Advertisement
ಸೀರೆ ಬದಲು ಪ್ಯಾಂಟ್ ಮಹಿಳಾ ಪೊಲೀಸರಿಗೆ ಸೀರೆ ಧರಿಸಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಇದರಲ್ಲಿ ಬದಲಾವಣೆ ತರಬೇಕೆಂಬ ಸಲಹೆ ಹಿನ್ನೆಲೆಯಲ್ಲಿ ಪ್ಯಾಂಟ್, ಶರ್ಟ್ ಸಮವಸ್ತ್ರದ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು. ಪೊಲೀಸರ ಭಡ್ತಿ, ವೇತನ, ಭತ್ತೆ ಸಂಬಂಧ ಔರಾದ್‌ಕರ್ ಸಮಿತಿ ಶಿಫಾರಸುಗಳ ಅನುಷ್ಠಾನ ಜಾರಿ ಯಲ್ಲಿದೆ. 12,000 ಬ್ಯಾಕ್‌ಲಾಗ್ ಹುದ್ದೆ ಭರ್ತಿಗೊಳಿಸಲಾಗಿದೆ. 2,200 ವೇತನ ಭತ್ತೆ ಶಿಫಾರಸು ಅನುಷ್ಠಾನಗೊಳಿಸಲಾಗಿದೆ. ವೇತನ ಪರಿಷ್ಕರಣೆ ಅಂಶವನ್ನು 6ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಲಾಗುವುದು. ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳ ಲಾಗುವುದು. ಗೌರಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟದಲ್ಲಿದೆ ಎಂದು ಗೃಹ ಸಚಿವರು ಉತ್ತರಿಸಿದರು.
ಚುನಾವಣೆಯಿಂದ ಪೊಲೀಸರ ವರ್ಗ ವಿಳಂಬವಾಗಿದೆ. ಚುನಾವಣಾ ಆಯೋಗದ ಅನುಮತಿ ಪಡೆದಿದ್ದು, ಒಂದೆರಡು ದಿನಗಳಲ್ಲಿ ಪೊಲೀಸರ ವರ್ಗಾವಣೆ ಪಟ್ಟಿ ಪ್ರಕಟಗೊಳ್ಳಲಿದೆ ಎಂದರು. ಅತಿಥಿಗಳ ಊಟಕ್ಕೆ ಲೆಕ್ಕಾಚಾರ ಸರಿಯೇ? ಬಿಜೆಪಿಗೆ ಪರಂ ತಿರುಗೇಟು
ಸಮ್ಮಿಶ್ರ ಸರಕಾರದ ಪದಗ್ರಹಣದ ವೇಳೆ ಗಣ್ಯರ ಆತಿಥ್ಯದ ವೆಚ್ಚದ ಕುರಿತು ಬಿಜೆಪಿ ಟೀಕೆಗೆ ಡಾ| ಜಿ. ಪರಮೇಶ್ವರ್, “ಮನೆಗೆ ಬಂದ ಅತಿಥಿಗಳು ಊಟ ಮಾಡಿದ್ದನ್ನು ಲೆಕ್ಕ ಹಾಕುತ್ತಾರೆಯೇ?’ ಎಂಬ ಪ್ರಶ್ನೆಯ ತಿರುಗೇಟು ನೀಡಿದ್ದಾರೆ. ಅತಿಥಿಗಳ ಉಪಚಾರದ ಖರ್ಚನ್ನು ಬಿಜೆಪಿಯವರು ವಿವಾದ ಮಾಡುತ್ತಿ ದ್ದಾರೆ. ಇದು ಬಿಜೆಪಿಯವರ ಸಂಕುಚಿತ ಮನಃಸ್ಥಿತಿಯ ಪ್ರತಿಬಿಂಬ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಏಕೆ ಆಯಿತು, ಕಾರಣಗಳೇನು ಎಂಬ ಆತ್ಮವಿಮರ್ಶೆ ಮಾಡುತ್ತಿದ್ದೇವೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಇದನ್ನು ನಡೆಸಲಾಗುತ್ತಿದೆ. ಲೋಪ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ನಗರ ಸœಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಈಗಾಗಲೇ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ ಎಂದರು.
Related Articles
ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಘೋಷಣೆಗೂ ಸರಕಾರ ಬದ್ಧವಾಗಿದೆ, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 4 ವರ್ಷಗಳಲ್ಲಿ ಹಂತಹಂತವಾಗಿ ಅನುಷ್ಠಾನಗೊಳಿಸುತ್ತೇವೆ. ಕೇಂದ್ರವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುತ್ತಿದ್ದರೆ ನಮ್ಮ ಹೊರೆ ಕಡಿಮೆ ಯಾಗುತ್ತಿತ್ತು. ಆದರೆ ಪ್ರಧಾನಿಗೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದು ಬೇಕಾಗಿಲ್ಲ ಎಂದರು. ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ವಿಜಯ ಕುಮಾರ್ ಶೆಟ್ಟಿ , ಮೇಯರ್ ಭಾಸ್ಕರ್ ಕೆ., ಇಬ್ರಾಹಿಂ, ಮುಖಂಡರಾದ ಜಿ.ಎ. ಬಾವಾ, ಯು.ಕೆ. ಮೋನು ಉಪಸ್ಥಿತರಿದ್ದರು.
Advertisement
ಸಿದ್ದರಾಮಯ್ಯ ಪತ್ರ ಬರೆಯುವುದರಲ್ಲಿ ತಪ್ಪಿಲ್ಲಸಿಎಂಗೆ ಸಿದ್ದು ಪತ್ರ ಕುರಿತು ಮಾತನಾಡಿದ ಡಾ| ಜಿ. ಪರಮೇಶ್ವರ್, ಸಿದ್ದರಾಮಯ್ಯ ಜವಾಬ್ದಾರಿಯುತ ನಾಯಕ. ಕೆಲವು ಮುಖ್ಯ ಅಂಶಗಳನ್ನು ಸರಕಾರಕ್ಕೆ ತಿಳಿಸುವುದರಲ್ಲಿ ತಪ್ಪಿಲ್ಲ. ಅದನ್ನು ದೊಡ್ಡ ವಿಷಯವಾಗಿ ಮಾಡಬೇಕಿಲ್ಲ ಎಂದರು. ತನಿಖೆ ದೃಷ್ಟಿಯಿಂದ ತಡೆ
ಶೀರೂರು ಶ್ರೀಗಳ ಸಾವು ವಿಶೇಷ ಪ್ರಕರಣ ವಾಗಿದ್ದು, ತನಿಖಾ ಹಂತದಲ್ಲಿದೆ. ಶ್ರೀಗಳ ಆರಾಧನೆಗೆ ಪೊಲೀಸರು ಯಾಕೆ ಅನುಮತಿ ನೀಡಿಲ್ಲ ಎಂಬುದು ಗೊತ್ತಿಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ಸಾಕ್ಷ್ಯ ನಾಶವಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಾ| ಪರಮೇಶ್ವರ್ ಉತ್ತರಿಸಿದರು.