಸ್ಕರ್‌ ರೈ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಸಿಬ್ಬಂದಿ ಮದ್ಯರಾತ್ರಿ

Advertisement

ಕಾರ್ಯಾಚರಣೆ ವೇಳೆ ಆರೋಪಿಗಳು ಸಿನಿಮೀಯ ಮಾದರಿಯಲ್ಲಿ ನಕಲಿ ಪಿಸ್ತೂಲ್‌ ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಚಾಕಚಕ್ಯತೆಯಿಂದ ಕಲ್‌ಬೆಟ್ಟ ಬಳಿ ವಾಹನವನ್ನು ಸುತ್ತುವರಿದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಸಂಚಿನ ಸರದಾರ ಸಮೀರ: ಕೊಡಗಿನ ಕುಂಜಿನ ನಿವಾಸಿ ತಂಡದ ಮುಖ್ಯಸ್ಥ ಸಮೀರ್‌ ಉ ಅಬ್ದುಲ್‌ ಸಮೀರ್‌ ಪಿರಿಯಾಪಟ್ಟಣ ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ತಿಂಗಳ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ. ಇದೀಗ ಮತ್ತೆ ಹಿಂದಿನ ಚಾಳಿ ಬಿಡದ ಆತ ಅಸ್ಕರ್‌ನನ್ನು ಹಣ ಸಿಗುವುದೆಂದು ಪುಸಲಾಯಿಸಿ, ಆತನ ಮನೆಯ ಸ್ಕಾರ್ಪಿಯೋ ವಾಹನವನ್ನೇ ಕೃತ್ಯಕ್ಕೆ ಬಳಸಲು ಸಂಚು ರೂಪಿಸಿ ಕರೆಸಿಕೊಂಡಿದ್ದ.

ಮೈಸೂರಿನ ಭೀಮರಾಜ್‌, ಶ್ರೀನಿವಾಸ್‌  ಹಾಗೂ ಬೊಮ್ಮಲೂರು ಅಗ್ರಹಾರದ ಮಹದೇವರಿಗೂ ಯಾವುದೇ ಹವಾಲ ಹಣ ಬರುತ್ತಿದೆ, ದರೋಡೆ ನಡೆಸೋಣವೆಂದು ಕರೆಸಿಕೊಂಡಿದ್ದ. ಹಾಗೂ ಸ್ಥಳೀಯ ಸ್ನೇಹಿತರನ್ನೇ ಕೃತ್ಯಕ್ಕೆ ಬಳಸಿಕೊಂಡಿದ್ದನೆಂದು ತಿಳಿಸಿರುವ ಎಸ್‌ಪಿ ರವಿ ಡಿ ಚನ್ನಣ್ಣನವರ ಹುಣಸೂರು ಪೊಲೀಸರನ್ನು ಅಭಿನಂದಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎ.ಎಸ್‌.ಐಗಳಾದ ಸುರೇಂದ್ರಜಿತ್‌, ಲಿಂಗರಾಜ ಅರಸ್‌, ಸಿಬ್ಬಂದಿ ದಿನೇಶ, ರವಿ, ಮಹೋಹರ, ಮಹದೇವ, ಲೋಕೇಶ್‌, ಪ್ರಸಾದ್‌, ರಾಜರತ್ನಂ, ಲಿಖೀತ್‌, ಸುರೇಶ, ಸಂತೋಷ, ನಾಗರಾಜ, ಯೋಗೇಶ, ನಾಗರಾಜ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next