Advertisement

ತುಳು ಲಿಪಿಯ ಸಂಸ್ಕೃತ ಶಾಸನ ಪತ್ತೆ

11:34 PM Dec 12, 2019 | mahesh |

ಉಳ್ಳಾಲ: ಮಂಗಳೂರು ತಾಲೂಕಿನ ಮಂಜನಾಡಿಯಲ್ಲಿರುವ ಮಲರಾಯ ಬಂಟ ದೈವಸ್ಥಾನದಲ್ಲಿ ಅಪರೂಪದ ತುಳು ಶಾಸನವೊಂದು ಪತ್ತೆಯಾಗಿದೆ. ಧ್ವಜಸ್ತಂಭದ ಬುಡದಲ್ಲಿರಿಸಿದ್ದ ಶಾಸನವನ್ನು ಅಧ್ಯಯನ ನಡೆಸಿರುವ ಶಾಸನ ತಜ್ಞರು ಇದು ತುಳು ಲಿಪಿಯನ್ನು ಬಳಸಿ ಬರೆದ ಸಂಸ್ಕೃತ ಭಾಷೆಯ ಶಾಸನ ಎಂದು ಗುರುತಿಸಿದ್ದಾರೆ.

Advertisement

ದೈವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಶಂಕರ ಕುಂಜತ್ತೂರು ಅವರು ಇದನ್ನು ಗುರುತಿಸಿ ನೀಡಿದ ಮಾಹಿತಿಯಂತೆ ಶಾಸನ ತಜ್ಞರಾದ ಪ್ರೊ| ಎಸ್‌.ಎ. ಕೃಷ್ಣಯ್ಯ, ಡಾ| ರಾಧಾಕೃಷ್ಣ ಬೆಳ್ಳೂರು,ಸುಭಾಷ್‌ ನಾಯಕ್‌ ಶಾಸನದ ಅಧ್ಯಯನ ನಡೆಸಿದರು. ತುಳು ಲಿಪಿಯನ್ನು ಬಳಸಿ ಬರೆದ ತುಳು, ಕನ್ನಡ ಭಾಷೆಯ ಶಾಸನಗಳು ಈಗಾಗಲೇ ಹಲವೆಡೆ ಪತ್ತೆಯಾಗಿವೆ. ತುಳು ಲಿಪಿಯನ್ನು ಬಳಸಿ ಬರೆದ ಸಂಸ್ಕೃತ ಶಾಸನ ಬಲು ಅಪರೂಪ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿರುವ ಲಿಪಿ ಹೆಚ್ಚು ಸವೆದಿಲ್ಲ. ಇದು ಶಾಲಿವಾಹನ ಶಕಕ್ಕೆ ಸೇರಿರುವ ಸಾಧ್ಯತೆ ಇದ್ದು ಕ್ರಿ.ಶ.1326ಕ್ಕೆ ಸರಿ ಹೊಂದುತ್ತದೆ ಎಂದು ರಾಧಾಕೃಷ್ಣ ಬೆಳ್ಳೂರು ಅಭಿಪ್ರಾಯಿಸಿದ್ದಾರೆ. ಇದರಲ್ಲಿ ಬಲ್ಲಾಳ, ನಾಗೇಶ್ವರ, ಅರ್ಕ, ನಾಗಬೆರ್ಮ ಮುಂತಾದ ಉಲ್ಲೇಖಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next